Advertisement

2019ರಲ್ಲಿ ಹರತಾಳಕ್ಕಿಲ್ಲ ಬೆಂಬಲ

10:10 AM Dec 22, 2018 | Harsha Rao |

ತಿರುವನಂತಪುರ: ಕೇರಳ ವ್ಯಾಪಾರಿಗಳ ಒಕ್ಕೂಟವು 2019ಅನ್ನು ಹರತಾಳ ವಿರೋಧಿ ವರ್ಷವನ್ನಾಗಿ ಆಚರಿಸಲು ನಿರ್ಧರಿಸಿದೆ. ಅದರಂತೆ, ಹೊಸವರ್ಷಕ್ಕೆ ಹರತಾಳ, ಬಂದ್‌ಗೆ ಬೆಂಬಲ ನೀಡುವುದಿಲ್ಲ ಎಂಬ ನಿರ್ಣಯವನ್ನು ವ್ಯಾಪಾರಿಗಳು ಕೈಗೊಂಡಿದ್ದಾರೆ. 

Advertisement

2018ರಲ್ಲಿ ಇದುವರೆಗೆ ಒಟ್ಟು 97 ಬಂದ್‌, ಹರತಾಳಕ್ಕೆ ವಿವಿಧ ರಾಜಕೀಯ ಪಕ್ಷಗಳು ಕರೆ ನೀಡಿದ್ದವು. ಈ ಪೈಕಿ ಇತ್ತೀಚಿನ 2 ತಿಂಗಳಲ್ಲಿ 3 ಬಂದ್‌, ಹರತಾಳ ನಡೆದಿವೆ. ಇದರಿಂದಾಗಿ ವಿವಿಧ ಉದ್ದಿಮೆಗಳಿಗೆ ಕೋಟ್ಯಂತರ ರೂ. ನಷ್ಟ ಉಂಟಾಗಿದೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ನಿರತವಾಗಿರುವ ಕೇರಳ ಟ್ರಾವೆಲ್‌ ಮಾರ್ಟ್‌ (ಕೆಟಿಎಂ) ಸಂಘಟನೆಯ ಅಧ್ಯಕ್ಷ ಬೇಬಿ ಮ್ಯಾಥ್ಯೂ ಮಾತನಾಡಿ ಜ.8, 9ಕ್ಕೆ ಕೇರಳದಲ್ಲಿ ನಡೆಯಲಿರುವ ಮುಷ್ಕರದಲ್ಲಿ ಸಂಘಟನೆ ಭಾಗವಹಿಸುವುದಿಲ್ಲ ಎಂದಿದ್ದಾರೆ. 1 ದಿನದ ಹರತಾಳ ಅಥವಾ ಬಂದ್‌ನಿಂದಾಗಿ 200 ಕೋಟಿ ರೂ. ನಷ್ಟ ಉಂಟಾಗುತ್ತದೆ ಎಂದಿದ್ದಾರೆ. 

ಕೇರಳ ವ್ಯಾಪಾರಿ ವ್ಯವಸಾಯ ಏಕೋಪಾಸನ ಸಮಿತಿ ಅಧ್ಯಕ್ಷ ಟಿ.ನಾಸಿರುದ್ದೀನ್‌, ಮುಂದೆ ರಾಜಕೀಯ ಪಕ್ಷಗಳು ಮತ್ತು ಅವುಗಳ ಸಹವರ್ತಿ ಸಂಸ್ಥೆಗಳು ಕರೆ ನೀಡುವ ಬಂದ್‌ ಅಥವಾ ಹರತಾಳಕ್ಕೆ ಬೆಂಬಲ ಸೂಚಿಸುವುದಿಲ್ಲ ಎಂದಿದ್ದಾರೆ. 

ಕೇರಳ ಹೊಟೇಲ್‌ ಮತ್ತು ರೆಸ್ಟಾರೆಂಟ್‌ಗಳ ಒಕ್ಕೂಟ ಅಧ್ಯಕ್ಷ ಮೊಯಿದೀನ್‌ ಕುಟ್ಟಿ ಹಾಜಿ ಯವರ ಪ್ರಕಾರ, 1 ಲಕ್ಷ ಪ್ರತಿನಿಧಿಗಳು ಹೊಟೇಲ್‌ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಹೆಚ್ಚಿನ ಸಂದರ್ಭಗಳಲ್ಲಿ ಹೊಟೇಲ್‌ ಅಥವಾ ಮಳಿಗೆಗಳು ತೆರೆದ ಬಳಿಕವೇ ಬಂದ್‌ ಮಾಹಿತಿ ಬರುತ್ತದೆ. ಹೀಗಾಗಿ ವ್ಯಾಪಕ ನಷ್ಟ ಉಂಟಾಗುತ್ತದೆ. ಹೀಗಾಗಿ ಎಲ್ಲಾ ರಾಜಕೀಯ ಪಕ್ಷಗಳಿಗೆ ಮತ್ತು ಸಹವರ್ತಿ ಸಂಘಟನೆಗಳಿಗೆ ಬಂದ್‌, ಹರತಾಳಕ್ಕೆ ಬೆಂಬಲ ನೀಡುವುದಿಲ್ಲ ಎಂಬ ನಿರ್ಣಯದ ಬಗ್ಗೆ ಮಾಹಿತಿ ನೀಡುವುದಾಗಿ ಸಂಘಟನೆಗಳು ತೀರ್ಮಾನಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next