Advertisement

ರಜನಿಕಾಂತ್ ಆರೋಗ್ಯದಲ್ಲಿ ಚೇತರಿಕೆ; ಆಸ್ಪತ್ರೆಯಿಂದ ಡಿಸ್ಚಾರ್ಜ್

05:24 PM Dec 27, 2020 | Adarsha |

ನವದೆಹಲಿ: ತೀವ್ರ ರಕ್ತದೊತ್ತಡದ ಹಿನ್ನೆಲೆಯಲ್ಲಿ ಹೈದರಾಬಾದ್ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಇಂದು ಮಧ್ಯಾಹ್ನ 3:30 ಕ್ಕೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಅಭಿಮಾನಿಗಳಲ್ಲಿ ಸಂತಸ ಮನೆಮಾಡಿದೆ.

Advertisement

ಕುರಿತಾಗಿ ಅಪೋಲೋ ಆಸ್ಪತ್ರೆಯಿಂದ ಮಾಹಿತಿ ದೊರೆತಿದ್ದು, ಇದೀಗ ರಜನಿಕಾಂತ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಅವರ ರಕ್ತದೊತ್ತಡವೂ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ ಎಂದಿದ್ದಾರೆ.

ರಜನಿಕಾಂತ್ ಅವರು ಈಗ ಗುಣಮುಖರಾಗಿದ್ದಾರೆ. ಆದರೆ ಅವರಿಗೆ ಒಂದು ವಾರಗಳ ಕಾಲ ಸಂಪೂರ್ಣ ಬೆಡ್ ರೆಸ್ಟ್ ಅವಶ್ಯಕತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ:ಐಸಿಸಿ ದಶಕದ ತಂಡ ಪ್ರಕಟ : ಏಕದಿನ,ಟಿಟ್ವಿಂಟಿಯಲ್ಲಿ ಧೋನಿ ನಾಯಕ : ಭಾರತೀಯರೇ ಮೇಲುಗೈ

ಅಣ್ಣಾತೆಸಿನಿಮಾದ ಚಿತ್ರೀಕರಣದ ಹಿನ್ನೆಲೆಯಲ್ಲಿ ನಟ ರಜನಿಕಾಂತ್ ಹೈದರಾಬಾದ್ ಗೆ ತೆರಳಿದ್ದರು. ಚಿತ್ರೀಕರಣದ ವೇಳೆ ಸಿನಿಮಾ ತಂಡದ ಕೆಲವರಿಗೆ ಕೋವಿಡ್ ಸೋಂಕು ದೃಢ ಪಟ್ಟಿದ್ದು, ನಡುವೆ ರಜನಿಕಾಂತ್ ಅವರ ಆರೋಗ್ಯದಲ್ಲಿಯೂ ಏರುಪೇರುಗಳಾಗಿ ಆತಂಕ ಸೃಷ್ಟಿಯಾಗಿತ್ತು. ಬಳಿಕ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ನಟ ರಜನಿಕಾಂತ್ ಅವರಿಗೆ ಕೋವಿಡ್ ನೆಗೆಟೀವ್ ಬಂದಿತ್ತು ಎಂದು ವರದಿಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next