Advertisement

ಎಲ ಬೆಳೆಗಳಿಗೆ ಬೆಂಬಲ ಬೆಲೆ ಅಗತ್ಲ್ಯ: ಡಾ|ಶಿವಾನಂದ ಶ್ರೀ

11:40 AM Sep 28, 2018 | Team Udayavani |

ಬಸವಕಲ್ಯಾಣ: ರೈತರು ಕಷ್ಟಪಟ್ಟು ಬೆಳೆದ ಎಲ್ಲ ಬೆಳೆಗಳನ್ನು ಸರ್ಕಾರ ಬೆಂಬಲ ಬೆಲೆಯಲ್ಲಿ ಖರೀದಿ ಮಾಡಬೇಕು ಎಂದು ಹುಲಸೂರು ಶ್ರೀ ಗುರು ಬಸವೇಶ್ವರ ಸಂಸ್ಥಾನ ಮಠದ ಪೀಠಾಧಿ ಪತಿ ಡಾ| ಶಿವಾನಂದ ಮಹಾಸ್ವಾಮೀಜಿ ಹೇಳಿದರು.

Advertisement

ಹುರುಸೂರಿನ ಶ್ರೀ ಗುರು ಬಸವೇಶ್ವರ ಪ್ರೌಢ ಶಾಲೆಯಲ್ಲಿ ಭಿಮರಾಯನಗುಡಿ ಕೃಷಿ ಮಹಾವಿದ್ಯಾಲಯ ಹಾಗೂ ಕೃಷಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕೃಷಿ ಸಂಭ್ರಮ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಮೂರು ತಿಂಗಳಲ್ಲಿ ಬೆಳೆದ ಹೆಸರು ಧಾನ್ಯಗಳಿಗೆ 6,975 ರೂ. ಘೋಷಣೆ ಮಾಡಿದೆ. ಆದರೆ ತೊಗರಿಗೆ 5000 ರೂ. ನೀಡುತ್ತಿದೆ. ಸರ್ಕಾರ ಇದರ ಬಗ್ಗೆ ಚಿಂತನೆ ಮಾಡಬೇಕು ಎಂದು ಹೇಳಿದರು. ಕಲಬುರಗಿ ಕೃಷಿ ವಿಶ್ವವಿದ್ಯಾಲಯದ ಮುಖ್ಯಸ್ಥ ಡಾ| ಸುರೇಶ ಪಾಟೀಲ ಮಾತನಾಡಿ, ಬೀದರ ಜಿಲ್ಲೆಯಲ್ಲಿ ವೈವಿಧ್ಯಮಯ ವಾತವರಣ ಇದೆ. ಹಾಗಾಗಿ ರೈತರು ಎಲ್ಲ ತರಹದ ಬೆಳೆಗಳನ್ನು ಬೆಳೆಯುತ್ತಾರೆ. ಆದ್ದರಿಂದ ಇಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿ, ಸರ್ಕಾರ ರೈತರ ಬದುಕಿನ ಜೊತೆಗೆ ಚಲ್ಲಾಟವಾಡುತ್ತಿದೆ. ಹೆಸರು ಕಾಳನ್ನು ಬೆಂಬಲ ಬೆಲೆಗೆ ಪ್ರತಿ ರೈತರಿಂದ 10 ಕ್ವಿಂಟಲ್‌ ಪಡೆಯುವುದಾಗಿ ಹೇಳಿ, ಈಗ
ಕೇವಲ 4 ಕ್ವಿಂಟಲ್‌ ಪಡೆಯಲಾಗುತ್ತಿದೆ. ಆದ್ದರಿಂದ ಈ ನಿಯಮ ಬದಲಾಯಿಸಬೇಕು. ಇಲ್ಲದಿದ್ದರೆ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಹೇಳಿದರು.
 
ಡಾ| ಆರ್‌.ಲೋಕೇಶ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯ ಸುಧೀರ ಕಾಡಾದಿ, ಡಾ|ಎಂ.ಭೀಮಣ್ಣಾ, ರೈತ ಸಂಘದ ತಾಲೂಕು ಅಧ್ಯಕ್ಷ ಚಂದ್ರಶೇಖರ ಜಮಖಂಡಿ, ಡಾ| ಡಿ.ಕೆ.ಹಾದಿಮನಿ, ಗ್ರಾಪಂ ಅಧ್ಯಕ್ಷೆ ಮಂಗಲಾ ಡೋಣಗಾಂವಕರ್‌, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಕಾಶಿನಾಥ, ಗೋವಿಂದರಾವ್‌ ಸೋಮೊಂಶಿ, ವಿಠಲರಾವ್‌ ಪಾಟೀಲ, ಲತಾ ಹಾರಕೂಡೆ, ಕೃಷಿ ಅಧಿಕಾರಿ ಬಳಿರಾಮ ಮಲ್ಕೆ, ಚಂದ್ರಕಾಂತ ದೆಟ್ಟೆ, ಬಾಬುರಾವ್‌ ಮಾಳದೆ, ಅಧೋಕ ತೆಲಂಗ, ಬಾಬುರಾವ್‌ ಚಾಂಗಲೂರೆ, ಸುಲೀಲ ಭುಜಂಗೆ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next