Advertisement
ಅವರು ತಾಲೂಕಿನ ಆಲ್ದೂರಿನಲ್ಲಿ ನಡೆದ ಬೃಹತ್ ಜಾಥಾದ ಬಳಿಕ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ಹತ್ತು ವರ್ಷ ಕಳೆದರೂ ಮತ್ತೊಂದು ರೈಲು ತರಲಾಗಲಿಲ್ಲ ಕಳೆದ ನಾಲ್ಕು ದಶಕಗಳಿಂದ ರಾಜಕೀಯದಲ್ಲಿ ತೊಡಗಿಕೊಂಡಿದ್ದ ನನ್ನ ಬಗ್ಗೆ ಜನರು ಅಪಾರ ಪ್ರೀತಿ ತೋರಿಸುತ್ತಿರುವುದು ಮಾಡಿರುವ ಕೆಲಸಗಳನ್ನು ನೋಡಿ. ಕೇವಲ 20 ತಿಂಗಳ ಕಾಲ ಸಂಸದನಾಗಿದ್ದರೂ ಉಡುಪಿ ಮತ್ತು ಚಿಕ್ಕಮಗಳೂರು ಕ್ಷೇತ್ರ ದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ.
ಸಂದರ್ಭದಲ್ಲಿ ಹಾಜರಿದ್ದರು.
Related Articles
Advertisement
ಮೂಡಿಗೆರೆ ಶಾಸಕಿ, ನಯನಾ ಮೋಟಮ್ಮ ಮಾತನಾಡಿ, “ಇವತ್ತು ರಾಜ್ಯ ಮಹಿಳೆಯರು ಖುಷಿಯಿಂದ, ಆತ್ಮವಿಶ್ವಾಸದಿಂದ ಇರಲು ಕಾಂಗ್ರೆಸ್ ಸರಕಾರ ನೀಡಿದ ಐದು ಗ್ಯಾರಂಟಿಗಳೇ ಕಾರಣವಾಗಿವೆ. ಮಾಜಿ ಮುಖ್ಯಮಂತ್ರಿಗಳು ಈ ಗ್ಯಾರಂಟಿಯಿಂದ ಮಹಿಳೆಯರು ಹಾದಿ ತಪ್ಪುತ್ತಿದ್ದಾರೆ ಎಂದು ಲೇವಡಿ ಮಾಡಿರುವುದು ಖಂಡನೀಯ. ಎ. 26ರಂದು ನಡೆಯುವ ಮತದಾನದ ವೇಳೆ ಕ್ಷೇತ್ರದ ಜನತೆ ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ. ಕಾಂಗ್ರೆಸ್ ಸರಕಾರ ನೀಡಿರುವ ಐದು ಗ್ಯಾರಂಟಿಗಳಿಂದ ಅಭಿವೃದ್ಧಿ ಕಾರ್ಯ ಮರೆತ ವಿರೋಧ ಪಕ್ಷಗಳಿಗೆ ಸಹಿಸಿಕೊಳ್ಳಲಾಗುತ್ತಿಲ್ಲ. ಸೋಲಿನ ಆತಂಕ ಕಾಡಿದಾಗ ಲೇವಡಿಯೇ ಅಸ್ತ್ರವಾಗುತ್ತದೆ. ನಮ್ಮಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರು ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಮತ ಯಾಚಿಸುತ್ತಿದ್ದಾರೆಯೇ ಹೊರತು ಪ್ರತಿಸ್ಪರ್ಧಿಗಳನ್ನು ಟೀಕಿಸಿಯೋ ಅಥವಾ ಲೇವಡಿ ಮಾಡಿಯೋ ಮತ ಯಾಚಿಸುತ್ತಿಲ್ಲ. ಮಹಿಳೆಯರನ್ನು ಅವಮಾನಿಸುವುದು ಕಾಂಗ್ರೆಸ್ ಸಂಸ್ಕೃತಿಯಲ್ಲ. ನಾಳೆಯ ನೆಮ್ಮದಿಗಾಗಿ ಇಂದು ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು.