Advertisement

ಕುಷ್ಠರೋಗ ಮುಕ್ತ ಜಿಲ್ಲೆಗೆ ಸಹಕರಿಸಿ

04:44 PM Jan 20, 2020 | Suhan S |

ಕೋಲಾರ: ಜಿಲ್ಲೆಯನ್ನು ಕುಷ್ಠರೋಗ ಮುಕ್ತ ಮಾಡಲು ಎಲ್ಲರೂ ಸಹಕರಿಸಿ ಎಂದು ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಎನ್‌.ಸಿ.ನಾರಾಯಣ ಸ್ವಾಮಿ ಮನವಿ ಮಾಡಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿ ಕೊಂಡಿದ್ದ ಸ್ಪರ್ಶ್‌ ಕುಷ್ಠರೋಗ ಅರಿವು ಮೂಡಿಸುವ ಕಾರ್ಯಕ್ರಮದ ಪೂರ್ವ  ಭಾವಿ ಸಭೆಯಲ್ಲಿ ಮಾತನಾಡಿದ ಅವರು,ಜಿಲ್ಲೆಯಲ್ಲಿ ಜ.31ರಿಂದ ಫೆ.13ರವರೆಗೆ 15 ದಿನಗಳ ಸ್ಪರ್ಶ್‌ ಕುಷ್ಠರೋಗ ಅರಿವು ಮೂಡಿಸುವ ಅಂದೋಲನ ಹಮ್ಮಿಕೊಳ್ಳಲಾಗಿದೆ. ಗ್ರಾಪಂ ಮಟ್ಟದಲ್ಲಿ ಶಾಲೆಗಳಲ್ಲಿ ಮಕ್ಕಳಿಗೆ ಪ್ರಬಂಧ, ಚರ್ಚಾಸ್ಪರ್ಧೆ, ಬೀದಿ  ನಾಟಕಗಳ ಮೂಲಕ ನಾಗರಿಕರಿಗೆ ಕುಷ್ಠರೋಗದ ಕುರಿತು ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು.

ಕುಷ್ಠರೋಗವು ಮೈಕ್ರೋ ಬ್ಯಾಕ್ಟೀರಿಯಾ ಲೆಪ್ರ ಎಂಬ ಸೂಕ್ಷ್ಮಾಣುವಿನಿಂದ ಉಸಿರಾಟ, ಕೆಮ್ಮು ಹಾಗೂ ಸೀನುವುದರ ಮೂಲಕ ಮಾತ್ರ ಹರಡುತ್ತದೆ. ಚರ್ಮ ಮತ್ತು ನರಗಳಿಗೆ ಸಂಬಂಧಿಸಿದ ಕಾಯಿಲೆಯಾಗಿದೆ. ಈ ರೋಗಾಣುವು ಮನುಷ್ಯನ ದೇಹದಲ್ಲಿ ಒಂದು ವಾರದಿಂದ 20 ವರ್ಷಗಳವರೆಗೆ ಇರುತ್ತದೆ. ಇದು ಹಿಂದಿನ ಕಾಲದಿಂದ ಬಂದ ಕಾಯಿಲೆ  ಯಾಗಿದ್ದು, ಯಾವುದೇ ಶಾಪ, ಪಾಪ ಅಥವಾ ಕರ್ಮದಿಂದ ಬರುವುದಿಲ್ಲ. ಕುಷ್ಠರೋಗದಿಂದ ಸಾವು ಸಂಭವಿಸುವುದಿಲ್ಲ, ಆದರೆ, ಈ ಕಾಯಿಲೆ ಬಂದರೆ ಅಂಗವಿಕಲತೆ ಸಾಧ್ಯತೆ ಹೆಚ್ಚು ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಏಪ್ರಿಲ್‌ 2018-ಮಾರ್ಚ್‌2019ರವರಗೆ 41 ಪ್ರಕರಣಗಳುದಾಖಲಾಗಿದ್ದು, ಇದರಲ್ಲಿ 38 ಎಂಬಿ, 3 ಪಿಬಿ. ಏಪ್ರಿಲ್‌ 2019 ರಿಂದ ಡಿಸೆಂಬರ್‌ 2019 ರವರೆಗೆ 33 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಬಂಗಾರಪೇಟೆ 6,ಕೆಜಿಎಫ್‌ 5, ಕೋಲಾರ 3, ಮಾಲೂರು 4, ಮುಳಬಾಗಿಲು 9 ಹಾಗೂ ಶ್ರೀನಿವಾಸಪುರದಲ್ಲಿ 6 ಪ್ರಕರಣಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next