ಕನಕಪುರ: ಗ್ರಾಮಮಟ್ಟದ ನಿಷ್ಠಾವಂತ ಕಾರ್ಯಕರ್ತರನ್ನು ಗುರ್ತಿಸಿ ಸೂಕ್ತ ಸ್ಥಾನಮಾನ ನೀಡುವ ಏಕೈಕ ಪಕ್ಷ ಬಿಜೆಪಿ ಎಂದುಕೆಆರ್‌ಐಡಿಎಲ್ ಅಧ್ಯಕ್ಷ ರುದ್ರೇಶ್ ತಿಳಿಸಿದರು.
ತಾಲೂಕಿನ ಕೋಡಿಹಳ್ಳಿ ಹೋಬಳಿಯ ಹುಣಸನ ಹಳ್ಳಿ ಗ್ರಾಮದಲ್ಲಿ ಗ್ರಾಪಂ ಚುನಾವಣೆಗೆ ಸ್ಪರ್ಧಿಸಿರುವ ತಮ್ಮ ಪಕ್ಷದ ಬೆಂಬಲಿಗರ ಪರ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನಕಪುರದಲ್ಲಿಹಿಂದೆ ಚುನಾವಣೆಗಳನ್ನು ಎದುರಿಸಲು ಕಾರ್ಯಕರ್ತರಿಗೆ ಹೆಚ್ಚಿನ ಶಕ್ತಿ ಇರಲಿಲ್ಲ ಪ್ರಸ್ತುತ ರಾಜ್ಯದ ಬಿಜೆಪಿ ನಾಯಕರುಗಳು ಜಿಲ್ಲೆಯ ಮುಖಂಡರು ಕಾರ್ಯಕರ್ತರಿಗೆ ಅಧಿಕಾರ ಮತ್ತು ಸಂಪೂರ್ಣ ಬೆಂಬಲ ಕೊಟ್ಟಿದ್ದಾರೆ. ಮತದಾರರಿಗೂ ಪಕ್ಷದ ಮೇಲೆ ಹೆಚ್ಚಿನ ಒಲವಿದೆ ತಾಲೂಕಿನಲ್ಲಿ ಬಿಜೆಪಿಗೆ ಮತಗಳು ಬರುತ್ತಿಲ್ಲ ಎಂಬ ಕೊರಗು ದೂರವಾಗಿದೆ ಪ್ರಧಾನಿ ಮೋದಿ ಅವರುಕಾರ್ಯಕ್ರಮಗಳು ಜನರಿಗೆ ತಿಳಿದಿದೆ.
ನಿಮ್ಮ ಗ್ರಾಮ ನಿಮ್ಮ ಕ್ಷೇತ್ರ ಅಭಿವೃದ್ಧಿಯಾಗಬೇಕಾದರೆ ನಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿ ಗಳಿಗೆ ಮತನೀಡಿ ನಮ್ಮೊಂದಿಗೆ ಗ್ರಾಮದ ಅಭಿವೃದ್ಧಿಗೆ ನೀವೂ ಕೈಜೋಡಿಸಬೇಕು ಹೊರಗೊಂದು ಒಳಗೊಂದು ಹೇಳಿಕೊಂಡು ಅಧಿಕಾರ ಹಿಡಿದ ನಂತರ ಸ್ವಾರ್ಥ ಸಾಧನೆಗೆ ಇಳಿಯುವ ವರಿಗೆ ಓಟು ಹಾಕಬೇಡಿ ಬಿಜೆಪಿ ಅಭ್ಯರ್ಥಿಯನ್ನು ಬೆಬಲಿಸಿ ನಿಮ್ಮ ಕೆಲಸಕಾರ್ಯಗಳನ್ನು ಮಾಡಿಕೊಳ್ಳಿ ಕ್ಷೇತ್ರದ ಅಭಿವೃದ್ಧಿ ಮತ್ತು ಕಾರ್ಯಕರ್ತರಿಗೆ ನಮ್ಮ ಸಂಪೂರ್ಣ ಸಹಕಾರವಿದೆ ಎಂದರು.
ಪ್ರಾಧಿಕಾರದ ಅಧ್ಯಕ್ಷ ಜಗನ್ನಾಥ್ ಮಾತನಾಡಿ, ಈವರೆಗೂ ತಾಲೂಕಿನಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಗಾಡ್‌ಫಾದರ್ ಇರಲಿಲ್ಲ ರುದ್ರೇಶ್ ಅವರು ಎಲ್ಲಾ ಕಾರ್ಯಕರ್ತರನ್ನು ಹುರಿದುಂಬಿಸಿ ಶಕ್ತಿ ತುಂಬಿದ್ದಾರೆ. ಕಳೆದ ಬಾರಿ ಚುನಾವಣೆಗೆ ಬೆರಳೆಣಿಕೆಯಷ್ಟು ಕಾರ್ಯಕರ್ತರೋಂದಿಗೆ ಹುಣಸನಹಳ್ಳಿ ಗ್ರಾಮದಲಿ ಚುನಾವಣಾ ಪ್ರಚಾರಕಾರ್ಯ ಕೈಗೊಂಡಾಗಕೆಲವರು ನಮ್ಮನ್ನು ನೋಡಿ ನಗುತ್ತಿದ್ದರು. ಇಂದು ಅದೇ ಗ್ರಾಮದಲ್ಲಿ ನೂರಾರು ಕಾರ್ಯಕರ್ತರು ಮತದಾರರು ಪಾಲ್ಗೊಂಡಿರುವುದು ಬಿಜೆಪಿಯ ಶಕ್ತಿ ಏನು ಎಂಬುದು. ಎದುರಾಳಿಗಳಿಗೆ ತೋರಿಸಿಕೊಟ್ಟಿದ್ದಿರಿ ಎಂದರು.
ರಾಮನಗರ ಪ್ರಾಧಿಕಾರದ ಅಧ್ಯಕ್ಷ ಮುರುಳಿ, ನಾಗರಾಜು, ನಗರ ತಾ. ಮಾಜಿ ಅಧ್ಯಕ್ಷ ನಾಗಾನಂದ, ನಗರಸಭೆ ಸದಸ್ಯರಾದ ಮಾಲತಿ ಇತರರಿದ್ದರು.