ಬಾಗಲಕೋಟೆ: ದೇಶ ಕಾಂಗ್ರೆಸ್ ನೇತೃತ್ವದಲ್ಲಿದ್ದಾಗ ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರವಾಗಿಯೇ ಇತ್ತು. ಮೋದಿಜಿ ನೇತೃತ್ವದ ಬಿಜೆಪಿ ಸರ್ಕಾರ ಬಂದ ಮೇಲೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ರೂಪುಗೊಂಡಿದೆ ಎಂದು ಬೀಳಗಿ ಬಿಜೆಪಿ ಅಭ್ಯರ್ಥಿ ಮುರುಗೇಶ ನಿರಾಣಿ ಹೇಳಿದರು.
ರೊಳ್ಳಿ ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮತಯಾಚನೆ ಮಾಡಿ ಮಾತನಾಡಿದ ಅವರು, ಡಬಲ್ ಎಂಜಿನ್ ಸರ್ಕಾರದಿಂದ ದಶಕಗಳಿಂದ ನನೆಗುದಿಗೆ ಬಿದ್ದ ಕೆಲಸಗಳಿಗೆ ಚಾಲನೆ ದೊರೆತಿದೆ. 2024ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುತ್ತದೆ. ಈ ಬಾರಿ ನೀವು ಬಿಜೆಪಿಗೆ ಆಶೀರ್ವದಿಸಿದರೆ ಮುಂದಿನ 5 ವರ್ಷ
ಕರ್ನಾಟಕದಲ್ಲಿ ಸುಭದ್ರ ಡಬಲ್ ಇಂಜಿನ್ ಸರ್ಕಾರ ಅಸ್ತಿತ್ವದಲ್ಲಿ ಇರುತ್ತದೆ. ಇದರಿಂದ ನಮ್ಮ ಕ್ಷೇತ್ರ, ನಮ್ಮ
ರಾಜ್ಯ ಹಾಗೂ ದೇಶ ಎಲ್ಲವೂ ಸುಭಿಕ್ಷವಾಗಿರುತ್ತದೆ. ಕಾಂಗ್ರೆಸ್, ಜೆಡಿಎಸ್ ಎರಡು ಒಂದೇ ನಾಣ್ಯದ ಎರಡು ಮುಖಗಳು. ಹೀಗಾಗಿ ಅಭಿವೃದ್ದಿ ಎನ್ನುವುದು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಹೇಳಿದರು.
ಬೀಳಗಿ ಮತಕ್ಷೇತ್ರದಲ್ಲಿ ಕಳೆದ 5 ವರ್ಷಗಳಲ್ಲಿ ಬಹಳಷ್ಟು ಅಭಿವೃದ್ದಿ ಕಾರ್ಯಗಳಾಗಿವೆ. ಜನತೆಯ ಅವಶ್ಯಕತೆ ಗಳನ್ನು ಅರಿತು ಕೆಲಸ ಮಾಡಿದ್ದೇನೆ. ಕಾಂಗ್ರೆಸ್ ಅಭ್ಯರ್ಥಿ ಜೆ.ಟಿ. ಪಾಟೀಲ ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸಮಾಡುತ್ತಿದ್ದಾರೆ. ಜನತೆಗೆ ಎಲ್ಲವೂ ಅರ್ಥವಾಗುತ್ತದೆ. ಬೀಳಗಿ ಮತಕ್ಷೇತ್ರದ ಜನತೆ ವಿಕಾಸದ ಹಾದಿಯನ್ನು ಬಯಸುತ್ತಿದ್ದಾರೆ. ವಿಕಾಸ ಬಯಸುವವರು ಎಂದಿಗೂ ಕಾಂಗ್ರೆಸ್ ಆಯ್ಕೆ ಮಾಡಿಕೊಳ್ಳುವುದಿಲ್ಲ. ಸರ್ವಾಂಗೀಣ ಅಭಿವೃದ್ಧಿಗೆ ಮತ್ತೂಮ್ಮೆ ನನಗೆ ಆಶಿರ್ವದಿಸಿ ಎಂದರು.
ಶಿವಾನಂದ ನಿಂಗಂನೂರ, ಮಲ್ಲಿಕಾರ್ಜುನ ಅಂಗಡಿ, ಈರಣ್ಣ ಗಿಡ್ಡಪ್ಪಗೋಳ, ಮಲ್ಲಪ್ಪ ಎಮ್. ಶಂಭೋಜಿ, ಬಸಲಿಂಗಪ್ಪ ನಿಂಗನೂರ, ಗೋವಿಂದಪ್ಪ ಬಿಳಂಡಿ, ಈರಪ್ಪ ಕಂಬಾರ, ನಿಜಲಿಂಗಪ್ಪ ತಳವಾರ, ಚೆನ್ನಯ್ಯ ಮಠ, ನಾಗನಗೌಡ ಪಾಟೀಲ, ಸಂಗಪ್ಪ ಕೆಂಪಗೌಡ್ರ, ಕೂಡ್ಲೆàಪ್ಪ ಪಾಟೀಲ, ಶಿವಪ್ಪ ತಳವಾರ, ಚೆನ್ನಪ್ಪ ಮುದೂರ, ಭೀಮಣ್ಣ ಕುಬಕಡ್ಡಿ, ಮೈಬುಸಾಬ ಜಮಾದಾರ, ದುಂಡಪ್ಪ ತಳವಾರ, ಮಹದೇವಪ್ಪ ಪಟ್ಟಣಶೆಟ್ಟಿ, ಮಲ್ಲಪ್ಪ ಕಿತ್ತೂರ, ಶಿವಾನಂದ ಕೆಂಪಗೌಡ್ರ ಉಪಸ್ಥಿತರಿದ್ದರು.
ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ: ಬೀರಕಬ್ಬಿ ಗ್ರಾಮದ ವಿಕಲಚೇತನರಾದ ಬಾಲಪ್ಪ ಮಾದರ, ಮಲ್ಲಪ್ಪ ಕೆಠಾರಿ, ಲಕಕ್ಷ್ಮಣ ಪೂಜಾರಿ, ಭೀಮಣ್ಣ ಚಲಗೊಂಡ, ಹಣಮಂತ ಮಾದರ, ಮಲ್ಲಪ್ಪ ಮೆಳ್ಳಿಗೇರಿ, ಉಮೇಶ ಜಾಲಿ, ವಿಠuಲ ಯಲ್ಲಿಗುತ್ತಿ, ನಾಗಪ್ಪ ಶಿರೂರ, ಅಶೋಕ ವೀರಾಪುರ, ಅರ್ಜುನ ದಾಸರ ಅಪಾರ ಬೆಂಬಲಿಗರೊಂದಿಗೆ ಬಿಜೆಪಿ ಸೇರ್ಪಡೆಗೊಂಡರು.