ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ಚಿತ್ರ ವಿಕ್ರಾಂತ್ ರೋಣ ಬಿಡುಗಡೆಗೆ ಸಜ್ಜಾಗಿದೆ. ಇದೇ ಯುಗಾದಿಯಂದು ಅಂದರೆ ಎಪ್ರಿಲ್ 2ರಂದು ಟೀಸರ್ ಬಿಡುಗಡೆಯಾಗಲಿದೆ. ಅನೂಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣ ಚಿತ್ರದ ರಿಲೀಸ್ ಡೇಟ್ ಎಪ್ರಿಲ್ ಎರಡಂದು ತಿಳಿಯಲಿದೆ.
ಎಪ್ರಿಲ್ 2ರ ಬೆಳಗ್ಗೆ 9.55ಕ್ಕೆ ವಿಕ್ರಾಂತ್ ರೋಣ ಟೀಸರ್ ಬಿಡುಗಡೆಯಾಗಲಿದೆ. ಬೇರೆ ಬೇರೆ ಭಾಷೆಗಳಲ್ಲಿ ಹಲವು ಸೂಪರ್ ಸ್ಟಾರ್ ಗಳು ಈ ಟೀಸರ್ ಬಿಡುಗಡೆ ಮಾಡಲಿದ್ದಾರೆ.
ವಿಕ್ರಾಂತ್ ರೋಣ ತೆಲುಗು ಟೀಸರ್ ನ್ನು ಮೆಗಾಸ್ಟಾರ್ ಚಿರಂಜಿವಿ ಬಿಡುಗಡೆ ಮಾಡಿದರೆ, ತಮಿಳು ಟೀಸರ್ ನ್ನು ನಟ ಸಿಂಬು ರಿಲೀಸ್ ಮಾಡಲಿದ್ದಾರೆ. ಮಲಯಾಳಂ ಟೀಸರನ್ನು ಲೆಜೆಂಡರಿ ನಟ ಮೋಹನ್ ಲಾಲ್ ಬಿಡುಗಡೆ ಮಾಡಲಿದ್ದಾರೆ.
ಇದನ್ನೂ ಓದಿ:ತನ್ನ ವಿಶಿಷ್ಟ ಸಂಭ್ರಮಾಚರಣೆಯ ಹಿಂದಿನ ಕಾರಣ ಹೇಳಿದ ವಾನಿಂದು ಹಸರಂಗ
ವಿಕ್ರಾಂತ್ ರೋಣ ಚಿತ್ರದಲ್ಲಿ ಕಿಚ್ಚ ಸುದೀಪ್ ಜೊತೆಗೆ ನಿರೂಪ್ ಬಂಢಾರಿ, ನೀತಾ ಅಶೋಕ್, ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತವಿರುವ ಚಿತ್ರಕ್ಕೆ ಶಾಲಿನಿ ಜ್ಯಾಕ್ ಮಂಜು ಮತ್ತು ಅಲಂಕಾರ್ ಪಾಂಡ್ಯನ್ ಬಂಡವಾಳ ಹೂಡಿದ್ದಾರೆ.