Advertisement
ನೆಲ್ಸನ್ ದಿಲೀಪ್ ಕುಮಾರ್ ಅವರ ʼಜೈಲರ್ʼ ಭಾರತದಲ್ಲಿ ಮಾತ್ರವಲ್ಲದೆ ವರ್ಲ್ಡ್ ವೈಡ್ ನಲ್ಲೂ ಜನರ ಮನವನ್ನು ಗೆಲ್ಲುತ್ತಿದೆ. ಸಿನಿಮಾ ಕಮಲ್ ಹಾಸನ್ ಅವರ ʼವಿಕ್ರಮ್ʼ ಸಿನಿಮಾದ ಸಾರ್ವಕಾಲಿಕ ದಾಖಲೆಯನ್ನು ಉಡೀಸ್ ಮಾಡಿದೆ. ವರ್ಲ್ಡ್ ವೈಡ್ 9 ದಿನದಲ್ಲಿ ʼಜೈಲರ್ʼ 448 ಕೋಟಿ ರೂ ಗಳಿಸಿದ್ದು, ಭಾನುವಾರ 500 ಕೋಟಿ ದಾಟುವ ಸಾಧ್ಯತೆಯಿದೆ.
Related Articles
Advertisement
ತಮಿಳು ರಾಜ್ಯ ಮಾತ್ರವಲ್ಲದೆ, ಕೇರಳದಲ್ಲಿ ಅತೀ ಹೆಚ್ಚು ಗಳಿಕೆ ಕಂಡ ತಮಿಳು ಸಿನಿಮಾವೆಂಬ ಹೆಗ್ಗಳಿಕೆಗೆ ʼಜೈಲರ್ʼ ಪಾತ್ರವಾಗಿದೆ. ಕರ್ನಾಟಕ, ತೆಲುಗು ರಾಜ್ಯಗಳಲ್ಲೂ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ.
ಇನ್ನು ವಿದೇಶದಲ್ಲಿ ʼಜೈಲರ್ʼ ಅತೀ ಹೆಚ್ಚು ಕೆಲಕ್ಷನ್ ತಮಿಳು ಸಿನಿಮಾದ ಸಾಲಿನಲ್ಲಿ 3ನೇ ಸ್ಥಾನದಲ್ಲಿದೆ.
ವಿಶ್ವಾದ್ಯಂತ ಅತಿ ಹೆಚ್ಚು ಹಣ ಗಳಿಸಿದ ಹತ್ತು ಕಾಲಿವುಡ್ ಚಲನಚಿತ್ರಗಳು ಈ ಕೆಳಗಿನಂತಿವೆ:
2.0: 665 ಕೋಟಿ ರೂ.
ಪೊನ್ನಿಯಿನ್ ಸೆಲ್ವನ್: ಭಾಗ 1: 496 ಕೋಟಿ ರೂ.
ಜೈಲರ್: 448 ಕೋಟಿ (9 ದಿನಗಳು) ರೂ.
ವಿಕ್ರಮ್: 430 ಕೋಟಿ ರೂ.
ಪೊನ್ನಿಯಿನ್ ಸೆಲ್ವನ್: ಭಾಗ 2: 346 ಕೋಟಿ ರೂ.
ವಾರಿಸು: 304 ಕೋಟಿ ರೂ.
ಬಿಗಿಲ್: 299 ಕೋಟಿ ರೂ.
ಎಂದಿರನ್: 288 ಕೋಟಿ ರೂ.
ಕಬಾಲಿ: 287 ಕೋಟಿ ರೂ.
ಸರ್ಕಾರ್: 258 ಕೋಟಿ ರೂ.
ʼಜೈಲರ್ʼ ಅಂತಿಮವಾಗಿ 600 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಸಾಧ್ಯತೆಯಿದೆ. ಒಂದು ವೇಳೆ ಹೀಗೆ ಆದರೆ ವಿಶ್ವಾದ್ಯಂತ ಅತಿ ಹೆಚ್ಚು ಹಣ ಗಳಿಸಿದ 10 ಕಾಲಿವುಡ್ ಸಿನಿಮಾಗಳಲ್ಲಿ 2ನೇ ಸ್ಥಾನದಲ್ಲಿ ʼಜೈಲರ್ʼ ನಿಲ್ಲುತ್ತದೆ.