Advertisement
ಸಾಧಕರ ಪರಿಚಯವಿಚಾರ ಸಂಕಿರಣ ಹೆಸರೇ ಹೇಳುವಂತೆ ಇದೊಂದು ವಿಷಯಗಳ ವಿನಿಮಯಕ್ಕಾಗಿಯೇ ನಡೆಸುವ ಕಾರ್ಯಕ್ರಮವಾಗಿದ್ದು, ಸಾಮಾನ್ಯವಾಗಿ ಸಾಧಕರೊಂದಿಗೆ ಸಂವಾದ, ವಿಷಯ ವಿನಿಮಯಗಳು ನಡೆಯುತ್ತವೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ವಿವಿಧ ಸಾಧಕರ ಪರಿಚಯ ಆಗುವುದಲ್ಲದೆ, ಅವರು ನಡೆದು ಬಂದ ಹಾದಿ, ಪ್ರಸ್ತುತ ಅವರು ಕೆಲಸ ನಿರ್ವಹಿಸುತ್ತಿರುವ ಕ್ಷೇತ್ರದ ಆಗು-ಹೋಗುಗಳ ಬಗ್ಗೆಯೂ ಜ್ಞಾನ ದೊರೆಯುತ್ತದೆ. ಸಂದೇಹಗಳ ನಿವಾರಣೆ ಹೊಸ ವಿಷಯಗಳ ವಿನಿಮಯಕ್ಕೂ ಇದು ಉತ್ತಮ ವೇದಿಕೆಯಾಗಿದೆ.
ವಿಚಾರಸಂಕಿರಣಗಳು ಕೇವಲ ಭಾಷಣದ ವೇದಿಕೆಯಾಗಿರುವುದಿಲ್ಲ. ಅಲ್ಲಿ ಚರ್ಚೆ, ಸಂವಾದ, ಸಂಶೋಧನ ಪ್ರಬಂಧಗಳ ಮಂಡನೆ ನಡೆಯುವುದರಿಂದ ಇದೊಂದು ಬೌದ್ದಿಕ ವೇದಿಕೆಯಾಗಿರುತ್ತದೆ. ಹೀಗಾಗಿ ವಿಚಾರ ಸಂಕಿರಣಗಳಿಗೆ ತನ್ನದೇ ವೈಶಿಷ್ಟéಯಿದೆ. ವಿಚಾರ ಸಂಕಿರಣಗಳಲ್ಲಿ ವಿದ್ಯಾರ್ಥಿಗಳಲ್ಲಿ ಭಾಗವಹಿಸುವುದರಿಂದ ಸಂವಾದದಿಂದ ಸಂವಹನ ಕೌಶಲ ವೃದ್ಧಿ, ಪ್ರಬಂಧ ಮಂಡನೆಯಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಭವಿಷ್ಯಕ್ಕೆ ಪೂರಕ
ಕಾಲೇಜುಗಳಲ್ಲಿ ಆಯೋಜಿಸಲಾಗುವ ಕಾರ್ಯಾಗಾರ ಮತ್ತು ವಿಚಾರಸಂಕಿರಣದಿಂದಾಗಿ ನಮ್ಮ ಭವಿಷ್ಯದ ಬಗ್ಗೆ ಹಲವಾರು ಮಾಹಿತಿ ತಿಳಿದುಕೊಳ್ಳಬಹುದು. ಉದ್ಯೋಗ ಮತ್ತು ವೃತ್ತಿಪರತೆಯ ಅರಿವು ಇದಿರಿಂದಾಗುತ್ತದೆ. ಅವಕಾಶಗಳು ಸಂಪೂರ್ಣ ಮಾಹಿತಿ ದೊರೆಯುತ್ತದೆ.
Related Articles
ಪದವಿ ಅಥವಾ ಪದವಿ ಬಳಿಕ ಮುಂದೇನು ಎಂಬ ಗೊಂದಲದಲ್ಲಿಯೇ ಬಹುತೇಕ ವಿದ್ಯಾರ್ಥಿಗಳಿರುತ್ತಾರೆ. ಇಂತವರಿಗೆ ವಿಚಾರ ಸಂಕಿರಣಗಳು ಸೂಕ್ತ ಮಾರ್ಗದರ್ಶನ ನೀಡುವ ಜತೆಗೆ ವೃತ್ತಿಪರ ಸಂಸ್ಥೆಗಳ ಹುಡುಕಾಟಕ್ಕೂ ಸಹಕಾರಿಯಾಗಲಿದೆ. ಕೌಶಲಗಳ ಅಭಿವೃದ್ಧಿಯ ಜತೆಗೆ ಸಂಶೋಧನೆ ಮಾಡಬಹುದಾದ ಹೊಸ ಹೊಸ ವಿಷಯಗಳನ್ನು ವಿದ್ಯಾರ್ಥಿಗಳ ಗಮನಕ್ಕೆ ತರುವಲ್ಲಿ ವಿಚಾರ ಸಂಕಿರಣಗಳ ಪಾತ್ರ ಬಹಳ ದೊಡ್ಡದಿದ್ದು, ಈಗಾಗಲೇ ಮಾಡಿರುವ ಸಂಶೋಧನೆಗಳ ವಿಷಯ ಮಂಡನೆಗೂ ಅವಕಾಶಗಳು ದೊರೆಯುತ್ತವೆ. ಸಾಮಾನ್ಯವಾಗಿ ಇಲ್ಲಿ ಅತ್ಯುನ್ನತ ಮಟ್ಟದ ಚರ್ಚೆಗಳು ನಡೆಯುವುದರಿಂದ ವಿದ್ಯಾರ್ಥಿಗಳ ಯೋಚನಾ ಮಟ್ಟವೂ ಹೆಚ್ಚುತ್ತದೆ.
Advertisement
ಹೊಸ ವಿದ್ಯಾರ್ಥಿಗಳ ಪರಿಚಯಕೇವಲ ಜ್ಞಾನಾರ್ಜನೆಗೆ ಮಾತ್ರವಲ್ಲದೆ ಹೊಸ ಪರಿಚಯಕ್ಕೂ ವಿಚಾರ ಸಂಕಿರಣಗಳು ಕಾರಣವಾಗುತ್ತದೆ. ಬೇರೆ ಬೇರೆ ಸ್ಥಳಗಳಲ್ಲಿ ಕಾರ್ಯಕ್ರಮ ನಡೆಯುವ ಕಾರಣ ಇತರ ವಿದ್ಯಾರ್ಥಿಗಳ ಪರಿಚಯವಾಗುವ ಜತೆಗೆ ಆಲೋಚನೆಗಳು, ಸಂಶೋಧನೆಗಳ ವಿನಿಮಯವೂ ಸಾಧ್ಯವಾಗುತ್ತದೆ. - ವೃಂದಾ