Advertisement

ಕನ್ನಡ ಸೇವಕ ಡಾ|ಹೆಬ್ಬಾಳೆಗೆ ಬೆಂಬಲ

04:06 PM Nov 19, 2021 | Team Udayavani |

ಬೀದರ: ದಶಕದಿಂದ ಯಾವುದೇ ಫಲಾಪೇಕ್ಷೆಯಿಲ್ಲದೆ ಕನ್ನಡ ನಾಡು-ನುಡಿ ಮತ್ತು ಜನಪದ ಸೇವೆ ಮಾಡಿ, ಕಲಾವಿದರು ಹಾಗೂ ಕಲೆಯನ್ನು ಬೆಳೆಸುವಲ್ಲಿ ನಿರಂತರ ಸೇವೆ ಗೈಯುತ್ತಿರುವ ಡಾ| ರಾಜಕುಮಾರ ಹೆಬ್ಟಾಳೆ ಅವರನ್ನು ಬೆಂಬಲಿಸುತ್ತಿದ್ದೇವೆ ಎಂದು ನಾಟ್ಯಶ್ರೀ ನೃತ್ಯಾಲಯದ ಕೆ. ಸತ್ಯಮೂರ್ತಿ ಹೇಳಿದರು.

Advertisement

ನಗರದ ನಾಟ್ಯಶ್ರೀ ನೃತ್ಯಾಲಯದ ಸಭಾಂಗಣದಲ್ಲಿ ಡಾ| ರಾಜಕುಮಾರ ಹೆಬ್ಟಾಳೆ ಅವರಿಗೆ ಸಮರ್ಥನೆ ನೀಡುವ ಸಭೆಯಲ್ಲಿ ಮಾತನಾಡಿದ ಅವರು, ಈ ಬಾರಿ ಪ್ರೊ| ಸಿದ್ರಾಮಪ್ಪ ಮಾಸಿಮಾಡೆಯವರು ಸ್ಪರ್ಧೆಯಲ್ಲಿ ಇಲ್ಲ. ಆದ್ದರಿಂದ ನಿಜವಾದ ಕನ್ನಡ ಸೇವಕ ಡಾ| ಹೆಬ್ಟಾಳೆ ಅವರಿಗೆ ಯಾವುದೇ ಅಪೇಕ್ಷೆಯಿಲ್ಲದೆ ಸಂಪೂರ್ಣ ಬೆಂಬಲ ನೀಡುತ್ತಿದ್ದೇವೆ. ಅವರು ಕಲೆ, ಕಲಾವಿದರು ಹಾಗೂ ಸಂಸ್ಕೃತಿಯನ್ನು ಉಳಿಸುವ ಕಾರ್ಯ ಮಾಡುತ್ತಿದ್ದಾರೆ. ಅವರಿಗೆ ತನು ಮನ ಧನದಿಂದ ನಾವು ಸಹಕರಿಸಿ ಅಭಯ ನೀಡುತ್ತಿದ್ದೇನೆ ಎಂದು ತಿಳಿಸಿದರು.

ಕದಂಬ ಕನ್ನಡ ಸಂಘದ ಅಧ್ಯಕ್ಷ ಪ್ರೊ| ವೀರಶೆಟ್ಟಿ ಮೈಲೂರಕರ್‌ ಮಾತನಾಡಿ, ಕಲ್ಯಾಣ ನಾಡಿನಲ್ಲಿ ವಚನಭ್ರಷ್ಟರಿಗೆ ಯಾವುದೇ ಸಮರ್ಥನೆ ನೀಡಲು ಆಗುವುದಿಲ್ಲ. ಮಾತಿನಂತೆ ನಡೆಯದ ಮೇಲೆ ಅದು ಬಸವ ತತ್ವಕ್ಕೆ ಮಾಡಿದ ಅಪಚಾರ. ಹೀಗಾಗಿ ಹೆಬ್ಟಾಳೆ ಒಬ್ಬ ಯುವ ಉತ್ಸಾಹಿ ಸಂಘಟಕ. ದಣಿವರಿಯದ ಸೇವಕ. ಅವರಿಗೆ ನಮ್ಮ ಬೇಷರತ್‌ ಬೆಂಬಲವಿದೆ ಎಂದರು.

ಸಾಹಿತಿ ಉಮಾಕಾಂತ ಮೀಸೆ ಮಾತನಾಡಿ, ನಮ್ಮ ನಡೆ-ನುಡಿ ಒಂದಾಗಿಸಿಕೊಂಡು ಸೇವೆ ಮಾಡಿದಾಗ ಮಾತ್ರ ಸಾರ್ಥಕವಾಗುತ್ತದೆ. ಅಲ್ಲಿ ಒಂದಿಷ್ಟು ಅಭಿವೃದ್ಧಿಯನ್ನು ಕಾಣಬಹುದು. ಈ ಬಾರಿ ಹೊಸ ಮುಖಗಳಿಗೂ ಒಂದು ಅವಕಾಶ ನೀಡಿದರೆ ಉತ್ತಮ ಎಂದು ತಿಳಿಸಿದರು.

ಕಸಾಪ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ಡಾ| ರಾಜಕುಮಾರ ಹೆಬ್ಟಾಳೆ ಮಾತನಾಡಿ, ಸುಮಾರು ಎರಡು ದಶಕಗಳಿಂದ ಜಿಲ್ಲೆಯಲ್ಲಿ ಕರ್ನಾಟಕ ಸಾಹಿತ್ಯ ಸಂಘ, ಜಾನಪದ ಪರಿಷತ್ತು ಹಾಗೂ ಕರ್ನಾಟಕ ಬರಹಗಾರರ- ಕಲಾವಿದರ ಸಂಘದ ಮೂಲಕ ರಚನಾತ್ಮಕ ಕಾರ್ಯಗಳನ್ನು ಮಾಡುತ್ತ ಬಂದಿದ್ದೇನೆ. ಕನ್ನಡ ಮತ್ತು ಜನಪದ ಸೇವೆಯನ್ನು ಮಾಡಲು ಈ ಬಾರಿ ನನಗೆ ಒಂದು ಅವಕಾಶ ನೀಡಬೇಕೆಂದು ಮನವಿ ಮಾಡಿಕೊಂಡರು.

Advertisement

ಪ್ರೊ| ಎಸ್‌.ಬಿ. ಬಿರಾದಾರ, ಪ್ರೊ| ದೇವೇಂದ್ರ ಕಮಲ, ಕೆ. ಗುರುಮೂರ್ತಿ, ಕೆ. ರಾಮಮೂರ್ತಿ, ಡಾ| ಎಂ.ಜಿ. ದೇಶಪಾಂಡೆ, ಡಾ| ಜಗನ್ನಾಥ ಹೆಬ್ಟಾಳೆ, ವೀರಭದ್ರಪ್ಪ ಉಪ್ಪಿನ್‌, ಯೋಗೇಂದ್ರ ಯದಲಾಪುರೆ, ಕಿರಣ ಗುರುಮೂರ್ತಿ, ಕೆ. ಭಾಗ್ಯಲಕ್ಷ್ಮೀ, ಬಸವರಾಜ ಮೂಲಗೆ, ಓಂಪ್ರಕಾಶ ರೊಟ್ಟೆ, ರಾಜಕುಮಾರ ಮಡಕಿ, ನಿಜಲಿಂಗಪ್ಪ ತಗಾರೆ, ಗಂಗಶೆಟ್ಟಿ ಖಾನಾಪುರೆ, ಪಂಚಾಕ್ಷರಿ ಪುಣ್ಯಶೆಟ್ಟಿ, ಬಸವರಾಜ ಹೆಗ್ಗೆ, ಪ್ರೊ| ಎಸ್‌.ವಿ. ಕಲ್ಮಠ, ಬಸವಂತರಾವ ಪಾಟೀಲ, ಅಶೋಕ ಮಾನಶೆಟ್ಟಿ, ನಾಗೇಶ ಮಾನಶೆಟ್ಟಿ, ಬಸಯ್ಯ ಸ್ವಾಮಿ, ಬಸವರಾಜ ಸ್ವಾಮಿ, ಶಿವಶಂಕರ ಚಿಕುರ್ತಿ, ಭುವನೇಶ್ವರ ಬಿರಾದಾರ, ಅಶೋಕ ಶೆಟಕಾರ, ಶಾಂತಕುಮಾರ ಶೆಟಕಾರ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next