Advertisement

ಗ್ರಾ. ಪಂ.ಗಳಿಗೆ ಪರಮಾಧಿಕಾರ: ದೇವಿಪ್ರಸಾದ್‌ ಶೆಟ್ಟಿ

01:17 AM Oct 24, 2020 | mahesh |

ಕಾಪು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ಇಲಾಖೆಯು ಆಯೋಜಿಸಿದ್ದ ಗ್ರಾಮೀಣಾಭಿವೃದ್ಧಿ ಕುರಿತಾದ ಸಂವಾದದಲ್ಲಿ ಪಾಲ್ಗೊಳ್ಳಲು ಆಯ್ಕೆಯಾಗಿದ್ದ ಬೆಳಪು ಗ್ರಾ.ಪಂ. ಅಧ್ಯಕ್ಷ ಡಾ| ದೇವಿಪ್ರಸಾದ್‌ ಶೆಟ್ಟಿ ಅವರ ಜತೆಗೆ ಇಲಾಖೆಯ ಅಧಿಕಾರಿಗಳು ಅ. 22ರಂದು ಆನ್‌ಲೈನ್‌ ಮೂಲಕ ಸಂವಾದ ನಡೆಸಿದರು. ಶೆಟ್ಟಿ ಅವರು ಬೆಳಪು ಗ್ರಾ.ಪಂ.ನಲ್ಲಿದ್ದು, ಸಂವಾದದಲ್ಲಿ ಭಾಗಿಯಾದರು.

Advertisement

ರಾಜ್ಯದ ಪ್ರತಿನಿಧಿಯಾಗಿ ಭಾಗವಹಿಸಿದ್ದ ಅವರು ಗ್ರಾಮ ಪಂ.ಗಳಲ್ಲಿರುವ ವಿವಿಧ ಲೋಪ ದೋಷಗಳ ಬಗ್ಗೆ ಸವಿವರವಾಗಿ ತಿಳಿಸಿದರು. ಗ್ರಾಮೀಣಾಭಿವೃದ್ಧಿಗೆ ಸಂಬಂಧಪಟ್ಟ 29 ವಿಷಯಗಳ ಕುರಿತಾಗಿ ಸಂವಾದದಲ್ಲಿ ಚರ್ಚಿ ಸಲಾಯಿತು.

ನ. 8ರ ಚರ್ಚೆಗೆ ಆಹ್ವಾನ
ಬೆಳಪು ಗ್ರಾಮದಲ್ಲಿರುವ ವಿವಿಧ ಸೌಕರ್ಯ ಯೋಜನೆಗಳ ಸಮಗ್ರ ವಿವರಗಳನ್ನು ಪಡೆದ ಅಧಿಕಾರಿಗಳು ಈ ಬಗ್ಗೆ ಅಧ್ಯಯನಕ್ಕಾಗಿ ಕೇಂದ್ರದ ಉನ್ನತ ಮಟ್ಟದ ಅಧಿಕಾರಿಗಳ ನಿಯೋಗವನ್ನು ಕಳುಹಿಸುವ ಭರವಸೆ ನೀಡಿದರು. ನ.8ರಂದು ದಿಲ್ಲಿಯಲ್ಲಿ ನಡೆಯುವ 2ನೇ ಸುತ್ತಿನ ಚರ್ಚೆಯಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಲಾಯಿತು.

ಈ ಸಂವಾದದಲ್ಲಿ ಇಲಾಖಾ ಪ್ರ. ಕಾರ್ಯದರ್ಶಿ ಸುನಿಲ್‌ ಕುಮಾರ್‌, ಕಾರ್ಯದರ್ಶಿ ಕುಶವಂತ ಸೇಠಿ, ಹಣಕಾಸು ವಿಭಾಗದ ಜಂಟಿ ಕಾರ್ಯದರ್ಶಿ ರೇಖಾ ಭಾಗವತ್‌, ಹಿಮಾಚಲ ಪ್ರದೇಶದ ಪ್ರತಿನಿಧಿ ರಾಜ್‌ಕುಮಾರ್‌, ಪಂಜಾಬ್‌ನ ಪ್ರತಿನಿಧಿ ಪಲ್ಲವಿ ಠಾಕೂರ್‌, ಉತ್ತರಾಖಂಡದ ಪ್ರತಿನಿಧಿ ಬಲವಂತ್‌ಸಿಂಗ್‌ ರಾವತ್‌, ಹರಿಯಾಣದ ಪ್ರತಿನಿಧಿ ಪ್ರವೀಣ್‌ ಕೌರ್‌ ಪಾಲ್ಗೊಂಡಿದ್ದರು.

ಬೆಳಪು ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ಎಚ್‌.ಆರ್‌. ರಮೇಶ್‌, ಸಂಪನ್ಮೂಲ ವ್ಯಕ್ತಿ ಜಯವಂತ್‌ ರಾವ್‌, ಕಾರ್ಯದರ್ಶಿ ಸುಮಿತ್ರಾ ಆಚಾರ್ಯ ಉಪಸ್ಥಿತರಿದ್ದರು.

Advertisement

ಮಾದರಿ ಗ್ರಾ. ಪಂ.: ಸುನೀಲ್‌ ಕುಮಾರ್‌
ಸಂವಾದ ನೆರವೇರಿಸಿಕೊಟ್ಟ ಇಲಾ ಖೆಯ ಪ್ರಧಾನ ಕಾರ್ಯದರ್ಶಿ ಸುನಿಲ್‌ ಕುಮಾರ್‌ ಮಾತನಾಡಿ, ಪಂಚಾಯತ್‌ ಪ್ರತಿನಿಧಿಗಳಿಗೆ ಇಚ್ಛಾ ಶಕ್ತಿಯಿದ್ದಲ್ಲಿ ವಿವಿಧ ಮೂಲಗಳ ಸಂಪನ್ಮೂಲಗಳನ್ನು ಕ್ರೋಡೀಕರಿಸಿ ನಗರಕ್ಕೆ ಹೋಲುವ ಮಾದರಿಯಲ್ಲಿ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಿದೆ ಎನ್ನುವುದನ್ನು ಬೆಳಪು ಗ್ರಾ. ಪಂ.ನ ಅಭಿವೃದ್ಧಿ ಕಾರ್ಯ ಗಳನ್ನು ಗಮನಿಸಿದಾಗ ತಿಳಿದು ಬರುತ್ತದೆ. ಇದು ದೇಶದ ಎಲ್ಲ ಗ್ರಾ. ಪಂ. ಗಳಿಗೂ ಮಾದರಿಯಾಗು ವಂಥದ್ದಾಗಿದೆ ಎಂದರು.

ಗ್ರಾ. ಪಂ.ಗಳಿಗೆ ಪರಮಾಧಿಕಾರ: ಶೆಟ್ಟಿ
ಪಂಚಾಯತ್‌ಗಳಿಗೆ ಪರ ಮಾಧಿಕಾರ ನೀಡುವುದು, ಗ್ರಾಮ ಸಭೆಗಳ ಅಧಿಕಾರ ಮೊಟಕುಗೊಳಿಸ ದಿರುವುದು, ಕೇರಳ ಮಾದರಿಯಲ್ಲಿ ಗ್ರಾಮ ಪಂಚಾಯತ್‌ಗಳಿಗೆ ಹೆಚ್ಚಿನ ಅಧಿಕಾರ ಮತ್ತು ಅನುದಾನ ನೀಡುವುದು ಮೊದಲಾದ ಬೇಡಿಕೆ ಗಳನ್ನು ಈಡೇರಿಸುವುದರೊಂದಿಗೆ ಮಹಾತ್ಮಾ ಗಾಂಧೀಜಿ ಅವರ ಗ್ರಾಮ ಸ್ವರಾಜ್‌ ವ್ಯವಸ್ಥೆಯ ಕನಸುಗಳನ್ನು ಸಾಕಾರಗೊಳಿಸಲು ಇನ್ನಷ್ಟು ಬಲ ನೀಡುವಂತೆ ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next