Advertisement

ಜೆಡಿಎಸ್‌ನಲ್ಲಿದ್ದು ಬಿಜೆಪಿಗೆ ಬೆಂಬಲ, ಸ್ವತಂತ್ರ ಸ್ಪರ್ಧೆ ಶೀಘ್ರ ನಿರ್ಧಾರ: ಮೊದಿನ್‌ ಬಾವಾ

01:29 AM Mar 19, 2024 | Team Udayavani |

ಮಂಗಳೂರು: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ಗೆ ಸೇರಿದ್ದೆ. ಸದ್ಯ ಅದೇ ಪಕ್ಷ ದಲ್ಲೇ ಇದ್ದು, ಬಿಜೆಪಿ ಬೆಂಬಲಿಸುತ್ತೇನೆ. ಆದರೆ ಬಿಜೆಪಿಯ ಎಲ್ಲ ಸಿದ್ಧಾಂತಗಳನ್ನು ಒಪ್ಪಲಾರೆ ಎಂದು ಮಾಜಿ ಶಾಸಕ ಮೊದಿನ್‌ ಬಾವಾ ಹೇಳಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಜೆಡಿಎಸ್‌ನಲ್ಲೇ ಇದ್ದು ಬಿಜೆಪಿ ಬೆಂಬಲಿಸುವೆ. ಆದರೆ ಸಿಎಎ, ಹಿಜಾಬ್‌, ಆಝಾನ್‌ಗೆ ವಿರೋಧಿಸುವ ಬಿಜೆಪಿಯ ಸಿದ್ಧಾಂತಗಳನ್ನು ಒಪ್ಪಲಾರೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕಲ್ಲಡ್ಕ ಶಾಲೆಗೆ ಭೇಟಿ ನೀಡಿದಾಗ ನಾನು ವಿರೋಧಿಸಿದ್ದೆ. ನಮ್ಮ ನಾಯಕರು ತಪ್ಪು ಮಾಡಿದರೆ ಅದನ್ನೂ ಪ್ರಶ್ನಿಸುವೆ ಹಾಗೂ ಖಂಡಿ ಸುವೆ ಎಂದು ಹೇಳಿದರು.

ಕಾರ್ಯಕರ್ತರ ಒತ್ತಡ!
ಈ ಲೋಕಸಭಾ ಚುನಾವಣೆಯಲ್ಲಿ ನಾನು ಸ್ವತಂತ್ರವಾಗಿ ಸ್ಪರ್ಧಿಸುವಂತೆ ನನ್ನ ಬೆಂಬಲಿಗರು ಒತ್ತಾ ಯಿಸುತ್ತಿದ್ದಾರೆ. ನಾನು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಮಾ. 28ರಂದು ಕಂಕನಾಡಿಯಲ್ಲಿ ಆಯೋ ಜಿಸಲಾಗಿರುವ ಸಭೆ ಯಲ್ಲಿ ಬೆಂಬಲಿಗರ ಜತೆ ಚರ್ಚಿಸಿ ಮುಂದಿನ ನಿರ್ಧಾರ ಪ್ರಕಟಿ ಸುವುದಾಗಿ ತಿಳಿಸಿದರು.

ಕಾಂಗ್ರೆಸ್‌ ಯಾರಪ್ಪನ ಆಸ್ತಿಯಲ್ಲ!
ಮರಳಿ ಕಾಂಗ್ರೆಸ್‌ ಸೇರುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಕ್ಷೇತ್ರದ ನಾಯಕರು ಕಾಂಗ್ರೆಸ್‌ ಸೇರ್ಪಡೆಗೆ ವಿರೋಧಿಸಿದ್ದಾರೆ ಎಂದು ಕೇಳಿದ್ದೇನೆ. ಕಾಂಗ್ರೆಸ್‌ ನಾಯಕರು ಗೌರವಯುತವಾಗಿ ಕರೆದಲ್ಲಿ ವಾಪಸಾಗುವೆ.
ಕಾಂಗ್ರೆಸ್‌ ಯಾರಪ್ಪನ ಆಸ್ತಿಯೂ ಅಲ್ಲ. ನಾನು ಸೇರ್ಪಡೆಯಾಗುವುದಿ ದ್ದರೆ ಯಾರಿಂದಲೂ ತಡೆಯಲೂ ಆಗದು. ಈ ಬಾರಿ ಬೆಂಬಲಿಗರ ಸಲಹೆಯಂತೆ ಮುಂದುವರಿ ಯಲಿದ್ದೇನೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next