Advertisement

ಗ್ರಹಣದ ಮೂಢ ನಂಬಿಕೆ ಹೋಗಲಾಡಿಸಲು ವಿಶಿಷ್ಟ ಜಾಗೃತಿ

02:25 PM Dec 27, 2019 | Suhan S |

ಕನಕಪುರ: ಸೂರ್ಯ ಗ್ರಹಣದ ಮತ್ತು ಮೂಢನಂಬಿಕೆಗಳ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸಲು ಜಿಲ್ಲಾ ಸಮತಾ ಸೈನಿಕ ದಳದ ಸಂಘಟನೆ ಸ್ಮಶಾನದಲ್ಲಿ ಮಾಂಸಹಾರ ತಯಾರಿಸಿ ಸೇವಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಸಲಾಯಿತು.

Advertisement

ತಾಲೂಕಿನ ಹಾರೋಹಳ್ಳಿ ಸ್ಮಶಾನದಲ್ಲಿ ಜಿಲ್ಲಾ ಸಮತಾ ಸೈನಿಕ ದಳದ ಸಂಘಟನೆಯ ವತಿಯಿಂದ ಆಯೋಜಿಸಿದ್ದ ಮೌಡ್ಯ ಮತ್ತು ಮೂಢನಂಬಿಕೆಗಳ ಹೋಗಲಾಡಿಸುವ ಅರಿವು ಕಾರ್ಯಕ್ರಮದಲ್ಲಿ ಸಂಘಟನೆಯ ಪದಾಧಿಕಾರಿಗಳು ಸ್ಮಶಾನದಲ್ಲಿ ಆಹಾರ ಸೇವಿಸಿ ವಿನೂತನವಾಗಿ

ಜಾಗೃತಿ ಮೂಡಿಸಿದರು. ಸಂಘಟನೆಯ ಜಿಲ್ಲಾಧ್ಯಕ್ಷ ಕೋಟೆ ಕುಮಾರ್‌ ಮಾತನಾಡಿ, ಟಿವಿ ಮಾಧ್ಯ ಮಗಳಲ್ಲಿ ಸುಳ್ಳು ಜ್ಯೋತಿಷಿಗಳು ಜನರಿಗೆ ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಸೂರ್ಯಗ್ರಹಣ ಎನ್ನುವುದು ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರನ ಆಗಮನವಾದಾಗ ಪ್ರಕೃತಿಯ ಸಹಜ ನಿಯಮದಂತೆ ಸೂರ್ಯಗ್ರಹಣ ಆಗುತ್ತದೆ ಇದು ಎಲ್ಲರಿಗೂ ತಿಳಿದಿರುವ ವಿಚಾರ ಆದರೆ ಜನರಿಗೆ ಅರಿವು ಮೂಡಿಸಬೇಕಾದ ಮಾಧ್ಯಮಗಳು ಇದನ್ನು ಬಂಡವಾಳ ಮಾಡಿಕೊಂಡು ಟಿಆರ್‌ಪಿ ಹೆಚ್ಚಿಸಿಕೊಳ್ಳಲ್ಲು ಮೂಢನಂಬಿಕೆಗೆ ಪುಷ್ಟಿ ನೀಡುವಂತೆ ಕಾರ್ಯಕ್ರಮಗಳನ್ನು ಬಿತ್ತರಿಸಿ ನಾಗರಿಕರಲ್ಲಿ ಭಯದ ವಾತಾವರಣವನ್ನು ಸೃಷ್ಟಿಸುತ್ತಿವೆ.

ಪುರೋಹಿತ ಶಾಹಿಗಳು ಜ್ಯೋತಿಷಿಗಳು ಸೂರ್ಯಗ್ರಹಣದ ದಿನ ನೀರು, ಆಹಾರ ಸೇವಿಸಬಾರದು ಹೊರಗೆ ಹೋಗಬಾರದು. ಇದೇ ಬಣ್ಣದ ವಸ್ತ್ರವನ್ನು ಧರಿಸಬೇಕು ಎಂಬೆಲ್ಲ ಭಾವನೆಗಳನ್ನು ಮೂಡ ನಂಬಿಕೆಗಳನ್ನು ಜನರಿಗೆ ತುಂಬಿ ಜನರನ್ನು ಹಾದಿ ತಪ್ಪಿಸುತ್ತಿದ್ದಾರೆ. ಹಾಗಾಗಿ ಸಮತಾ ಸೈನಿಕ ದಳ ಜನರಲ್ಲಿ ಮೂಢನಂಬಿಕೆ ಹೋಗಲಾಡಿಸಲು ವಿನೂತನವಾಗಿ ಸ್ಮಶಾನದಲ್ಲಿ ಮಾಂಸಾಹಾರ ತಯಾರಿಸಿ ಸೇವಿಸುವ ಮೂಲಕ ಪ್ರತಿಭಟನೆ ಮಾಡಲಾಗಿದೆ ಸಂಘಟನೆಯ ಜಿಲ್ಲಾ ಗೌರವಾಧ್ಯಕ್ಷರಾದ ಎಸ್‌. ಕೆ. ಸುರೇಶ್‌ ಅವರ ಮಾರ್ಗದರ್ಶನ ಮತ್ತು ನೇತೃತ್ವದಲ್ಲಿ ಈ ಅರಿವು ಕಾರ್ಯಕ್ರಮ ನಡೆಯುತ್ತಿದೆ ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಂಜನ್‌ಮೂರ್ತಿ, ಖಜಾಂಚಿ ಬಿ.ಎಸ್‌.ರುದ್ರೇಶ್‌, ತಾಲೂಕು ಅಧ್ಯಕ್ಷ ಕೋಟೆ ಪ್ರಕಾಶ್‌, ಜಿಲ್ಲಾ ಕಾರ್ಯದರ್ಶಿ ಶಂಭು ಲಿಂಗಯ್ಯ, ರಾಮಲಿಂಗಯ್ಯ, ಸತೀಶ್‌, ಮಧುಸೂದನ್‌, ಪುಟ್ಟ, ಭಾನುಪ್ರಕಾಶ್‌, ಸೇರಿದಂತೆ ವಿವೇಕಾ ನಂದ ಐಟಿಐ ಕಾಲೇಜಿನ ವಿದ್ಯಾರ್ಥಿ ಗಳು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next