Advertisement
ನರಿಯನ್ನು ಬೇಟೆಯಾಡಿ, ಗ್ರಾಮಕ್ಕೆ ತಂದು ಅದರ ಬಾಯಿಯನ್ನು ಹಗ್ಗದಿಂದ ಕಟ್ಟಿಹಾಕಲಾಗುತ್ತದೆ. ಬಳಿಕ ಬಂಧಿಯಾಗಿರುವ ಆ ನರಿಯನ್ನು ಬೀದಿ ನಾಯಿ ಗಳೊಂದಿಗೆ ಕಾಳಗಕ್ಕೆ ಬಿಡಲಾಗುತ್ತದೆ. ಬಂಧಿಯಾಗಿರುವ ಮೂಕಪ್ರಾಣಿ ನರಿಯನ್ನು ನಾಯಿಗಳು ಅಟ್ಟಾಡಿಸಿಕೊಂಡು ಕಚ್ಚುತ್ತವೆ. ಒಂದೆಡೆ ನರಿಯು ಹಿಂಸೆಯಿಂದ ನರಕಯಾತನೆ ಅನುಭವಿಸಿದರೆ, ಗ್ರಾಮಸ್ಥರು ಮಾತ್ರ ಮಜಾ ತೆಗೆದುಕೊಳ್ಳುತ್ತಾರೆ. ಇಂತಹ ಮೃಗೀಯ ಆಚರಣೆಯು, ಎಚ್.ಡಿ. ಕೋಟೆ ತಾಲೂಕು ಕೇಂದ್ರ ಸ್ಥಾನದಿಂದ ಸುಮಾರು 8 ಕಿ.ಮೀ. ಅಂತರದಲ್ಲಿರುವ ಹೆಬ್ಬಲಗುಪ್ಪೆ ಗ್ರಾಮದಲ್ಲಿ ನಡೆಸಲಾಗಿದೆ. ಇದೇ ತಿಂಗಳ 16ರಂದು ನಡೆದಿದೆ ಎನ್ನಲಾಗಿದೆ.
Related Articles
Advertisement
ದೇವಾಲಯಗಳಲ್ಲಿ ಪ್ರಾಣಿ ಬಲಿ ನಿಷೇಧಿಸಿ ಸರ್ಕಾರ ಹಾಗೂ ನ್ಯಾಯಾಲಯದಲ್ಲಿ ಆದೇಶ ಹೊರಡಿಸಿದೆ. ಇನ್ನು ವನ್ಯಜೀವಿಗಳ ಜೊತೆ ಚಲ್ಲಾಟ ವನ್ಯಜೀವಿಗಳ ಬೇಟೆಯಾಡುವುದು, ವನ್ಯಜೀವಿಗಳನ್ನು ಕಾಡಿನಿಂದ ನಾಡಿಗೆ ತಂದು ಪೋಷಣೆ ಮಾಡುವುದು ಕಾನೂನು ಬಾಹಿರ. ವನ್ಯ ಜೀವಿಗಳ ರಕ್ಷಣೆಗಾಗಿ ವನ್ಯಜೀವಿ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಯಲ್ಲಿದೆ. ಇಷ್ಟಿದ್ದರೂ ಹೆಬ್ಬಲಗುಪ್ಪೆ ಗ್ರಾಮಸ್ಥರು ನರಿಯೊಂದನ್ನು ಜೀವಂತವಾಗಿ ಅರಣ್ಯದಲ್ಲಿ ಬೇಟೆಯಾಡಿ ಬಂಧಿಸಿ ತಂದು ಇಡೀ ಗ್ರಾಮದಲ್ಲಿ ನರಿ ಮೆರವಣಿಗೆ ನಡೆಸಿ ಬಳಿಕ ದೇವಸ್ಥಾನದ ಜಾತ್ರಾ ಆವರಣದಲ್ಲಿ ನರಿ ಬಾಯಿಯನ್ನು ಹಗ್ಗದಿಂದ ಬಂಧಿಸಿ ಬೀದಿ ಕೈಗೊಳ್ಳಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.
ಹೆಬ್ಬಲಗುಪ್ಪೆಯಲ್ಲಿ ಇಂತಹ ಆಚರಣೆ ನಡೆದಿರುವುದು ನನ್ನ ಗಮನಕ್ಕೆ ಬಂದಿಲ್ಲ. ವನ್ಯಜೀವಿಗಳನ್ನು ಬೇಟೆಯಾಡಿ ತಂದು ಹಿಂಸೆ ನೀಡುವುದು ಕಾನೂನು ಬಾಹಿರವಾಗಿದೆ. ಗ್ರಾಮದಲ್ಲಿ ಈಗ ನಡೆದಿರುವ ಅಮಾನವೀಯ ಆಚರಣೆ ವಿರುದ್ಧ ಕ್ರಮ ಕೈಗೊಳ್ಳುವುದರ ಜೊತೆಗೆ ಮುಂದಿನ ವರ್ಷದಿಂದ ಇಂತಹ ಕೃತ್ಯ ನಡೆಯದಂತೆ ನೋಡಿಕೊಳ್ಳಲಾಗುವುದು. –ಆರ್.ಮಂಜುನಾಥ್, ತಹಶೀಲ್ದಾರ್
ಹೆಬ್ಬಲಗುಪ್ಪೆ ಗ್ರಾಮದಲ್ಲಿ ನರಿಯನ್ನು ಹಿಂಸಿಸಿ ಜಾತ್ರೆ ನಡೆಸಿರುವುದು ಈಗ ನಮ್ಮ ಗಮನಕ್ಕೆಬಂದಿದೆ. ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಗ್ರಾಮಕ್ಕೆ ಕಳುಹಿಸಿ, ವಿಡಿಯೋದಲ್ಲಿ ಕಂಡು ಬಂದ ವ್ಯಕ್ತಿಗಳನ್ನು ಗುರುತಿಸಿ ಮಾಹಿತಿಪಡೆಯಲಾಗುವುದು. ಬಳಿಕ ಕಾನೂನು ಕ್ರಮಗಳನ್ನು ಜರುಗಿಸಲಾಗುವುದು. –ಮಧು, ಎಚ್.ಡಿ.ಕೋಟೆ ವಲಯ ಅರಣ್ಯಾಧಿಕಾರಿ
-ಎಚ್.ಬಿ.ಬಸವರಾಜು