Advertisement
ಮಾಧ್ಯಮಗಳಿಗಿಂದು ಈ ಸಂಬಂಧ ಮಾಹಿತಿ ನೀಡಿದ ಅವರು, ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗ್ರಾಪಂ ಗ್ರಂಥಾಲಯಗಳ ಡಿಜಿಟಲೀಕರಣ ಮಾಡಲಾಗಿದೆ. ಗ್ರಂಥಾಲಯ ಡಿಜಿಟಲೀಕರಣದಡಿ ಈಗಾಗಲೇ ಜಿಲ್ಲೆಯ ಎಲ್ಲಾ ಗ್ರಾಪಂ ಗ್ರಂಥಾಲಯಗಳನ್ನು ಡಿಜಿಟಲೀಕರಿಸಲಾಗುತ್ತಿದೆ. ಗ್ರಾಪಂ ಗ್ರಂಥಾಲಯಗಳಿಗೆ ಒಳಾಂಗಣ ಕ್ರೀಡೆಗೆ ಸಂಬಂಧಿಸಿದ ಕ್ರೀಡಾ ಸಾಮಗ್ರಿ ಹಾಗೂ ಬೌದ್ಧಿಕ ವಿಕಸನಕ್ಕೆ ಪೂರಕವಾದ ಒಗಟು ಬಿಡಿಸುವ ಆಟಿಕೆ, ರುಬಿಕ್ ಕ್ಯೂಬ್, ಕೇರಂ, ಚೆಸ್, ಹಾವು-ಏಣಿ ಬೋರ್ಡ್, ಎಣಿಸುವ ಮಣಿಗಳ ಸರ, ಅಬಾಕಸ್ ಸಾಧನಗಳನ್ನು ಗ್ರಾಪಂಗಳ ಗ್ರಂಥಾಲಯ ಕರ ಹಣದಲ್ಲಿ ಖರಿದಿಸಿ ಪೂರೈಸಲಾಗುತ್ತಿದೆ ಎಂದು ವಿವರಿಸಿದರು.
Related Articles
Advertisement
ಗ್ರಾಮದಲ್ಲಿನ ಸಂಪನ್ಮೂಲ ವ್ಯಕ್ತಿಗಳನ್ನು ಗುರುತಿಸಿ ಗ್ರಂಥಾಲಯಕ್ಕೆ ಮಕ್ಕಳು ಭೇಟಿ ನೀಡಿದ ಸಂದರ್ಶನದಲ್ಲಿ ಓದುವ ಹವ್ಯಾಸ, ಕ್ರೀಡೆ ಇವುಗಳ ಬಗ್ಗೆ ಉಚಿತ ಮಾರ್ಗದರ್ಶನ ಕೊಡಿಸಲು ಕಾರ್ಯಕ್ರಮ ರೂಪಿಸಬೇಕು. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಗ್ರಾಪಂ ಗ್ರಂಥಾಲಯಕ್ಕೆ ಪುಸ್ತಕ ಖರೀದಿಸುವ ಸಂದರ್ಭದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಜಿಪಂ ಶಿಫಾರಸ್ಸು ಮಾಡಿದ ಪುಸ್ತಕಗಳನ್ನು ಮಾತ್ರ ಖರೀದಿಸಬೇಕು. ಎಲ್ಲಾ ಗ್ರಾಪಂ ಗ್ರಂಥಾಲಯಗಳಲ್ಲಿ ಈಗಾಗಲೇ ಪೂರೈಸಲಾದ ಕರಿಯರ್ ಗೈಡೆನ್ಸ್ ಚಾರ್ಟ್‌ನ್ನು ಉತ್ತಮ ಗುಣಮಟ್ಟದ ಪ್ರಿಂಟ್ ನಲ್ಲಿ ತೆಗೆದು ಗ್ರಂಥಾಲಯಗಳಲ್ಲಿ ಪ್ರಕಟಿಸಲು ಸೂಚಿಸಲಾಗಿದೆ ಎಂದಿದ್ದಾರೆ.
ಇದೊಂದು ವಿನೂತನ ಕಾರ್ಯಕ್ರಮವಾಗಿದ್ದು, ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಲು ಪ್ರಯತ್ನ ಮಾಡಲಾಗುತ್ತಿದೆ. ಮಕ್ಕಳು ಮಾನಸಿಕ ಹಾಗೂ ಬೌದ್ಧಿಕ ವಿಕಾಸಕ್ಕೆ ಇದೊಂದು ಹೆಜ್ಜೆ. ಗ್ರಾಮೀಣ ಮಕ್ಕಳು ಸದೃಢರಾಗಲಿ ಎಂಬ ಉದ್ದೇಶದಿಂದ ಕ್ರೀಡಾ ಸಾಮಗ್ರಿ ಹಾಗೂ ಆಟಿಕೆ ಸಾಧನಗಳ ಪೂರೈಕೆಗೆ ಯೋಜನೆ ಸಿದ್ಧಪಡಿಸಿ ಕಾರ್ಯ ರೂಪಕ್ಕೆ ತರಲಾಗುತ್ತಿದೆ. -ಪ್ರಿಯಾಂಕಾ ಎಂ., ಜಿಪಂ ಸಿಇಒ, ಉತ್ತರ ಕನ್ನಡ.
ಗ್ರಾಪಂ ಗ್ರಂಥಾಲಯಗಳ ಡಿಜಿಟಲೀಕರಣ ಹಾಗೂ ಮಕ್ಕಳ ಸವಾಂìಗೀಣ ಅಭಿವೃದ್ಧಿಗೆ ಪೂರಕವಾಗುವಂತೆ ಜಿಪಂ ಗ್ರಂಥಾಲಯಗಳಿಗೆ ಸ್ಪರ್ಧಾತ್ಮಕ ಪುಸ್ತಕ, ಆಟಿಕೆ ಸಾಧನ ಪೂರೈಸುವ ಕಾರ್ಯ ಮಹತ್ವದ್ದಾಗಿದೆ. ಇದರಿಂದ ಮಕ್ಕಳು ಮೊಬೈಲ್ ಫೋನ್ ವ್ಯಸನ ಕಡಿಮೆಯಾಗಬಹುದು. -ಗಣಪತಿ ಆಗೇರ, ಮುಖ್ಯಾಧ್ಯಾಪಕರು, ಕೆಪಿಎಸ್ ಸ.ಮಾ.ಹಿ.ಪ್ರಾ. ಶಾಲೆ, ಅಮದಳ್ಳಿ