ಜೆಡಿಎಸ್ ಅಭ್ಯರ್ಥಿ ಎಚ್.ಕೆ. ಕುಮಾರಸ್ವಾಮಿ ಪರ ಪಟ್ಟಣದ ಸಕಲೇಶ್ವರಸ್ವಾಮಿ ದೇಗುಲ ದಿಂದ ಹಳೇ ಬಸ್ ನಿಲ್ದಾಣದವರೆಗೆ ರೋಡ್ ಶೋ ನಡೆಸಿ ಮಾತನಾಡಿದ ಅವರು, ಪ್ರಾದೇಶಿಕ ಪಕ್ಷದ ಉಳಿವಿಗಾಗಿ ಈ ವಯಸ್ಸಿನಲ್ಲೂ ಚುನಾವಣ ಪ್ರಚಾರ ಮಾಡುತ್ತಿದ್ದೇನೆ. ರಾಜ್ಯದ ನೆಲ, ಜಲ ಸಂರಕ್ಷಣೆಗೆ ಪ್ರಾದೇಶಿಕ ಪಕ್ಷದ ಆವಶ್ಯಕತೆ ಇದೆ ಎಂದರು.
ರಾಜ್ಯದ ಜನರಿಗೆ ನೀರಿಲ್ಲದಿದ್ದರೂ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುವ ಅನಿವಾರ್ಯತೆ ಸೃಷ್ಟಿಸಲಾಗಿದೆ. ಈ ಬಗ್ಗೆ ಲೋಕಸಭೆಯಲ್ಲಿ ಏಕಾಂಗಿ ಹೋರಾಟ ನಡೆಸಿದೆ. ಆದರೆ, ಬಿಜೆಪಿಯ 18 ಲೋಕಸಭಾ ಸದಸ್ಯರು ಕಾಂಗ್ರೆಸ್‌ನ ನಾಲ್ವರು ಸದಸ್ಯರಿದ್ದರೂ ನನಗೆ ಸಹಕಾರ ನೀಡಲಿಲ್ಲ. ನಮಗೆ ಮೇಕೆದಾಟಿನಲ್ಲಿ ಡ್ಯಾಂ ನಿರ್ಮಾಣ ಮಾಡುವ ಶಕ್ತಿ ಇಲ್ಲವಾ ಎಂದು ಪ್ರಶ್ನಿಸಿದರು. ಕನ್ನಡಿಗರು ಸ್ವಾಭಿಮಾನಿಗಳು, ತಮಿಳರಿಗೆ ಯಾವ ರೀತಿಯಲ್ಲೂ ಕಡಿಮೆಯಿಲ್ಲ. ಬಿಜೆಪಿ, ಕಾಂಗ್ರೆಸ್‌ನವರಿಗೆ ರಾಜ್ಯದ ಜನರ ಹಿತ ಬೇಕಾಗಿಲ್ಲ. ಈ ಬಾರಿ ರಾಜ್ಯದ ಜನತೆ ಬಿಜೆಪಿ, ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸುವುದು ನಿಶ್ಚಿತ ಎಂದರು.
Advertisement
ಯಜಮಾನಿ ಯಾರು?ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮಾತನಾಡಿ, ಕಾಂಗ್ರೆಸ್‌ನ ಯೋಜನೆಗಳು ಮನೆಯಲ್ಲೆ ಹುಳಿ ಹಿಂಡುವಂತಿದೆ. ಗೃಹಲಕ್ಷ್ಮೀ ಯೋಜನೆಯಲ್ಲಿ ಪ್ರತಿ ಕುಟುಂಬದ ಯಜಮಾನಿಗೆ 2000 ರೂ. ಕೊಡುತ್ತೇವೆ ಎನ್ನುತ್ತಾರೆ. ಇದನ್ನು ಯಾರಿಗೆ ಕೊಡುತ್ತಾರೆ? ಅತ್ತೆಗೆ ಕೊಡುತ್ತಾರೋ ಸೊಸೆಗೆ ಕೊಡುತ್ತಾರೋ? ಹಣಕ್ಕಾಗಿ ಕುಟುಂಬದಲ್ಲೆ ಜಗಳವಾಗುತ್ತದೆ. ಆದರೆ, ಜೆಡಿಎಸ್ ಅಧಿಕಾರಕ್ಕೆ ಬಂದರೆ ಪಂಚರತ್ನ ಯೋಜನೆ ಜಾರಿಗೆ ಬರಲಿದ್ದು ಎಲ್ಲರಿಗೂ ಅನುಕೂಲವಾಗಲಿದೆ ಎಂದರು.
ಅರಸೀಕೆರೆ: ಜೆಡಿಎಸ್‌ಗೆ ಮತ ಹಾಕಿದರೆ ಕಾಂಗ್ರೆಸ್‌ಗೆ ಹಾಕಿದಂತೆ ಎನ್ನುವ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಅಸಮಾಧಾನ ಹೊರ ಹಾಕಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ಹಗುರ ಮಾತು ಬೇಡ, ಇದು ಅವರಿಗೆ ಶೋಭೆ ತರದು ಎಂದರು.
ತಾಲೂಕಿನ ಗಂಡಸಿಯಲ್ಲಿ ಪಕ್ಷದ ಅಭ್ಯರ್ಥಿ ಎನ್.ಆರ್. ಸಂತೋಷ್ ಪರ ಪ್ರಚಾರದಲ್ಲಿ ಮಾತನಾಡಿದ ಅವರು, ಕಳೆದ ಬಾರಿ ರಾಹುಲ್‌ಗಾಂಧಿ ಮಾಡಿದ್ದನ್ನು, ಈ ಬಾರಿ ಮೋದಿ ಮಾಡಿದ್ದಾರೆ. ಇದು ಸಲ್ಲದು ಎಂದರು. ರಾಹುಲ್‌ಗಾಂಧಿಗೂ, ಇವರಿಗೂ ವ್ಯತ್ಯಾಸ ಇದೆ. ರಾಹುಲ್ ಗಾಂಧಿ ಅವರ ಮಟ್ಟಕ್ಕೆ ಮೋದಿ ಅವರನ್ನು ಇಳಿಸಬಾರದಿತ್ತು ಎಂದರು. ರಾಹುಲ್ ಗಾಂಧಿ ಈಸ್ ಆನ್ ಎ ಯಂಗ್ ಸ್ಟರ್, ಮೋದಿ ಇಸ್ ಎ ಮೆಚೂರ್ಡ್ ಲೀಡರ್. ಅವರಿಂದ ಇಂತಹ ಮಾತು ಬರುತ್ತೆ ಎಂದು ನಾನು ನಿರೀಕ್ಷೆ ಮಾಡಿರಲಿಲ್ಲ ಎಂದು ಬೇಸರ ಹೊರ ಹಾಕಿದರು. ಮೋದಿ ಅವರು ದೇಶದ ಪ್ರಧಾನಿಯಾಗಿ, ಜೆಡಿಎಸ್ ಪಕ್ಷದ ಬಗ್ಗೆ ಲಘು ವಾಗಿ ಮಾತನಾಡಬಾರದು ಎಂದು ದೇವೇಗೌಡ ಅವರು.