Advertisement

ಉತ್ತರ ಕನ್ನಡ ಜಿಲ್ಲೆ ಇಬ್ಭಾಗ:ಡಾ.ಮಹೇಶ ಜೋಶಿ ಬಹಿರಂಗ ಬೆಂಬಲ

09:38 PM May 02, 2022 | Team Udayavani |

ಅಂಕೋಲಾ : ಉತ್ತರ ಕನ್ನಡ ಜಿಲ್ಲೆಯನ್ನು ಆಡಳಿತಾತ್ಮಕ ಮತ್ತು ಬೆಳವಣಿಗೆಯ ದೃಷ್ಟಿಯಿಂದ ಇಬ್ಭಾಗ ಮಾಡಬೇಕು ಎನ್ನುವ ಮೂಲಕ ಕಸಾಪ ರಾಜ್ಯಾಧ್ಯಕ್ಷ ಡಾ. ಮಹೇಶ ಜೋಶಿ ಜಿಲ್ಲೆ ಇಬ್ಭಾಗಕ್ಕೆ ಕಸಾಪದ ಕಾರ್ಯಕ್ರಮವೊಂದರ ವೇದಿಕೆಯಲ್ಲಿ ಬಹಿರಂಗ ಬೆಂಬಲ ನೀಡಿದರು.

Advertisement

ಸೋಮವಾರ ನಾಡವರ ಸಭಾಭವನದಲ್ಲಿ ಉ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಏರ್ಪಡಿಸಿದ್ದ ಉತ್ತರ ಕನ್ನಡ ಜಿಲ್ಲೆಯ ಬರೆಹಗಾರರ ಸಮ್ಮಿಲನ ಅಕ್ಷರೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇದನ್ನೂ ಓದಿ : ಬೈಲಹೊಂಗಲ ಜಿಲ್ಲೆ ಆಗುವುದು ಶತಸಿದ್ಧ: ಸಚಿವ ಉಮೇಶ್ ಕತ್ತಿ

ಉತ್ತರ ಕನ್ನಡ ಜಿಲ್ಲೆ ಭೌಗೋಳಿಕವಾಗಿ ವಿಸ್ತಾರ ಮತ್ತು ಕರಾವಳಿ, ಮಲೆನಾಡು, ಬಯಲುಸೀಮೆಯನ್ನು ಹೊಂದಿದ ಜಿಲ್ಲೆ. ಜಿಲ್ಲಾ ಕೇಂದ್ರಕ್ಕೆ ಆಡಳಿತಾತ್ಮಕ ಕೆಲಸಕ್ಕೆ ಬರಲು ಜನರು ಹೆಣಗಾಡುತ್ತಿದ್ದಾರೆ. ಅಭಿವೃದ್ದಿಯಲ್ಲೂ ಹಿಂದುಳಿದೆ. ಧಾರವಾಡ ಜಿಲ್ಲೆ ಧಾರವಾಡ, ಗದಗ, ಹಾವೇರಿ ಜಿಲ್ಲೆಗಳಾಗಿ ಒಡೆದ ಮೇಲೆ ಮೂರು ಜಿಲ್ಲೆಗಳು ಬೆಳೆದಿವೆ. ಅಭಿವೃದ್ಧಿ ಕಾಣುತ್ತಿವೆ. ಇಂತಹ ವ್ಯವಸ್ಥೆ ಉ.ಕ ಜಿಲ್ಲೆಯಲ್ಲೂ ಆಗಬೇಕು. ಇದರಲ್ಲಿ ರಾಜಕೀಯ ಇಲ್ಲವೇ ಇಲ್ಲ. ಜಿಲ್ಲೆ ಇಬ್ಭಾಗಕ್ಕೆ ಕಸಾಪ ಬೆಂಬಲ ಸೂಚಿಸುವುದಲ್ಲದೆ ಒತ್ತಾಯ ಮಾಡುತ್ತದೆ ಎಂದು ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next