Advertisement
ರಾಜ್ಯ ಸಹಕಾರ ಮಾರಾಟ ಮಹಾಮಂಡಳ (ಮಾರ್ಕೆಟಿಂಗ್ ಫೆಡರೇಷನ್) ದಿಂದ ಪ್ರತಿ ಕ್ವಿಂಟಲ್ ಭತ್ತವನ್ನು 1940 ರೂ.ನಿಂದ 1969 ರೂ., ರಾಗಿಯನ್ನು 3377 ರೂ. ದರದಲ್ಲಿಖರೀದಿಸಲಾಗುವುದು. ಖರೀದಿ ಕೇಂದ್ರದಲ್ಲಿ ಭತ್ರ ಮತ್ತು ರಾಗಿ ಮಾರಾಟ ಮಾಡಿದ ರೈತರ ಬ್ಯಾಂಕ್ ಖಾತೆಗಳಿಗೆ ಹಣವನ್ನು ನೇರವಾಗಿ ವರ್ಗಾವಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
Related Articles
Advertisement
ಹೊಳೆನರಸೀಪುರದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಹೊಳೆನರಸೀಪುರ ತಾಲೂಕಿನ ರೈತರಿಂದ ಭತ್ತ ಮತ್ತು ರಾಗಿಯನ್ನು ಖರೀದಿಸಲಾಗುವುದು. ಸಕಲೇಶಪುರ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಸಕಲೇಶಪುರ ತಾಲೂಕಿನರೈತರಿಂದ ಭತ್ತ ಮಾತ್ರ ಖರೀದಿಸಲಾಗುವುದು ಎಂದಿದ್ದಾರೆ. ಅರಸೀಕೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣ, ಜಾವಗಲ್ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣ, ಗಂಡಸಿ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣ , ಜೆ.ಸಿ ಪುರದಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣ ಹಾಗೂ ಬಾಣಾವಾರದಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರಾಗಿಯನ್ನು ಮಾತ್ರ ಖರೀದಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಮಾರ್ಗಸೂಚಿಗಳು :
ಭತ್ತವನ್ನು ರೈತರು ಚೀಲಗಳಲ್ಲಿ ತಂದು ಅಕ್ಕಿ ಗಿರಣಿಗೆ ಸಲ್ಲಿಸಿದಾಗ ಪ್ರತಿ ಕ್ವಿಂಟಲ್ ಚೀಲಕ್ಕೆ 6 ರೂ.ನಂತೆ ಖರೀದಿ ಏಜೆನ್ಸಿಗಳು ಪಾವತಿ ಮಾಡತಕ್ಕದ್ದು. ರೈತರು ಭತ್ತವನ್ನುಒಮ್ಮೆ ಬಳಸಿದ ಉತ್ತಮ ಗುಣಮಟ್ಟದ ಗೋಣಿ ಚೀಲದಲ್ಲಿಯೇ ಮಾರಾಟಕ್ಕೆ ತರಬೇಕು. ಗೋಣಿ ಚೀಲ ಖರೀದಿ ವೆಚ್ಚ ಪ್ರತಿ 50 ಕೆ.ಜಿ. ಚೀಲಕ್ಕೆ 22 ರೂ. ನಂತೆ ನೇರ ನಗದು ವರ್ಗಾವಣೆಯನ್ನು ರೈತರಿಗೆ ರೈತರಿಗೆ ಪಾವತಿಸಲಾಗುವುದು. ಖರೀದಿ ಪ್ರಕ್ರಿಯೆಯ ಬಗ್ಗೆ ಸಮಸ್ಯೆಗಳು ಉದ್ಭವಿದಲ್ಲಿ ಕೂಡಲೇ ಆಯಾ ತಾಲೂಕಿನಆಹಾರ ಶಿರಸ್ತೇದಾರರು, ಆಹಾರ ನಿರೀಕ್ಷಕರನ್ನಾಗಲೀಸಂಪರ್ಕಿಸಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ಆಹಾರ ಮತ್ತು ನಾಗರೀಕರ ಸರಬರಾಜು ಇಲಾಖೆ ಉಪ ನಿರ್ದೇಶಕರು ಸೂಚಿಸಿದ್ದಾರೆ