Advertisement
“ಆರು ವರ್ಷ ಮೂರು ಸಿನಿಮಾ …’– ಇದು ಧ್ರುವ ಸರ್ಜಾ ಅವರ ಕೆರಿಯರ್ ಗ್ರಾಫ್. ಧ್ರುವ ಸರ್ಜಾ ಚಿತ್ರರಂಗಕ್ಕೆ ಬಂದು ಆರು ವರ್ಷ ಆಗಿದೆ. ಈ ಆರು ವರ್ಷದಲ್ಲಿ ಧ್ರುವ ಮಾಡಿದ್ದು ಕೇವಲ ಮೂರೇ ಮೂರು ಸಿನಿಮಾ. “ಅದ್ಧೂರಿ’, “ಬಹದ್ದೂರ್’ ಹಾಗೂ ಇಂದು ತೆರೆಕಾಣುತ್ತಿರುವ “ಭರ್ಜರಿ’. ಒಬ್ಬ ಬೇಡಿಕೆ ಇರುವ ನಟ ಈ ತರಹ ಎರಡು ವರ್ಷಕ್ಕೊಂದು ಸಿನಿಮಾ ಮಾಡಿದರೆ ಹೇಗೆ ಎಂಬ ಪ್ರಶ್ನೆ ಬರುತ್ತದೆ. ಇದು ಧ್ರುವಗೂ ಗೊತ್ತಾಗಿದೆ. ಅದೇ ಕಾರಣಕ್ಕೆ ಧ್ರುವ ಇನ್ನು ಮುಂದೆ ವರ್ಷಕ್ಕೆರಡು ಸಿನಿಮಾ ಮಾಡಲು ನಿರ್ಧರಿಸಿದ್ದಾರೆ. “ನನಗೂ ವರ್ಷಕ್ಕೆರಡು ಸಿನಿಮಾ ಮಾಡಬೇಕೆಂಬ ಆಸೆ ಇದೆ. ಇನ್ನು ಮುಂದೆ ಆ ನಿಟ್ಟಿನಲ್ಲಿ
ಖಂಡಿತಾ ಪ್ರಯತ್ನಿಸುತ್ತೇನೆ. ಈ ಮೂರು ಸಿನಿಮಾಗಳಲ್ಲಿ ಕೊಂಚ ಸಮಸ್ಯೆಯಾಗಿ ತಡವಾಯಿತು.
ಮಾತೆಂದರೆ ಧ್ರುವಗೆ ಕಥೆ ಒಪ್ಪಿಸೋದು ತುಂಬಾ ಕಷ್ಟ ಎಂದು. ಯಾವುದೇ ಕಥೆಯಾದರೂ ಅಳೆದು ತೂಗಿ, ತುಂಬಾ ಲೆಕ್ಕಾಚಾರ ಹಾಕುತ್ತಾರೆ ಧ್ರುವ. ಆ ಕಾರಣಕ್ಕಾಗಿಯೇ ಅವರು ಅಷ್ಟು ಸುಲಭವಾಗಿ ಯಾವ ಕಥೆಯನ್ನು ಒಪ್ಪೋದಿಲ್ಲ ಎಂಬುದು. “ನಾನು ನಿಮ್ಮ ಜಾಗದಲ್ಲಿ ನಿಂತು ಕಥೆ ಕೇಳುತ್ತೇನೆ’ ಎಂಬ ಉತ್ತರ ಧ್ರುವ ಅವರಿಂದ ಬರುತ್ತದೆ. “ಸಿನಿಮಾದಲ್ಲಿ ನಾನು ಹೀರೋ ಇರಬಹುದು. ಆದರೆ, ಯಾವುದೇ ಕಥೆಯನ್ನು ಕೇಳುವಾಗ ಒಬ್ಬ ಸಾಮಾನ್ಯ ಪ್ರೇಕ್ಷಕನಾಗಿ ಕೇಳುತ್ತೇನೆ. ಸಿನಿಮಾ ನೋಡುವಾಗ ಒಬ್ಬ ಪ್ರೇಕ್ಷಕನಿಗೆ ಏನೆಲ್ಲಾ ಡೌಟ್ ಬರುತ್ತದೋ ಆ ಎಲ್ಲಾ ಸಂದೇಹಗಳು ನನಗೂ ಬರುತ್ತದೆ. ಅವೆಲ್ಲವನ್ನು ಬಗೆಹರಿಸಿಕೊಂಡು, ಒಬ್ಬ ಪ್ರೇಕ್ಷಕನಾಗಿ ನಾನು ತೃಪ್ತನಾದ ನಂತರಷ್ಟೇ ನಾನು ಕಥೆ ಒಪ್ಪೋದು. ಥಿಯೇಟರ್
ಗೆ ಬಂದ ಪ್ರೇಕ್ಷಕರು ಖುಷಿಯಾಗಿ ಹೋಗಬೇಕೆಂಬುದು ನನ್ನ ಉದ್ದೇಶ’ ಎನ್ನುವುದು ಧ್ರುವ ಮಾತು. ಧ್ರುವ ಅವರನ್ನು ಹುಡುಕಿಕೊಂಡು ಸಾಕಷ್ಟು ಕಥೆಗಳು ಬರುತ್ತಿವೆಯಂತೆ. ಬಹುತೇಕ ನಿರ್ದೇಶಕರು ಕೂಡಾ ಔಟ್ ಅಂಡ್ ಔಟ್ ಎಂಟರ್‌ಟೈನ್‌ಮೆಂಟ್ ಜೊತೆಗೆ ಸಿಕ್ಕಾಪಟ್ಟೆ ಎನರ್ಜಿ ಇರುವ ಪಾತ್ರದಲ್ಲೇ ಧ್ರುವ ಅವರನ್ನು ಕಲ್ಪಿಸಿಕೊಂಡು ಬರುತ್ತಾರಂತೆ. ಆ ತರಹ ಬರುವವರಿಗೆ ಧ್ರುವ ಸಲಹೆ ಏನು ಎಂಬ ಕುತೂಹಲ ಸಹಜವಾಗಿಯೆ ಬರುತ್ತದೆ. “ನಾನು ಸಲಹೆ ಕೊಡುವ ಮಟ್ಟಿಗೆ ಬೆಳೆದಿಲ್ಲ. ಮೊದಲೇ ಹೇಳಿದಂತೆ ಕಥೆ ಕೇಳಿ ನನಗಿರುವ ಸಂದೇಹಗಳನ್ನು ಬಗೆಹರಿಸಿಕೊಳ್ಳುತ್ತೇನೆ. ಆದಷ್ಟು ಒಂದು ಸಿನಿಮಾದಿಂದ ಮತ್ತೂಂದು ಸಿನಿಮಾಕ್ಕೆ ಹೊಸತನ್ನು ನೀಡಲು ಪ್ರಯತ್ನಿಸುತ್ತೇನೆ’ ಎನ್ನುತ್ತಾರೆ.
Related Articles
Advertisement
ಧ್ರುವ ಸರ್ಜಾ ಅವರಿಗೆ ಸಿನಿಮಾ ಮಾಡಬೇಕಾದರೆ ಅವರ ಮಾವ ಅರ್ಜುನ್ ಸರ್ಜಾ ಅವರಿಗೆ ಕಥೆ ಹೇಳಬೇಕು, ಮೊದಲು ಅವರು ಕಥೆಯನ್ನು ಓಕೆ ಮಾಡಿದ ನಂತರ ಧ್ರುವ ಸಿನಿಮಾ. ಮೂರು ಸಿನಿಮಾಗಳಲ್ಲೂ ಇದೇ ನಡೆದುಕೊಂಡು ಬಂದಿದೆ. ಧ್ರುವಗೆ ಆ ಬಗ್ಗೆ ಯಾವುದೇ ಬೇಸರವಿಲ್ಲ. ಅವರಿಗೆ ಖುಷಿ ಇದೆ. “ಮಾವನಿಗೆ ಚಿತ್ರರಂಗದಲ್ಲಿರುವ ಅನುಭವ ದೊಡ್ಡದು. ಅವರ ಅನುಭವದಲ್ಲಿ ಅವರಿಗೆ ಯಾವ ಕಥೆ ಒಳ್ಳೆಯದು, ಯಾವುದು ನನಗೆ ಒಗ್ಗೊದಿಲ್ಲ ಎಂಬುದು ಗೊತ್ತಾಗುತ್ತದೆ. ನಾವು ಅನುಭವಕ್ಕೆ ಬೆಲೆ ಕೊಡಬೇಕು. ಅದಕ್ಕಿಂತ ಹೆಚ್ಚಾಗಿ ಅವರು ನನ್ನ ಗಾಡ್‌ಫಾದರ್.ಅವರ ಕಥೆಯ ಜಡ್ಜ್ ಮೆಂಟ್ ಯಾವತ್ತೂ ಸರಿಯಾಗಿರುತ್ತದೆ’ ಎನ್ನುವ ಮೂಲಕ ಮಾವನ ಬಗ್ಗೆ ಖುಷಿಯಾಗುತ್ತಾರೆ ಧ್ರುವ. ಇಂದು ಧ್ರುವ ಅವರ “ಭರ್ಜರಿ’ ಚಿತ್ರ ಬಿಡುಗಡೆಯಾಗುತ್ತಿದೆ. ಸಹಜವಾಗಿಯೇ ಧ್ರುವಗೆ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದೆ. “ನಾವಂತೂ ಹಂಡ್ರೆಡ್ ಪರ್ಸೆಂಟ್ ಕೊಟ್ಟು ಸಿನಿಮಾ
ಮಾಡಿದ್ದೀವಿ. ಭಯ, ಭಕ್ತಿ, ಶ್ರದ್ಧೆಯಿಂದ ಕೆಲಸ ಮಾಡಿದ್ದೇವೆ. ಚಿತ್ರಕ್ಕೆ ಎಲ್ಲಾ ಕಡೆಗಳಿಂದಲೂ ಬೇಡಿಕೆ ಬರುತ್ತಿವೆ. ಟ್ರೇಲರ್, ಹಾಡುಗಳನ್ನು ಜನ ಇಷ್ಟಪಟ್ಟಿದ್ದಾರೆ. ಈಗಾಗಲೇ ಬುಕ್ಕಿಂಗ್‌ನಲ್ಲೂ ಪಾಸಿಟಿವ್ ಅಂಶಗಳು ಎದ್ದು ಕಾಣುತ್ತಿವೆ. ಜನ ಕೂಡಾ ಒಂದು ಒಳ್ಳೆಯ ಪ್ರೊಡಕ್ಟ್ ಅನ್ನು ಇಷ್ಟಪಡುತ್ತಾರೆಂಬ ವಿಶ್ವಾಸವಿದೆ’ ಎನ್ನುವ ಧ್ರುವ ಅಭಿಮಾನಿಗಳ ಪ್ರತಿಕ್ರಿಯೆಗಾಗಿ ಎದುರು ನೋಡುತ್ತಿದ್ದಾರೆ. ರವಿಪ್ರಕಾಶ್ ರೈ