Advertisement
ಸೋಮವಾರ ಕಿಮ್ಸ್‌ನ ಕಾಯಂ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಈಗಾಗಲೇ ಸುಪರ್ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಹೊರ ರೋಗಿಗಳ ವಿಭಾಗ ಕಾರ್ಯನಿರ್ವಹಿಸುತ್ತಿದೆ. ವೈದ್ಯಕೀಯ ಉಪಕರಣಗಳ ಅಳವಡಿಕೆ ಸೇರಿದಂತೆ ಇನ್ನಿತರೆ ಕೆಲಸ ನಡೆದಿದೆ. ಸಿಬ್ಬಂದಿ ನೇಮಕಾತಿಗೆ ಟೆಂಡರ್ ಆಹ್ವಾನಿಸಲಾಗಿದೆ. ವೈದ್ಯಕೀಯ ಶಿಕ್ಷಣ ಸಚಿವರು ಸಹ ಶೀಘ್ರ ಆರಂಭಿಸುವಂತೆ ಗಡುವು ನೀಡಿದ್ದಾರೆ. ಹೀಗಾಗಿ ಇದರ ಕಾರ್ಯಾರಂಭಕ್ಕೆ ವಿಳಂಬ ಮಾಡುವುದಿಲ್ಲ ಎಂದರು.
Related Articles
Advertisement
ಅಗ್ನಿ ಸುರಕ್ಷತೆಗೆ 2 ಕೋಟಿ ರೂ. ಅನುದಾನ ಅವಶ್ಯವಾಗಿದೆ. ಅತಿಥಿಗೃಹ ನಿರ್ಮಿಸಲು, ಇನ್ನು 80 ವೆಂಟಿಲೇಟರ್ ಅಳವಡಿಸಲು ಪ್ರಯತ್ನಿಸಲಾಗುವುದು. ಅಪಘಾತ ವಿಭಾಗವನ್ನು 10 ಸಾವಿರ ಚದುರಡಿಯಷ್ಟು ವಿಸ್ತರಿಸಲಾಗುವುದು. ಲಿನಾಕ್ ಯಂತ್ರವನ್ನು ವಿಸ್ತರಿಸಲಾಗುವುದು. ವೈರಾಲಜಿ ಲ್ಯಾಬ್ ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಿಮ್ಸ್‌ನಲ್ಲಿ ದಾಖಲಾಗುವ ಹೃದ್ರೋಗಿಗಳಿಗೆ ತಾಂತ್ರಿಕಸಹಾಯ ಮಾಡುವುದಾಗಿ ಜಯದೇವ ಆಸ್ಪತ್ರೆಯ ಎನ್. ಮಂಜುನಾಥ ಅವರು ಭರವಸೆ ನೀಡಿದ್ದಾರೆ.
138 ಕೋಟಿ ರೂ. ವೆಚ್ಚದಲ್ಲಿ ಕಿಮ್ಸ್‌ನಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳ ಸಮಗ್ರ ಅಭಿವೃದ್ಧಿಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಜಾವೇದ ಅಖ್ತರ ಸೂಚನೆಯಂತೆ ಕಿಮ್ಸ್ ನಲ್ಲಿ ಅಪಘಾತ ವಿಭಾಗ ಸೇರಿದಂತೆ ಪ್ರಮುಖ ವಿಭಾಗಗಳಲ್ಲಿ 5-10 ಸಿಬ್ಬಂದಿ ಶಸ್ತ್ರಸಜ್ಜಿತಗೊಳಿಸಿ ಭದ್ರತೆ ಕಲ್ಪಿಸಲಾಗುವುದು ಎಂದು ಹೇಳಿದರು. ಕಿಮ್ಸ್‌ನ ಮುಖ್ಯ ಆಡಳಿತಾಧಿಕಾರಿ ರಾಜಶ್ರೀ ಜೈನಾಪುರ ಮಾತನಾಡಿ, ಕಿಮ್ಸ್‌ನಲ್ಲಿ ಕರ್ತವ್ಯ ಲೋಪ ಹಾಗೂ ಸೇವೆಯಲ್ಲಿ ನಿರ್ಲಕ್ಷ್ಯ ತೋರುವವರಿಗೆ ನೋಟಿಸ್ ನೀಡಲಾಗುತ್ತಿದ್ದು, ಇದರ ಪರಿಶೀಲನೆಗೆ ತಂಡ ರಚಿಸಲಾಗಿದೆ ಎಂದರು. ಉಪ ವೈದ್ಯಕೀಯ ಅಧೀಕ್ಷಕ ಡಾ| ರಾಜಶೇಖರ ದ್ಯಾಬೇರಿ ಇನ್ನಿತರರಿದ್ದರು.