Advertisement

ವಿಶಾಖಪಟ್ಟಣದಿಂದ ಗಾಂಜಾ ಪೂರೈಕೆ

12:01 AM Sep 05, 2020 | mahesh |

ಮಂಗಳೂರು: ಮಂಗಳೂರು ನಗರ ಸಹಿತ ಕರ್ನಾಟಕದ ಕರಾವಳಿ ಮತ್ತು ನೆರೆಯ ಕಾಸರಗೋಡು, ಕಣ್ಣೂರು ಜಿಲ್ಲೆಗಳಿಗೆ ಪೂರೈಕೆ ಆಗುವ ಗಾಂಜಾದ ಮೂಲ ವಿಶಾಖಪಟ್ಟಣದಲ್ಲಿದೆ. ವಿಶಾಖಪಟ್ಟಣದಿಂದ ಬೆಂಗಳೂರು ಮೂಲಕ ಕರ್ನಾಟಕ ಮತ್ತು ಕೇರಳ ಸಹಿತ ದಕ್ಷಿಣ ಭಾರತದ ರಾಜ್ಯಗಳಿಗೆ ಗಾಂಜಾ ಸರಬರಾಜು ಆಗುತ್ತಿದೆ ಎಂದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.

Advertisement

ಭಾರತದಲ್ಲಿ ಗಾಂಜಾ ಮಾರಾಟ, ಬಳಕೆ ಮತ್ತು ಕೃಷಿ ಮಾಡುವುದನ್ನು ನಿಷೇಧಿಸಲಾಗಿದ್ದರೂ, ಕಾಳ ಸಂತೆಯಲ್ಲಿ ಧಾರಾಳ ಪ್ರಮಾಣದಲ್ಲಿ ಗಾಂಜಾ ಲಭಿಸುತ್ತದೆ. ಗಾಂಜಾ ಬೆಳೆಯುವುದಲ್ಲಿಂದ ತೊಡಗಿ ಅದರ ಕೊಯ್ಲು, ಸಾಗಾಟ, ಮಾರಾಟ ಮತ್ತು ಬಳಕೆ-ಎಲ್ಲವೂ ಕಾನೂನು ಬಾಹಿರವಾಗಿ ನಡೆಯುತ್ತಿದೆ.

ಆಂಧ್ರದ ಪೂರ್ವ ಘಟ್ಟ ಪ್ರದೇಶಗಳಲ್ಲಿ ನಕ್ಸಲೀಯರು ಗಾಂಜಾವನ್ನು ಬೆಳೆಸುತ್ತಿದ್ದು, ಕಾಳ ಸಂತೆಗೆ ಪೂರೈಕೆಯಾಗುತ್ತದೆ. ಅತ್ಯುತ್ತಮ ದರ್ಜೆಯ ಮತ್ತು ಕಡಿಮೆ ಗುಣ ಮಟ್ಟದ ಗಾಂಜಾಗಳೆರಡೂ ವಿಶಾಖ ಪಟ್ಟಣದಲ್ಲಿ ಲಭಿಸುತ್ತಿದ್ದು, ಅಲ್ಲಿ ಕಡಿಮೆ ಬೆಲೆಗೆ ಸಿಗುವ ಗಾಂಜಾ ಮಧ್ಯವರ್ತಿಗಳ ಮೂಲಕ ವಿವಿಧೆಡೆಗೆ ಸರಬರಾಜು ಆಗುತ್ತದೆ.

ಪೊಲೀಸರು ಅಲ್ಲಿಗೆ ಹೋಗುವುದಿಲ್ಲ ನಕ್ಸಲೀಯರು ಗಾಂಜಾ ಕೃಷಿ ಮಾಡುವ ಪ್ರದೇಶಕ್ಕೆ ಸ್ಥಳೀಯ ಪೊಲೀಸರು ಕೂಡ ದಾಳಿ ಕಾರ್ಯಾಚರಣೆ ನಡೆಸಲು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ಅಲ್ಲಿ ನಕ್ಸಲೀಯರು ಯಾವುದೇ ಭಯವಿಲ್ಲದೆ ಗಾಂಜಾವನ್ನು ಬೆಳೆಯುತ್ತಾರೆ. ಈ ಮೂಲಕ ನಕ್ಸಲೀಯರು ತಮ್ಮ ಜೀವನೋಪಾಯಕ್ಕೂ ದಾರಿ ಕಂಡುಕೊಂಡಿದ್ದಾರೆ!

234 ಕೆ.ಜಿ. ಗಾಂಜಾ ಪತ್ತೆ
ಮಂಗಳೂರು ಕಮಿಷನರೆಟ್‌ ವ್ಯಾಪ್ತಿಯ ಪೊಲೀಸರು 2019ರಲ್ಲಿ ಮತ್ತು 2020ರ ಆಗಸ್ಟ್‌ ವರೆಗಿನ 20 ತಿಂಗಳ ಅವಧಿಯಲ್ಲಿ ಒಟ್ಟು 234 ಕೆ.ಜಿ. ಗಾಂಜಾ ಸಾಗಾಟವನ್ನು ಪತ್ತೆ ಹಚ್ಚಿದ್ದಾರೆ. 2019ರಲ್ಲಿ 87 ಕೆ.ಜಿ. ಹಾಗೂ 2020ರಲ್ಲಿ ಇದುವರೆಗೆ 146 ಕೆ.ಜಿ. ಗಾಂಜಾವನ್ನು ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದಾರೆ.

Advertisement

ನಕ್ಸಲೀಯರು ಗಾಂಜಾ ಬೆಳೆಯುವ ಪ್ರದೇಶಕ್ಕೆ ಸ್ಥಳೀಯ ಪೊಲೀಸರು ಹೋಗಲು ಭಯ ಪಡುತ್ತಾರೆ. ಹಾಗಾಗಿ ಬೇರೆ ರಾಜ್ಯಗಳ ಪೊಲೀಸರು ಕೂಡ ಕಾರ್ಯಾಚರಣೆಗೆ ಮುಂದಾಗುತ್ತಿಲ್ಲ. ಇದರಿಂದಾಗಿ ಗಾಂಜಾ ಪೂರೈಕೆಯ ಮೂಲ ಗೊತ್ತಿದ್ದರೂ ಏನೂ ಮಾಡಲಾಗದ ಅಸಹಾಯಕ ಪರಿಸ್ಥಿತಿ ನಮ್ಮ ಪೊಲೀಸರದು.
– ಓರ್ವ ಹಿರಿಯ ಪೊಲೀಸ್‌ ಅಧಿಕಾರಿ, ಮಂಗಳೂರು.

Advertisement

Udayavani is now on Telegram. Click here to join our channel and stay updated with the latest news.

Next