Advertisement

ಭರ್ಜರಿ ಲುಕ್‌ಗೆ ಸೂಪರ್‌ ಬೆಲ್ಟ್

01:03 AM Mar 06, 2020 | mahesh |

ಬದಲಾದ ಫ್ಯಾಷನ್‌ ಲೋಕದಲ್ಲಿ ಇಂದು ವೈವಿಧ್ಯಮಯವಾದ ಉಡುಪುಗಳ ಜತೆಗೆ ಮ್ಯಾಚಿಂಗ್‌ ವಸ್ತುಗಳೆಡೆಗೆ ಗ್ರಾಹಕರು ಹೆಚ್ಚು ಗಮನಹರಿಸುತ್ತಿದ್ದಾರೆ. ನಾವು ಧರಿಸಿದ ಬಟ್ಟೆಗೆ ಅನುಗುಣವಾಗಿ ಅದಕ್ಕೆ ಹೋಲುವ ಬಣ್ಣ, ಸ್ಟೈಲ್‌ ಸಹಿತ ಎಲ್ಲವೂ ಮ್ಯಾಚಿಂಗ್‌ ಇರಬೇಕು ಎಂದು ಆಶಿಸುತ್ತೇವೆ. ಆ ಬಣ್ಣಕ್ಕೆ ತಕ್ಕಂತೆ ಒಪ್ಪಿಕೊಳ್ಳುವಂತಹ ಕಿವಿಯೋಲೆಯಿಂದ ಹಿಡಿದು ಚಪ್ಪಲಿಯವರೆಗೂ ಮ್ಯಾಚಿಂಗ್‌ಗೆ ಹಾಕಿಕೊಳ್ಳುತ್ತೇವೆ.

Advertisement

ಅದರಲ್ಲಿ ಇತ್ತೀಚೆಗೆ ಆಕರ್ಷಕವಾಗಿರುವ ವಿವಿಧ ವಿನ್ಯಾಸ ಬೆಲ್ಟ್‌ಗಳು ನಮ್ಮ ಧರಿಸಿರುವ ಬಟ್ಟೆಗಳ ನೋಟವನ್ನು ಇನ್ನಷ್ಟು ಚೆಂದಗಾಣಿಸುತ್ತದೆ.ಬಿಗ್‌, ವೈಡ್‌, ಬಕ್ಕಲ ಬೆಲ್ಟ್ ಟ್ರೆಂಡ್‌ ಸ್ಲಿಮ್‌ ಲುಕ್‌ ನೀಡುತ್ತದೆ. ಮಾಡೆಲ್‌, ಸೆಲೆಬ್ರಿಟಿಗಳು ಸಹಿತ ಸಾಮಾನ್ಯ ಯುವತಿಯರ ನೆಚ್ಚಿನ ಆಯ್ಕೆಗಳ ಬೆಲ್ಟ್‌ಗಳ ಮಾಹಿತಿ ಇಲ್ಲಿದೆ.

ಕಲರ್‌ಫ‌ುಲ್‌ ಕಾಟನ್‌ ಬೆಲ್ಟ್, ಲೆದರ್‌ ಬೆಲ್ಟ್,ಜೂಟ್‌ ಬೆಲ್ಟ್, ಹೂ ಬಳ್ಳಿಯ ಬೆಲ್ಟ್, ಪ್ಲಾಸ್ಟಿಕ್‌ ಬೆಲ್ಟ್ ಗಳು ಹುಡುಗಿಯರ ನೆಚ್ಚಿನ ಆಯ್ಕೆಯ ಬೆಲ್ಟ್‌ಗಳಾಗಿವೆ. ಇದಷ್ಟೇ ಅಲ್ಲದೆ ಅಂಗೈ ಅಗಲದ ಲೆದರ್‌ ಹಾಗೂ ಕಾಟನ್‌ ಕಲರ್‌ಫ‌ುಲ್‌ ಬೆಲ್ಟ್‌ಗಳು ಸೊಂಟಕ್ಕೆ ನಾವು ದಿರಿಸಿ ನೋಟವನ್ನು ಹೆಚ್ಚಿಸಿ ನಮ್ಮ ಅಂದವನ್ನು ಇನ್ನಷ್ಟು ಚಂದಗಾಣಿಸುವಲ್ಲಿ ಒಂದು ಮಾತಿಲ್ಲ. ಕಾಂಟ್ರೆಸ್ಟ್‌ ಶೇಡ್‌ನ‌ ಬೆಲ್ಟ್ ಜೀನ್ಸ್‌ ಫ್ಯಾಶನ್‌ನ್ನು ಬದಲಿಸಿದೆ ಎಂದರೆ ತಪ್ಪಿಲ್ಲ.

ಬಿಗ್‌ ಬೆಲ್ಟ್
ಬಿಗ್‌ಬೆಲ್ಟ್‌ಗಳು ಕಾಲೇಜು ಹುಡುಗಿಯರ ಡ್ರೆಸ್‌ಕೋಡ್‌ಗಳಲ್ಲಿ ಒಂದಾಗಿ ಹೊಸ ನೋಟವನ್ನು ಪಡೆದಿದೆ. ಸೆಲೆಬ್ರಿಟಿಗಳಂತೂ ಬಿಗ್‌ ಬೆಲ್ಟ್ ಇಲ್ಲದೆ ಹೊರನಡೆಯುವುದು ಬಹಳ ಕಡಿಮೆಯಾಗಿದೆ. ಇವುಗಳು ಹಳೆ ಫ್ಯಾಶನ್‌ಗಳನ್ನು ಮತ್ತೇ ನೆನಪಿಸುವಂತಾಗಿದೆ.

ಡಿಸೈನರ್‌ ಬೆಲ್ಟ್
ಬೆಲ್ಟ್ ಗಳು ನಮ್ಮ ಸೊಂಟಕ್ಕೆ ಕಟ್ಟಿ ಹಾಕಿ ಕೊಳ್ಳುವುದು ಮಾತ್ರವಲ್ಲ ಅದು ಸುಂದರ ನೋಟವನ್ನು ನೀಡುತ್ತದೆ. ಎಲ್ಲಿಲ್ಲದ ಬೇಡಿಕೆ ಇರುವ ಬೆಲ್ಟ್‌ಗಳು ಇತ್ತೀಚಿನ ಸ್ಲಿಮ್‌ ಲುಕ್‌ನ ಒಂದು ಗುಟ್ಟಾಗಿದೆ. ಅದರಲ್ಲಿಯೂ ಡಿಸೈನರ್‌ ಬೆಲ್ಟ್‌ಗಳಿಗೆ ಭಾರೀ ಬೇಡಿಕೆ ಇದೆ.

Advertisement

ಅಂದುಕೊಳ್ಳಲಾಗದ ಕಾಂಟ್ರಸ್ಟ್‌ ಶೇಡ್ಸ್‌ಗಳ ಪೇಟೆಂಟ್‌ ಬೆಲ್ಟ್, ಬೂಟ್‌ ಕಟ್‌ ಜೀನ್ಸ್‌ ಗೆ ಹೊಂದಿಕೊಳ್ಳುವ ವೆರ್ಸ್ಟನೈಸ್‌ ಆನಾರ್ಟ್‌ ಬಕ್ಕಲ್ಸ್‌ ಬೆಲ್ಟ್, ಹವರ್‌ ಗ್ಲಾಸ್‌ ಶೇಪ್‌ ಬೆಲ್ಟ್‌ಗಳು ಹೊಸ ನೋಟವನ್ನು ನೀಡುತ್ತಿದೆ. ಇತ್ತೀಚಿನ ಟ್ರೆಂಡಿ ಬೆಲ್ಟ್ ಗಳ ಮಾದರಿಯಲ್ಲಿ ಸೇರಿಕೊಂಡು ಹುಡುಗಿಯರ ನೆಚ್ಚಿನ ಫ್ಯಾಶನ್‌ಗೆ ಸೇರಿಕೊಂಡಿದೆ.

ಯಾವ ದಿರಿಸಿಗೆ ಯಾವ ಬೆಲ್ಟ್
ಕೇವಲ ಬೆಲ್ಟ್ ಹಾಕಿಕೊಂಡರೆ ಸಾಲದು ಯಾವ ದಿರಿಸಿಗೆ ಯಾವುದು ಸೂಕ್ತ ಅನ್ನುವುದನ್ನು ಅರಿತು ಆಯಾಯ ಫ್ಯಾಷನ್‌ಗೆ ಒಪ್ಪವಂತಹ ಬೆಲ್ಟ್ ಆರಿಸುವುದು ಉತ್ತಮ.

ಹೊಸ ನೋಟ
ಹಿಂದೆ ಇದ್ದ ವೈಡ್‌ ಬೆಲ್ಟ್, ಟ್ರೊಶರ್‌ ಬೆಲ್ಟ್, ಬ್ರೈಡ್‌ ಹುಕ್‌, ಟ್ರಾವೆಲ್‌ ಸ್ಟಡ್ಸ್‌, ಹೊಸ ನೋಟವನ್ನು ಪಡೆದು ಮತ್ತೇ ಮರಳಿದ್ದು ಫ್ಯಾಶನ್‌ಗೆ ಹೊಸ ಮೆರುಗನ್ನು ನೀಡಿದೆ. ಲೂಸಾಗಿರುವ ಪ್ಯಾಂಟ್‌ ಹಿಡಿದಿರಲು ಬೆಲ್ಟ್ ಅಂದುಕೊಂಡಿದ್ದ ಅಂದಿನ ದಿನ ಇಂದು ಬೆಲ್ಟ್ ಇಲ್ಲದೆ ಯಾವುದು ಇಲ್ಲ ಅನ್ನುವಷ್ಟರ ಮಟ್ಟಿಗೆ ಫ್ಯಾಷನ್‌ ಬೆಲ್ಟ್ ಗಳು ತನ್ನ ಸ್ಥಾನವನ್ನು ಅಲಂಕರಿಸಿವೆ. ಗೌನ್‌, ಫ್ರಾಕ್‌, ಮಿಡಿ , ಸ್ಕರ್ಟ್‌ ಹಾಗೂ ಜೀನ್ಸ್‌, ಫಾರ್ಮಲ್‌, ಬಿಲೋ ವೇಸ್ಟ್‌ ಪ್ಯಾಂಟ್‌ಗಳೇ ಇರಲಿ ಅಲ್ಲಿಯೂ ಈ ಫ್ಯಾಷನ್‌ ಬೆಲ್ಟ್ ನದ್ದೇ ಕಾರುಬಾರು.

Advertisement

Udayavani is now on Telegram. Click here to join our channel and stay updated with the latest news.

Next