ಸಿಂಧನೂರು: ನಗರದಲ್ಲಿ 31 ವಾರ್ಡ್‌ಗಳಿಗೆ 6 ದಿನಕ್ಕೊಮ್ಮೆ ನಗರಸಭೆಯಿಂದ ಪೂರೈಸುತ್ತಿರುವ ನೀರಿನಲ್ಲಿ ಜನರಿಗೆ ವಿವಿಧ ಕಾಯಿಲೆಗಳು ಬರುತ್ತಿವೆ.
ನಗರದ ಸಾರ್ವಜನಿಕರಿಗೆಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಆರು ದಿನಕ್ಕೊಮ್ಮೆ ಪೂರೈಕೆಯಾದ ನೀರು ಸಂಪೂರ್ಣ ಕಲುಷಿತವಾಗಿದೆ. ಕಳೆದ ತಿಂಗಳಿನಿಂದ ಮಳೆ ಹೆಚ್ಚಾಗಿ ಬಂದಿರುವುದರಿಂದ ತುಂಗಭದ್ರಾ ಡ್ಯಾಮ್ ಹಾಗೂ ಎಲ್ಲಾ ಕೆರೆಗಳಿಗೆ ನೀರು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗುತ್ತಿದೆ. ಆದರೂ 6 ದಿನಕ್ಕೊಮ್ಮೆ ನೀರು ಪೂರೈಸುತ್ತಿದ್ದಾರೆ. ನೀರು ಮಲೀನವಾಗಿದೆ. ಸರಿಯಾಗಿಶುದ್ಧೀಕರಣ ಮಾಡಿ ಈಗಲಾದರಶುದ್ಧ ನೀರು ಬಿಡಬಹುದು ಎಂಬ ನಿರೀಕ್ಷೆ ಜನರಿಗಿತ್ತು. ಆದರೆ ಎಲ್ಲವೂ ಹುಸಿಯಾಗಿದೆ. ಜಾನುವಾರು ಕೂಡ ಕುಡಿಯದ ನೀರು ಜನ ಕುಡಿಯುವ ಸ್ಥಿತಿ ಎದುರಾಗಿದೆ.
ನಗರಸಭೆಯಿಂದ ಪೂರೈಸುತ್ತಿರುವ ಕುಡಿಯುವ ನೀರು ಅಶುದ್ಧತೆ, ಕೆಸರು ನೀರು ಬರುತ್ತಿದೆ. ಇದರಿಂದ ಕೆಲವರಿಗೆ ವಾಂತಿ, ಭೇದಿ, ಕೆಮ್ಮು, ನೆಗಡಿಕಾಯಿಲೆಗಳು ಹೆಚ್ಚು ಕಂಡು ಬರುತ್ತಿವೆ. ಇದರಿಂದ ಜನ ವಿವಿಧ ಆಸ್ಪತ್ರೆಗೆದಾಖಲಾಗಿರುವುದು ಕಂಡುಬಂದಿದೆ. ಕ್ಯಾನ್‌ಗಳಿಗೆ ಡಿಮ್ಯಾಂಡ್ ಸಾರ್ವಜನಿಕರು ಹೆಚ್ಚಾನು ಹೆಚ್ಚು 30-35 ರೂ. ದೊರಕುವ ವಾಟರ್ ಕ್ಯಾನ್ ತೆಗೆದುಕೊಂಡು ದಿನನಿತ್ಯ ಕುಡಿಯುತ್ತಿದ್ದಾರೆ ಮನುಷ್ಯನ ಆರೋಗ್ಯಕ್ಕೆ ನೀರು ಮುಖ್ಯವಾಗಿದ್ದರೂ ನಗರದಲ್ಲಿನ ನೀರು ಜನರ ಆರೋಗ್ಯಕ್ಕೆ ಹದಗೆಡಿಸುತ್ತಿದೆಜನ ಎಷ್ಟು ಹಣಖರ್ಚಾದರೂ ಪರವಾಗಿಲ್ಲ ಶುದ್ಧ ನೀರು ಖರೀದಿಸಿ ಕುಡಿಯಲು ಮುಂದಾಗಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯದಿಂದ ನಗರ ಜನತೆಗೆ ಶುದ್ಧ ನೀರು ನೀಡದೆ ಅರ್ಧಕ್ಕೆ ನಿಂತ ಕಾಮಗಾರಿ ಪೂರ್ಣಗೊಳಿಸದೆ ಹಾಗೂ ಅಲ್ಲಲ್ಲಿ ಒಡೆದಿರುವ ಪೈಪುಗಳು ಸಹ ಅಶುದ್ಧ ನೀರು ಪೂರೈಕೆ ಕಾರಣವಾಗುತ್ತಿದೆ ಎಂಬುದು ಸ್ಥಳೀಯರು ಆರೋಪಿಸಿದ್ದಾರೆ.
ದೊಡ್ಡ ಕೆರೆ ಕಾಮಗಾರಿ ನಡೆಯುತ್ತಿದೆ. ನೀರು ಹೆಚ್ಚು ಸಂಗ್ರಹವಾಗುತ್ತಿಲ್ಲ. ಕೆನಾಲ್ ಮೂಲಕ ಶುದ್ಧೀಕರಣ ಘಟಕಕ್ಕೆ ನೇರವಾಗಿ ನೀರುಬಿಡಲಾಗುತ್ತಿದ್ದು, 24×7 ಕಾಮಗಾರಿ ನಡೆಯುತ್ತಿದೆ. ಶೀಘ್ರಸಮಸ್ಯೆ ಸರಿಪಡಿಸಿ ಜನರಿಗೆ ಶುದ್ಧ ನೀರು ಕೊಡುತ್ತೇವೆ.
-ಆರ್.ವಿರೂಪಾಕ್ಷ ಮೂರ್ತಿ, ನಗರಸಭೆ ಪೌರಾಯುಕ್ತರು.
ನೀರಿನ ಸಮಸ್ಯೆಗಳ ಬಗ್ಗೆ ಶೀಘ್ರದಲ್ಲೇ ಅಧಿಕಾರಿಗಳ ಸಭೆ ಕರೆದು ಚರ್ಚಿಸುತ್ತೇನೆ. ಜನತೆಗೆ ಶುದ್ಧ ನೀರು ಕೊಡಲು ಪ್ರಯತ್ನಿಸುತ್ತೇನೆ. ಅಧಿಕಾರಿಗಳಿಗೆ ಪ್ರಶ್ನಿಸಿದಾಗ ಮಾತ್ರ ಪೌಡರ್ ಹಾಕಿ ನೀರು ಶುದ್ಧೀಕರಣ ಮಾಡುತ್ತಾರೆ. ಈ ಬಗ್ಗೆ ಹಿಂದೆ ನಾವು ಪ್ರಶ್ನಿಸಿದ್ದೇವೆ. ಈಗ ನಾನೇಅಧ್ಯಕ್ಷ ಆಗಿದ್ದೇನೆ. ಶುದ್ಧ ನೀರು ಪೂರೈಸುವ ಜವಾಬ್ದಾರಿ ನಮ್ಮದು.
ಮಲ್ಲಿಕಾರ್ಜುನ ಪಾಟೀಲ್, ನಗರಸಭೆ ಅಧ್ಯಕ್ಷರು.
ಚಂದ್ರಶೇಖರ್ ಯರದಿಹಾಳ