Advertisement

ವಿಜ್ಞಾನದಿಂದ ಮೂಢನಂಬಿಕೆ ದೂರ

04:47 PM Oct 12, 2020 | Suhan S |

ಯಾದಗಿರಿ: ವಿಜ್ಞಾನದಿಂದ ಮೂಢನಂಬಿಕೆ, ಕಂದಾಚಾರ ದೂರವಾಗಲಿದೆ. ಡಿಜಿಟಲ್‌ ಯುಗಕ್ಕೆ ಕಾಲಿಡುತ್ತಿರುವ ಸನ್ನಿವೇಶದಲ್ಲಿ ಭಾನಾಮತಿಯಂತಹ ಪ್ರಕರಣಗಳು ಜೀವಂತವಾಗಿರುವುದು ವಿಷಾದನೀಯ ಸಂಗತಿ ಎಂದು ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ ಅಧ್ಯಕ್ಷ ಗಿರೀಶ ಕಡ್ಲೇವಾಡ ಹೇಳಿದರು.

Advertisement

ಯಾದಗಿರಿ ನಗರದ ಹೊರವಲಯದಲ್ಲಿರುವ ಎಪಿಎಫ್‌ದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ ಹಾಗೂ ಅಜೀಂ ಪ್ರೇಮಜಿಫೌಂಡೇಶನ್‌ ಇವರ ಸಹಯೋಗದಲ್ಲಿ ಕಲಬುರಗಿ ವಿಭಾಗದ ಬಾಲ ವಿಜ್ಞಾನೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಕಳೆದ ನಾಲ್ಕು ದಶಕಗಳಿಂದ ಬಾಲ ವಿಜ್ಞಾನ ಪತ್ರಿಕೆಯ ಕೊಡುಗೆ ಗುರುತರವಾಗಿದೆ. ವೈಜ್ಞಾನಿಕ ಚಿಂತನೆಗಳನ್ನು ಕನ್ನಡ ಭಾಷೆಯ ಮೂಲಕ ಸಾಮಾನ್ಯ ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನು ಪತ್ರಿಕೆ ಮಾಡುತ್ತಿದೆ. ಇದನ್ನು ಡಿಜಿಟಲೀಕರಣ ಮಾಡಲಾಗುತ್ತಿದ್ದು, ವೆಬ್‌ಸೈಟ್‌ ನಲ್ಲಿ ಹಳೆಯ ಪತ್ರಿಕೆಗಳನ್ನು ಪಡೆದುಕೊಳ್ಳಬಹುದು ಎಂದರು.

ಕಾರ್ಯಕಾರಿ ಸಮಿತಿ ಸದಸ್ಯ ಮಹಾರುದ್ರಪ್ಪ ಅಣದೂರು ಅಧ್ಯಕ್ಷತೆ ವಹಿಸಿದ್ದರು. ಡಾ. ಕುಂಟೆಪ್ಪ ಗೌರಿಪುರ, ಪ್ರಕಾಶ ಲಕ್ಕಶೆಟ್ಟಿ, ಎಪಿಎಂಸಿ ಮಾಜಿ ಅಧ್ಯಕ್ಷ ಭೀಮನಗೌಡ ಪಾಟೀಲ ಕ್ಯಾತನಾಳ, ಎಪಿಎಪ್‌ ಸಂಸ್ಥೆ ಸಂಯೋಜಕಿ ಅಕ್ಕಮಹಾದೇವಿ, ಬಾಲವಿಜ್ಞಾನೋತ್ಸವ ಸಂಯೋಜಕ ಸೂರ್ಯಪ್ರಕಾಶ ಘನಾತೆ,ರಾಜಶೇಖರ ಪಾಟೀಲ, ಶ್ರೀಶೈಲ ಎನ್‌. ಪೂಜಾರಿ,ಅಶೋಕ ಕೆಂಭಾವಿ, ಶರಣಗೌಡ, ಮುಖ್ಯಗುರು ಲಿಂಗಾರೆಡ್ಡಿ ನಾಯಕ ಇತರರಿದ್ದರು. ಪ್ರಾಂಶುಪಾಲ ಕರಬಸಯ್ಯ ದಂಡಿಗಿಮಠ, ರಾಮಕೃಷ್ಣ ಕಟ್ಕಾವಲಿ ಮತ್ತು ಸಾಯಪ್ಪ ಚಂಡ್ರಿಕಿ ವಿವಿಧ ಗೋಷ್ಠಿಗಳನ್ನು ನಿರೂಪಿಸಿದರು.

ಕನ್ನಡದಲ್ಲಿ ವಿಜ್ಞಾನ ಸಂವಹನ ಕುರಿತು ಚಿಟಗುಪ್ಪ ಜ್ಞಾನಾಮೃತ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಶೈಲಜಾ ಜಿ.ಹುಡಗೆ ಉಪನ್ಯಾಸ ನೀಡಿದರು. ಇದಕ್ಕೂ ಮುಂಚೆ ಬಾಲ ವಿಜ್ಞಾನ ಪತ್ರಿಕೆಯ ಲೇಖಕರಾದ ಅಮರೇಗೌಡ ಲಿಂಗಸುಗೂರ, ಸಂತೋಷಕುಮಾರ ಎಸ್‌.ಪಿ. ಆಳಂದ, ಶೈಲಜಾ ಗುಂಡಪ್ಪ ಬೀದರ ಅವರನ್ನು ಸನ್ಮಾನಿಸಿ ಅಭಿನಂದನಾ ಪತ್ರಗಳನ್ನು ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next