ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ನಿಧನಾ ನಂತರ ತೆರವಾದ ಆರ್.ಕೆ.ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಇದೀಗ ಕಳೆಕಟ್ಟಿದ್ದು, ಸೂಪರ್ ಸ್ಟಾರ್ ರಜನಿಕಾಂತ್ ಅವರು ಬಿಜೆಪಿಗೆ ಬೆಂಬಲಿಸುತ್ತಿದ್ದಾರೆ ಎನ್ನುವ ಕುರಿತಾಗಿ ರಾಜಕೀಯ ಚರ್ಚೆಗಳು ಜೋರಾಗಿವೆ.
ಚರ್ಚೆಗಳು ಜೋರಾಗಿರುವ ಬೆನ್ನಲ್ಲೇ ರಜನಿಕಾಂತ್ ಅವರು ಮುಂಬರಲಿರುವ ಚುನಾವಣೆಯಲ್ಲಿ ಯಾರಿಗೂ ನನ್ನ ಬೆಂಬಲವಿಲ್ಲ ಎಂದು ಗುರುವಾರ ಟ್ವೀಟ್ ಮಾಡಿದ್ದಾರೆ.
My support is for no one in the coming elections.
– Rajinikanth (@superstarrajini) March 23, 2017
Related Articles
ಆರ್.ಕೆ.ನಗರದಿಂದ ಬಿಜೆಪಿ ಸ್ಪರ್ಧಾಳಾಗಿರುವ ಸಂಗೀತ ನಿರ್ದೇಶಕ ಗಂಗೈ ಅಮ್ರಾನ್ ಅವರು ಸೂಪರ್‌ಸ್ಟಾರ್ ರಜನೀಕಾಂತ್ ಅವರನ್ನು ಭೇಟಿಯಾಗಿದ್ದರು.
ಅಮ್ರಾನ್ ಅವರ ಗೆಲುವಿಗೆ ರಜನಿಕಾಂತ್ ವೈಯಕ್ತಿಕವಾಗಿ ಶುಭಾಶಯವನ್ನೂ ಕೋರಿದ್ದರು. ಆ ಬಳಿಕ ರಜನಿ ಅವರು ಬಿಜೆಪಿ ಪರವಾಗಿದ್ದಾರೆ ಎಂದು ಬಿಂಬಿಸಿ ವ್ಯಾಪಕ ಪೋಸ್ಟ್‌ಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡಿದ್ದವು.
ಗಂಗೈ ಅಮ್ರಾನ್ ಅವರು ಖ್ಯಾತ ಸಂಗೀತ ನಿರ್ದೇಶಕ ಇಳೆಯರಾಜ ಅವರ ಸೋದರ. ರಜನಿಕಾಂತ್ ಅವರ ಪೊಯೆಸ್ ಗಾರ್ಡನ್ ನಿವಾಸದಲ್ಲಿ ಗಂಗೈ ಅವರು ಭೇಟಿ ಯಾಗಿದ್ದರು.
ಗಂಗೈ ಅವರ ಪ್ರತಿಸ್ಪರ್ಧಿ ಯಾಗಿ ಎಐಎಡಿಎಂಕೆಯಿಂದ ಮುಖ್ಯ ಕಾರ್ಯದರ್ಶಿ ಶಶಿಕಲಾ ಅವರ ಸೋದರ ಸಂಬಂಧಿ ಟಿಟಿವಿ ದಿನಕರನ್ ಸ್ಪರ್ಧಿಸುತ್ತಿದ್ದಾರೆ.