ಅಜೆಕಾರು: ಸಂಪ್ರದಾಯದ ಹೆಸರಿನಲ್ಲಿ ಮೌಡ್ಯಕ್ಕೆ ಒತ್ತು ನೀಡಿ ಧಾರ್ಮಿಕ ಆಚರಣೆಗಳಲ್ಲಿ ಮೂಢ ನಂಬಿಕೆಗಳ ವೈಭವೀಕರಣ ನಡೆಯು ತ್ತಿದ್ದು ಇದು ನಮ್ಮ ಸಂಸ್ಕೃತಿ, ಸಂಪ್ರ ದಾಯಗಳಿಗೆ ವಿರುದ್ಧವಾಗಿದ್ದು ಈ ನಿಟ್ಟಿನಲ್ಲಿ ಜನಸಮುದಾಯ ಎಚ್ಚೆತ್ತು ಕೊಳ್ಳಬೇಕಿದೆ ಎಂದು ಬಾಕೂìರು ಮಹಾಸಂಸ್ಥಾನದ ಶ್ರೀ ವಿದ್ಯಾವಾಚಸ್ಫತಿ ವಿಶ್ವಸಂತೋಷ ಸ್ವಾಮೀಜಿ ಹೇಳಿದರು.
ಅವರು ಆದಿ ಗ್ರಾಮೋತ್ಸವ ಸಮಿತಿ ಕುರ್ಪಾಡಿ ಯುವವೃಂದದ ವಿಂಶತಿ ಸಂಭ್ರಮದ ಆದಿ ಗ್ರಾಮೋತ್ಸವದ ಪ್ರಯುಕ್ತ ಅಜೆಕಾರು ಪ್ರಗತಿ ಗಣೇಶ್‌ನ ಕೆಮ್ಮಂಜ ಹಾಲ್‌ನಲ್ಲಿ ನಡೆದ ಕಾರ್ಕಳ ತಾಲೂಕಿನ 2ನೇ ಆದಿ ಗ್ರಾಮೋತ್ಸವ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಭಾರತ ತೌಳವ ರತ್ನ ಗೌರವ ಸ್ವೀಕರಿಸಿ ಮಾತನಾಡಿದರು.
ಅವಿಭಜಿತ ದ.ಕ. ಜಿಲ್ಲೆ ಬುದ್ಧಿವಂತರ ಜಿಲ್ಲೆ ಎಂದು ಹೆಸರು ಪಡೆದಿದ್ದರೂ ಸಹ ಕೆಲ ಆಚರಣೆಗಳಲ್ಲಿ ಮೂಢನಂಬಿಕೆಗಳಿಗೆ ಹೆಚ್ಚಿನ ಒತ್ತು ನೀಡುತ್ತಿರುವುದು ವಿಷಾದನೀಯ ಎಂದರು. ಕವಿ ಪ್ರೇಮಾ ವಿ. ಸೂರಿಗ ಅಧ್ಯಕ್ಷತೆ ವಹಿಸಿ ಶಾಲೆಗಳಲ್ಲಿ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ ಹಮ್ಮಿಕೊಂಡಲ್ಲಿ ಮಕ್ಕಳಲ್ಲಿ ಅಡಗಿರುವ ಪ್ರತಿಭೆ° ಅನಾವರಣಗೊಳಿಸಲು ವೇದಿಕೆ ದೊರೆತಂತಾಗುತ್ತದೆ ಎಂದರು.ಕಾರ್ಯಕ್ರಮವನ್ನು ಉಡುಪಿ ನಾದ ವೈಭವಂನ ವಾಸುದೇವ ಭಟ್ ಉದ್ಘಾಟಿಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಕಾರ್ಯಕ್ರಮದ ಸಂಯೋಜಕ ಶೇಖರ್ ಅಜೆಕಾರ್ ಮಾತನಾಡಿ ಅಜೆಕಾರಿನಲ್ಲಿ ಪ್ರಪ್ರಥಮವಾಗಿ ಗ್ರಾಮೋತ್ಸವವನ್ನು ನಡೆಸಲಾಗಿದ್ದು ಅನಂತರದ ದಿನಗಳಲ್ಲಿ ವಿವಿಧೆಡೆ ಗ್ರಾಮೋತ್ಸವ ನಡೆಯುತ್ತಿದೆ. ಗ್ರಾಮೋತ್ಸವದಲ್ಲಿ ಸಾಧಕರನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ ಎಂದರು.
ಉಡುಪಿ ಜಿ. ಪಂ. ಮಾಜಿ ಉಪಾಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ತಾ.ಪಂ. ಸದಸ್ಯರಾದ ಹರೀಶ್ ನಾಯಕ್, ಮರ್ಣೆ ಗ್ರಾ. ಪಂ. ಅಧ್ಯಕ್ಷ ದಿನೇಶ್ ಎಂ., ಸಾಹಿತಿ ಕು.ಗೋ ಉಡುಪಿ, ಆದಿ ಗ್ರಾಮೋತ್ಸವ ಸೇವಾನಿರತರಾದ ಶಂಕರ್ ಆಚಾರ್ಯ ಉಪಸ್ಥಿತರಿದ್ದರು. ಕಬತ್ತಾರ್‌ನ ಗುರಿಕಾರರಾದ ದೊಡ್ಡಣ್ಣ ಶೆಟ್ಟಿಯವರಿಗೆ ಆದಿಗ್ರಾಮೋತ್ಸವದ ಗ್ರಾಮ ಗೌರವ ನೀಡಿ ಗೌರವಿಸಲಾಯಿತು.
ರಮೇಶ್ ಕುರ್ಪಾಡಿ ನಿರೂಪಿಸಿದರು. ಪತ್ರಕರ್ತ ಶೇಖರ್ ಅಜೆಕಾರ್ ಸ್ವಾಗತಿಸಿದರು. ವೀರಣ್ಣ ಕರುವತ್ತಿ ಗೌಡರ್ ವಂದಿಸಿದರು.