Advertisement

ಧನಾತ್ಮಕ ಪರಿವರ್ತನೆ ಪ್ರಗತಿಗೆ ಪೂರಕ : ಮಹಾಬಲೇಶ್ವರ

05:35 AM Jul 21, 2017 | Team Udayavani |

ಮಂಗಳೂರು: ಧನಾತ್ಮಕ ಪರಿವರ್ತನೆಗಳು ವಿಶೇಷವಾಗಿ ಡಿಜಿಟಲ್‌ ಕ್ಷೇತ್ರದಲ್ಲಿನ ಬದಲಾವಣೆಗಳು ಬ್ಯಾಂಕಿಂಗ್‌ ಕ್ಷೇತ್ರದ ಪ್ರಗತಿಯಲ್ಲಿ ಮಹತ್ತರ ಪಾತ್ರ ವಹಿಸುತ್ತಿದ್ದು ಇವುಗಳ ಅಳವಡಿಕೆ ಕಾರ್ಯ ನಿರಂತರವಾಗಿ ಮುಂದುವರಿಸಿಕೊಂಡು ಹೋಗುವುದು ಅವಶ್ಯ ಎಂದು ಕರ್ಣಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಮಹಾಬಲೇಶ್ವರ ಎಂ.ಎಸ್‌. ಅವರು ಹೇಳಿದರು.

Advertisement

ಮಂಗಳೂರಿನಲ್ಲಿ ಬ್ಯಾಂಕಿನ ಕೇಂದ್ರ ಕಚೇರಿಯಲ್ಲಿ ಗುರುವಾರ ಜರಗಿದ ಕರ್ಣಾಟಕ ಬ್ಯಾಂಕಿನ ಪ್ರಾದೇಶಿಕ ಕಚೇರಿಗಳ ತ್ತೈಮಾಸಿಕ ವ್ಯವಹಾರ ಪ್ರಗತಿ ಪರಿಶೀಲನ ಸಭೆಯಲ್ಲಿ ಪ್ರಾದೇಶಿಕ ಕಚೇರಿಗಳ ಮುಖ್ಯಸ್ಥರನ್ನುದ್ದೇಶಿಸಿ ಮಾತನಾಡಿದ ಅವರು, ಸುರಕ್ಷಿತ ಡಿಜಿಟಲ್‌ ಪ್ರಯೋಜನಗಳನ್ನು ಗ್ರಾಹಕರಿಗೆ ವರ್ಗಾಯಿಸ ಬೇಕು ಎಂದರು. ಆರ್ಥಿಕತೆಯ ಮೂಲಗಳು ಅಭಿವೃದ್ಧಿªಗತಿಯಲ್ಲಿದ್ದು ಇದು ಇನ್ನಷ್ಟು ಏರುಗತಿಯಲ್ಲಿ ಸಾಗುವ ನಿರೀಕ್ಷೆ ಇದೆ. ಇದರಿಂದ ಬ್ಯಾಂಕಿನ ಮುಂಗಡ ವ್ಯವಹಾರ ಹೆಚ್ಚಳವಾಗಬಹುದು ಎಂದು ಅಂದಾಜಿಸಲಾಗಿದೆ ಎಂದರು.

ಬ್ಯಾಂಕಿನ ಮುಖ್ಯ ಮಹಾಪ್ರಬಂಧಕ ರಾಘವೇಂದ್ರ ಭಟ್‌ ಅವರು ಸ್ವಾಗತಿಸಿ ಪ್ರಸ್ತಾವನೆಗೈದರು. ಮಹಾಪ್ರಬಂಧಕ ವೈ.ವಿ.ಬಾಲಚಂದ್ರ ಅವರು 2017 ರ ಜು.30ಕ್ಕೆ ಅಂತ್ಯದವರೆಗಿನ ಬ್ಯಾಂಕಿನ ಅರ್ಥಿಕ ಸಾಧನೆಗಳ ವಿವರ ನೀಡಿದರು.
ಮಹಾಪ್ರಬಂಧಕರಾದ ಚಂದ್ರಶೇಖರ ರಾವ್‌ ಬಿ., ಸುಭಾಶ್ಚಂದ್ರ ಪುರಾಣಿಕ್‌, ಮರಲೀಧರ್‌ ಕೃಷ್ಣ ರಾವ್‌, ನಾಗರಾಜ ರಾವ್‌ ಬಿ. ಅವರು ಉಪಸ್ಥಿತರಿದ್ದರು. ಸಹಾಯಕ ಮಹಾಪ್ರಬಂಧಕ ಶರತ್‌ಚಂದ್ರ ಹೊಳ್ಳ ಬಿ. ವಂದಿಸಿದರು.

ದೇಶದಾದ್ಯಂತ ಇರುವ ಬ್ಯಾಂಕಿನ ಪ್ರಾದೇಶಿಕ ಕಚೇರಿಗಳ ಮುಖ್ಯಸ್ಥರು, ವಿಭಾಗಗಳ ಮುಖ್ಯಸ್ಥರು, ಕೆಂದ್ರ ಕಚೇರಿಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next