Advertisement
ದಿನನಿತ್ಯದ ಚಟುವಟಿಕೆಗಳ ನಿರ್ವಹಣೆಯಲ್ಲಿ ನಿಮ್ಮ ಮೆದುಳು ಅತಿ ದೊಡ್ಡ ಪಾತ್ರವನ್ನು ವಹಿ ಸುತ್ತದೆ. ತ್ವರಿತವಾಗಿ ಸ್ಪಂದಿಸುವ, ಗ್ರಹಿಸುವ, ಅರ್ಥ ಮಾಡಿಕೊಳ್ಳುವ ಮತ್ತು ಕಾರ್ಯ ಮಾಡುವ ನಿಮ್ಮ ಸಾಮರ್ಥ್ಯವು ಮೆದುಳಿನ ಆರೋಗ್ಯದ ಮೇಲೆ ಅವಲಂಬಿತವಾಗಿರುತ್ತದೆ. ದೇಹದ ಇತರ ಅಂಗಗ ಳಂತೆಯೇ ಪ್ರತಿನಿತ್ಯ ಮೆದುಳಿಗೂ ಪೌಷ್ಟಿಕತೆ ಮತ್ತು ಶಕ್ತಿ ಅಗತ್ಯ. ಮೆದುಳಿನ ವ್ಯಾಯಾಮವೂ ನಮ್ಮ ಚಟುವಟಿಕೆಗೆ ಒಳ್ಳೆಯ ಪರಿಣಾಮಗಳನ್ನುಂಟು ಮಾಡುತ್ತದೆ.
Related Articles
ಸೂಪರ್ ಬ್ರೇನ್ ಯೋಗವು ನಿಮ್ಮ ಕಿವಿಯ ಲ್ಲಿರುವ ಆಕ್ಯುಪಂಕ್ಚರ್‌ನ ಸ್ಥಳಗಳನ್ನು ಸಕ್ರಿಯವಾಗಿ ಸುತ್ತದೆ. ಇವು ನಿಮ್ಮ ಮೆದುಳಿನ “ಗ್ರೇ ಮ್ಯಾಟರ’ನ್ನು ಪ್ರಚೋದಿಸುತ್ತದೆ. ಸೂಪರ್ ಬ್ರೇನ್ ಯೋಗ ವು ಮೆದುಳಿನ ಎಡ-ಬಲ ಭಾಗಗಳ ನಡುವೆ ಸಮನ್ವ ಯತೆಯನ್ನು ತರುತ್ತದೆ. ಶಕ್ತಿಯ ಮಟ್ಟಗಳನ್ನು ಹಂಚಿ, ಪ್ರಶಾಂತತೆಯನ್ನು ತರಿಸುತ್ತದೆ. ಆಲೋಚಿಸುವ ಸಾಮ ರ್ಥ್ಯವನ್ನು ಹೆಚ್ಚಿಸಿ, ಮಾನಸಿಕ ಶಕ್ತಿ ವರ್ಧಿಸುತ್ತದೆ.
Advertisement
ಏಕಾಗ್ರತೆ, ಮತ್ತು ಸ್ಮರಣ ಶಕ್ತಿಯನ್ನು ಸುಧಾರಿ ಸುತ್ತದೆ. ನಿರ್ಧಾರವನ್ನು ಮಾಡುವ ಕುಶಲತೆಗಳನ್ನು ವರ್ಧಿ ಸುತ್ತದೆ. ಒತ್ತಡವನ್ನು ಅಥವಾ ವರ್ತನೆಯ ಸಮ ಸ್ಯೆಗಳನ್ನು ನೀಗಿಸುತ್ತದೆ. ಮಾನಸಿಕವಾಗಿ ಹೆಚ್ಚು ಸಮತೋಲನ ವುಳ್ಳವರಾಗಿರುತ್ತೀರಿ. ಧ್ಯಾನದಿಂದ ಮೆದು ಳಿನ ಶಕ್ತಿಯನ್ನು ವರ್ಧಿಸಿಕೊಳ್ಳಬಹುದು.
ಮಿದುಳಿನ ಆರೋಗ್ಯಕ್ಕೆ ಬ್ರೇನ್ ಯೋಗ ತುಂಬಾ ಅಗತ್ಯ. ಮೆದುಳಿನ ರಕ್ತ ಸಂಚಾರ ವನ್ನು ಹೆಚ್ಚಿಸಿ, ನರ ವ್ಯವಸ್ಥೆಯನ್ನು ಬಲಿಷ್ಠಗೊಳಿಸುತ್ತದೆ. ಜತಗೆ ಬೌದ್ಧಿಕ ಮಟ್ಟ ಚುರುಕಾಗಿರುವಂತೆ ಇದು ಮಾಡುತ್ತದೆ. ಇದನ್ನು ಎಲ್ಲರೂ ಮಾಡಬಹುದಾಗಿದೆ.-ಗೋಪಾಲಕೃಷ್ಣ ದೇಲಂಪಾಡಿ
ಯೋಗ ಶಿಕ್ಷಕ, ಮಂಗಳೂರು -ನೇರವಾಗಿ, ಉದ್ದವಾಗಿ ನಿಲ್ಲಿ. ನಿಮ್ಮ ತೋಳುಗಳು ದೇಹದ ಬದಿಯಲ್ಲಿರಲಿ.
-ನಿಮ್ಮ ಎಡತೋಳನ್ನು ಎತ್ತಿ ಮತ್ತು ನಿಮ್ಮ ಬಲಗಿವಿಯ ಕೆಳ ಭಾಗವನ್ನು ನಿಮ್ಮ ಹೆಬ್ಬೆರಳಿನಿಂದ ಮತ್ತು ತೋರುಬೆರಳಿನಿಂದ
ಹಿಡಿಯಿರಿ. ನಿಮ್ಮ ಹೆಬ್ಬೆರಳು ಮುಂದಿರಲಿ.
-ದೀರ್ಘ ಉಸಿರನ್ನು ಒಳಗೆ ತೆಗೆದುಕೊಳ್ಳಿ ಮತ್ತು ಕುಳಿತುಕೊಳ್ಳುವ ಭಂಗಿಗೆ ಬನ್ನಿ.
-ಈ ಭಂಗಿಯಲ್ಲಿ 2-3 ಸೆಕೆಂಡುಗಳ ವರೆಗೆ ಇರಿ.
-ಮೇಲೇಳುತ್ತ ನಿಧಾನವಾಗಿ ಉಸಿರನ್ನು ಹೊರಗೆ ಬಿಡಿ. ಇದರಿಂದ ಒಂದು ಚಕ್ರ ಮುಗಿಯುತ್ತದೆ. ಈ ಚಕ್ರವನ್ನು ಪ್ರತಿನಿತ್ಯ 15 ಸಲ ಪುನರಾವರ್ತಿಸಿ. ಯಾವೆಲ್ಲ ಯೋಗ ಮಾಡಬೇಕು
1. ಭಾÅಮರಿ ಪ್ರಾಣಾಯಾಮ ದುಂಬಿಯ ಉಸಿರಾಟ
ಕೋಪ, ಆಶಾಭಂಗ ಮತ್ತು ಆತಂಕದಂತಹ ನಕಾರಾತ್ಮಕ ಭಾವನೆಗಳನ್ನು ತೊಲಗಿಸುತ್ತದೆ. ಏಕಾಗ್ರತೆ ಮತ್ತು ಜ್ಞಾಪಕ ಶಕ್ತಿಯನ್ನು ಸುಧಾರಿಸುತ್ತದೆ. ವಿಶ್ವಾಸವನ್ನು ಹೆಚ್ಚಿಸುತ್ತದೆ. 2.ಪಶ್ಚಿಮೋತ್ತಾ¤ನಾಸನ ಕುಳಿತು ಮುಂದಕ್ಕೆ ಬಗ್ಗುವುದು
ಬೆನ್ನೆಲುಬನ್ನು ವಿಸ್ತರಿಸುತ್ತದೆ ಮತ್ತು ಒತ್ತಡವನ್ನು ನಿವಾರಿಸುತ್ತದೆ. ಕೋಪ, ಕಿರಿಕಿರಿಯಂತಹ ನಕಾರಾತ್ಮಕ ಭಾವನೆಗಳನ್ನು ತೆಗೆದು ಮನಸ್ಸಿಗೆ ವಿಶ್ರಾಮ ನೀಡುತ್ತದೆ. 3.ಸೇತು ಬಂಧಾಸನ
ಕತ್ತು ಮತ್ತು ಬೆನ್ನೆಲುಬನ್ನು ಬಲಿಷ್ಠಗೊಳಿಸಿ, ವಿಸ್ತರಿಸುತ್ತದೆ. ಬಿಗಿಯಾಗಿರುವ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ.ಮೆದುಳಿನ ರಕ್ತಚಲನೆ ಸುಧಾರಿಸುತ್ತದೆ. ಮೆದುಳು ಮತ್ತು ನರವ್ಯವಸ್ಥೆಯನ್ನು ಪ್ರಶಾಂತ ಗೊಳಿಸುತ್ತದೆ. ಇದರಿಂದ ಆತಂಕ, ಒತ್ತಡ ಮತ್ತು ಖನ್ನತೆಯು
ಕುಗ್ಗುತ್ತದೆ. 4.ಸರ್ವಾಂಗಾಸನ
ಭುಜಗಳ ಹಲಗೆ
ಥೈರಾಯ್ಡ ಮತ್ತು ಪ್ಯಾರಾಥೈರಾಯ್ಡ ಗ್ರಂಥಿಯನ್ನು ನಿಯಂತ್ರಿಸುತ್ತದೆ ಮತ್ತು ಸಾಮಾನ್ಯ ಸ್ಥಿತಿಗೆ ತರುತ್ತದೆ. ಹೆಚ್ಚು ರಕ್ತವು ಪೀನಿಯಲ್ ಮತ್ತು ಹೈಪೊಥಲಾಮಸ್ ಗ್ರಂಥಿಯನ್ನು ತಲುಪಿ ಮೆದುಳಿಗೆ ಹೆಚ್ಚು ಪೌಷ್ಟಿಕತೆಯನ್ನು ನೀಡಿ ಪೋಷಿಸುತ್ತದೆ. 5.ಹಲಾಸನ ನೇಗಿಲ ಆಸನ
ಮೆದುಳಿನ ರಕ್ತ ಸಂಚಾರವನ್ನು ಹೆಚ್ಚಿಸಿ, ನರ ವ್ಯವಸ್ಥೆಯನ್ನು ಪ್ರಶಾಂತಗೊಳಿಸುತ್ತದೆ. ಬೆನ್ನನ್ನು, ಕತ್ತನ್ನು ವಿಸ್ತರಿಸುತ್ತದೆ, ಒತ್ತಡವನ್ನು, ದಣಿವನ್ನು ನಿವಾರಿಸುತ್ತದೆ.