Advertisement
ಸಭೆಯಲ್ಲಿ ವಿಷಯ ಪ್ರಸ್ತಾವಿಸಿದ ಗ್ರಾಮ ಸ್ಥೆಯೋರ್ವರು ಸುಪ್ರೀಂಕೋರ್ಟ್ ಆದೇಶದಂತೆ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಮದ್ಯದಂಗಡಿಗಳು ಬಂದ್ ಆಗಿವೆ. ಆದರೆ ನೆಲ್ಯಾಡಿಯಲ್ಲಿನ ಮದ್ಯದಂಗಡಿಯೊಂದು ಅಡ್ಡದಾರಿ ಮಾಡಿಕೊಂಡು ಹಿಂಬಾಗಿಲ ಮೂಲಕ ಕಾರ್ಯಾಚರಿಸುತ್ತಿದೆ. ಇದರ ವಿರುದ್ಧ ಇಲಾ ಖೆಗಳಿಗೆ ಮನವಿ ಕೊಟ್ಟರೂ ಯಾವುದೇ ಕ್ರಮ ಕೈಗೊಂಡಿಲ್ಲ. ಅಡ್ಡದಾರಿ ಮೂಲಕ ಮದ್ಯದಂಗಡಿಗೆ ಮದ್ಯ ಕೊಳ್ಳಲು ಬರುವ ಸಾರ್ವಜನಿಕರು ಮಹಿಳೆಯರ ಜತೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಇದನ್ನು ವಿರೋಧಿಸುತ್ತಿರುವ ನಮಗೆ ಜೀವ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಆರೋಪಿಸಿದರು.
ಪಡ್ಡಡ್ಕದಲ್ಲಿ ಹಂದಿ ಸಾಕಾಣಿಕೆ ಮಾಡುತ್ತಿರು ವುದರಿಂದ ಸಮೀಪದ ಮನೆಯವರಿಗೆ ದುರ್ವಾ ಸನೆಯಲ್ಲಿ ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ. ರೋಗ ಹರಡುವ ಭೀತಿ ಇದೆ. ಈ ಬಗ್ಗೆ ಹಂದಿ ಸಾಕಾಣಿಕೆದಾರರ ಗಮನಕ್ಕೆ ತಂದಾಗ ಅವರು ನಮ್ಮೊಂದಿಗೆ ಜಗಳಕ್ಕೆ ಬರುತ್ತಾರೆ ಎಂದು ಮಹಿಳೆಯೋರ್ವರು ಸಭೆಯ ಗಮನಕ್ಕೆ ತಂದರು.
Related Articles
ನೆಲ್ಯಾಡಿ ಪೇಟೆ ಅಂಗನವಾಡಿ ಪಕ್ಕದಲ್ಲಿರುವ ಸರಕಾರಿ ಜಾಗವನ್ನು ಸ್ತ್ರೀಶಕ್ತಿ ಭವನ ನಿರ್ಮಾಣಕ್ಕೆ ಮಂಜೂರು ಗೊಳಿಸಬೇಕೆಂದು ಅಂಗನವಾಡಿ ಕಾರ್ಯಕರ್ತೆ ಆಗ್ರಹಿಸಿದರು. ನೆಲ್ಯಾಡಿ-ಪಡ್ಡಡ್ಕ ರಸ್ತೆ ಡಾಮರೀಕ ರಣಗೊಂಡಿದ್ದರೂ ಆರೇ ತಿಂಗಳಲ್ಲಿ ಡಾಮರು ಎದ್ದು ಅಲ್ಲಲ್ಲಿ ಹೊಂಡ ನಿರ್ಮಾಣಗೊಂಡಿದೆ. ಇದನ್ನು ಸರಿಪಡಿಸುವಂತೆ. ಗ್ರಾಮಸ್ಥರು ಆಗ್ರಹಿಸಿದರು. ಗ್ರಾಮಸ್ಥರ ಸಮಸ್ಯೆ ಕುರಿತಂತೆ ಸಂಬಂಧಿಸಿದವರಿಗೆ ಮನವಿ ಮಾಡಲು ಸಭೆಯಲ್ಲಿ ನಿರ್ಣಯಿಸಲಾಯಿತು.
Advertisement
ಗ್ರಾ.ಪಂ. ಸದಸ್ಯ ಗಂಗಾಧರ ಶೆಟ್ಟಿ ಹೊಸಮನೆ ಅವರು ಮಾತನಾಡಿ, ಮದ್ಯದಂಗಡಿಯಿಂದ ಮಹಿ ಳೆಯರಿಗೆ ತೊಂದರೆಯಾದಲ್ಲಿ ರಕ್ಷಣೆಗೆ ಜನಜಾಗೃತಿ ವೇದಿಕೆ ಹೋರಾಟಕ್ಕೆ ಸಿದ್ಧವಿದ್ದು ಹಲವು ಸಂಘ ಸಂಸ್ಥೆಗಳ ಬೆಂಬಲದೊಂದಿಗೆ ಬಾರ್ ವಿರುದ್ಧ ಈಗಾ ಗಲೇ ಪ್ರತಿಭಟನೆಗೆ ದಿನ ನಿಗದಿಯಾಗಿದೆ ಎಂದರು.
ಅಂಗನವಾಡಿ ವಲಯ ಮೇಲ್ವಿಚಾರಕಿ ಉಮಾ ವತಿ ಮಾಹಿತಿ ನೀಡಿದರು. ಗ್ರಾ.ಪಂ. ಸದಸ್ಯರಾದ ಅಬ್ರಹಾಂ ಕೆ.ಪಿ., ಅಬ್ದುಲ್ ಹಮೀದ್, ಚಿತ್ರಾ ರಾಮನಗರ, ಪೋ›ರಿನಾ ಡಿ’ಸೋಜಾ, ಉಷಾ ಜೋಯಿ, ಉಮಾವತಿ ದರ್ಖಾಸು, ಲೈಲಾ ತೋಮಸ್, ತೀಥೆìಶ್ವರ ಯು. ಉಪಸ್ಥಿತರಿದ್ದರು. ಪಿ.ಡಿ.ಒ. ದೇವರಾಜ್ ಸ್ವಾಗತಿಸಿ, ನಿರೂಪಿಸಿದರು. ಉಷಾ ಒ.ಕೆ. ವಂದಿಸಿದರು. ಸಿಬಂದಿ ಶಿವಪ್ರಸಾದ್, ಗಿರೀಶ್, ಸೋಮಶೇಖರ್ ಸಹಕರಿಸಿದರು.