Advertisement
ತಾಲೂಕಿನ ಸತ್ತೇಗಾಲ ಗ್ರಾಮದ ತಮ್ಮ ನಿವಾಸದ ಆವರಣದಲ್ಲಿ ಗ್ರಾಮದ ಎಲ್ಲಾ ಜನಾಂಗದ ಮುಖಂಡರ ಸಭೆಯಲ್ಲಿ ಮಾತನಾಡಿ, ನಾವು ಗ್ರಾಮದಲ್ಲಿರುವ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಒಳ್ಳೆಯ ಉನ್ನತ ಹುದ್ದೆಯಲ್ಲಿ ಇದ್ದೇವೆ. ನಾವು ವಿದ್ಯಾ ಭ್ಯಾಸ ಮಾಡಿದ ಶಾಲೆಯನ್ನು ಎಂದಿಗೂ ಮರೆಯ ಬಾರದು ಎಂದರು.
Related Articles
Advertisement
ಕಲ್ಯಾಣ ಮಂಟಪ ನಿರ್ಮಿಸಿ: ಮುಖಂಡ ಮುಕುಂದ ವರ್ಮ ಮಾತನಾಡಿ, ಸತ್ತೇಗಾಲ ಗ್ರಾಮದ ದೊಡ್ಡ ಗ್ರಾಮವಾಗಿದ್ದು, ಹಲವಾರು ಸಮಸ್ಯೆಗಳಿಂದ ಕೂಡಿದ್ದು, ಒಬ್ಬರಿಗೊಬ್ಬರ ವೈಮನಸ್ಸಿನಿಂದ ಗ್ರಾಮವು ಅಭಿವೃದ್ಧಿ ಕಾಣದೆ ಕುಂಠಿತವಾಗಿದೆ. ಗ್ರಾಮದ ಜಮೀ ನುಗಳನ್ನು ಮಾರಾಟ ಮಾಡಲು ಮತ್ತು ಖರೀದಿಸಲು ಸರ್ಕಾರದ ಅನುಮತಿ ಇಲ್ಲದೆ ರೈತರು ಸುಮಾರು ವರ್ಷಗಳಿಂದ ಸಂಕಷ್ಟದಲ್ಲಿ ಇರುವುದರಿಂದ ಈ ಸಂಬಂಧ ಹೈಕೋರ್ಟ್ ದಾವೆ ಹೂಡಲು ನಾನು ಸ್ವಂತ ಖರ್ಚು ಮಾಡಿ ವಕೀಲರನ್ನು ನೇಮಿಸಲಾಗುವುದು ಇದಕ್ಕೆ ಗ್ರಾಮದ ಮುಖಂಡರು ಸಹಕಾರ ನೀಡಬೇ ಕೆಂದ ಅವರು, ಗ್ರಾಮದಲ್ಲಿ ಮದುವೆ ಮಾಡಬೇಕಾದರೆ ಪಟ್ಟಣ ಮತ್ತು ನಗರಗಳಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ ಮದುವೆ ಮಾಡುತ್ತಿದ್ದಾರೆ. ಗ್ರಾಮದಲ್ಲೇ ಒಂದು ಕಲ್ಯಾಣ ಮಂಟಪವನ್ನು ನಿರ್ಮಾಣ ಮಾಡ ಲು ಮುಖಂಡರು ಮುಂದಾಗಬೇಕೆಂದು ಹೇಳಿದರು.
ಸಂಪೂರ್ಣ ಬೆಂಬಲ: ಗ್ರಾಮದ ಮುಖಂಡರು ಶಾಲೆಯನ್ನು ಅಭಿವೃದ್ಧಿಪಡಿಸಲು ದತ್ತು ತೆಗೆದುಕೊಳ್ಳುತ್ತಿರುವುದರಿಂದ ಗ್ರಾಮದ ಎಲ್ಲಾ ಜನಾಂಗದ ಮುಖಂಡರು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ ನಿಮ್ಮ ಬೆಂಬಲಕ್ಕೆ ನಾವು ಇದ್ದೇವೆ. ಈ ಒಳ್ಳೆಯ ಕಾರ್ಯವನ್ನು ಮಾಡಲು ನಮ್ಮ ಸಹಕಾರವಿದೆ ಎಂದು ತಿಳಿಸಿದರು.
ನಂತರ ಮರಿಸ್ವಾಮಿ ಮಾತನಾಡಿ, ಶಾಲೆಯನ್ನು ದತ್ತು ಪಡೆದುಕೊಂಡು ಅಭಿವೃದ್ಧಿ ಪಡಿಸಲು ಗ್ರಾಮದ ಸರ್ಕಾರಿ ನೌಕರರು, ನಿವೃತ್ತ ನೌಕರರು ಹಾಗೂ ಅನುಕೂಲಸ್ಥರಿಂದ ಹಣ ಸಂಗ್ರಹಣ ಮಾಡಿ ಇದಕ್ಕೆ ಎಲ್ಲಾ ಕೋಮಿನ ಜನರನ್ನು ಸೇರಿಸಿ ಸಮಿತಿ ರಚನೆ ಮಾಡಿ ಯಾವುದೇ ಹಣಕಾಸು ವ್ಯತ್ಯಾಸವಾಗದಂತೆ ನೋಡಿಕೊಳ್ಳಲಾಗುವುದು. ಮೊದಲನೆಯದಾಗಿ ಶಾಲೆಅಭಿವೃದ್ಧಿಪಡಿಸುವುದೇ ನಮ್ಮ ಗುರಿಯಾಗಿದೆ. ಗ್ರಾಮದ ಅಭಿವೃದ್ಧಿಗೆ ಮುಂದಿನ ದಿನಗಳು ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ಮುಖಂಡರಾದ ದಳಪತಿ ನಾಗಣ್ಣೇಗೌಡ, ಮರು ಹುಚ್ಚನಾಯಕ, ಮಹದೇವಪ್ಪ, ಜಯಣ್ಣ, ಶಿವಣ್ಣೇ ಗೌಡ, ಸೋಮಣ್ಣ, ಮಹದೇವು, ಅಧಿಕಾರಿಗಳಾದ ವಿಜಯ್, ಮಲ್ಲಿಕಾರ್ಜುನ, ನಿವೃತ್ತಿ ಅಧಿಕಾರಿ ಗಂಗಾದರ್ ಹಾಗೂ ಇತರರು ಇದ್ದರು.