ನವದೆಹಲಿ: ರಾಷ್ಟ್ರರಾಜಧಾನಿಗೆ ನಿಗದಿಪಡಿಸಿದ 490 ಮೆಟ್ರಿಕ್ ಟನ್ ಗಳಷ್ಟು ಆಕ್ಸಿಜನ್ ಸರಬರಾಜು ಮಾಡಿ, ಇಲ್ಲದಿದ್ದರೆ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ದೆಹಲಿ ಹೈಕೋರ್ಟ್ ಶನಿವಾರ(ಮೇ 01) ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಇದನ್ನೂ ಓದಿ:ಕೋವಿಡ್ ತುರ್ತು ಪರಿಸ್ಥಿತಿ ಘೋಷಿಸಿ ಖಾಸಗಿ ಆಸ್ಪತ್ರೆಗಳನ್ನು ಸರ್ಕಾರ ನಿಯಂತ್ರಣಕ್ಕೆ ಪಡೆಯಲಿ
ಕೇಂದ್ರ ಸರ್ಕಾರ ದೆಹಲಿಗೆ 490 ಮೆಟ್ರಿಕ್ ಟನ್ ಗಳಷ್ಟು ಆಕ್ಸಿಜನ್ ಹಂಚಿಕೆ ಮಾಡಿದೆ, ಅದನ್ನು ನೀವು(ಕೇಂದ್ರ) ಪೂರೈಕೆ ಮಾಡಬೇಕು ಎಂದು ದೆಹಲಿ ಹೈಕೋರ್ಟ್ ಪೀಠ ತಿಳಿಸಿದೆ.
ತಲೆಯ ಮೇಲಿಂದ ಹೆಚ್ಚಿನ ನೀರು ಹರಿದು ಹೋಗಿದೆ, ಅಂದರೆ ಇದೀಗ ವ್ಯವಹಾರ ಎಂಬುದಾಗಿ ಅರ್ಥೈಸುತ್ತೇವೆ. ಇದು ಇನ್ನು ಮುಂದುವರಿಯಬಾರದು ಎಂದು ಜಸ್ಟೀಸ್ ವಿಪಿನ್ ಸಂಘಿ ಮತ್ತು ಜಸ್ಟೀಸ್ ರೇಖಾ ಪಲ್ಲಿ ಅವರಿದ್ದ ಪೀಠ ಈ ರೀತಿ ಪ್ರತಿಪಾದಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ಈ ಆದೇಶವನ್ನು ಸೋಮವಾರದವರೆಗೆ ಅಥವಾ ಅರ್ಧ ಗಂಟೆವರೆಗೆ ಮುಂದೂಡಬೇಕೆಂಬ ಕೇಂದ್ರದ ಮನವಿಯನ್ನೂ ಪೀಠ ನಿರಾಕರಿಸಿತ್ತು. ಅಂದರೆ ದೆಹಲಿಯಲ್ಲಿ ಜನ ಸಾಯುತ್ತಿದ್ದರೆ ನಾವು ಕಣ್ಮುಚ್ಚಿ ಕುಳಿತುಕೊಳ್ಳಬೇಕಾ ಎಂದು ಪೀಠ ಕೇಂದ್ರದ ಪರ ವಕೀಲರನ್ನು ಪ್ರಶ್ನಿಸಿತ್ತು.