Advertisement

ಸತತ ಸೋಲಿನ ಹಿನ್ನೆಲೆಯಲ್ಲಿ ಪ್ರಯೋಗಕ್ಕಿಳಿದ ಸನ್ ರೈಸರ್ಸ್: ವಾರ್ನರ್ ಬದಲು ಹೊಸ ನಾಯಕನ ಆಯ್ಕೆ

05:02 PM May 01, 2021 | Team Udayavani |

ಹೊಸದಿಲ್ಲಿ: ಈ ಬಾರಿಯ ಐಪಿಎಲ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲು ವಿಫಲವಾಗಿದೆ. ಇದುವರೆಗೆ ಆಡಿದ ಆರು ಪಂದ್ಯಗಳಲ್ಲಿ ಹೈದರಾಬಾದ್ ತಂಡ ಗೆಲುವು ಕಂಡಿದ್ದು ಒಂದರಲ್ಲಿ ಮಾತ್ರ. ಹೀಗಾಗಿ ಕೂಟದ ಮಧ್ಯದಲ್ಲೇ ನಾಯಕತ್ವ ಬದಲಾವಣೆಗೆ ಫ್ರಾಂಚೈಸಿ ಮುಂದಾಗಿದೆ.

Advertisement

ಇದುವರೆಗೆ ತಂಡವನ್ನು ಮುನ್ನಡೆಸುತ್ತಿದ್ದ ಡೇವಿಡ್ ವಾರ್ನರ್ ಬದಲಿಗೆ ಕೇನ್ ವಿಲಿಯಮ್ಸನ್ ಗೆ ತಂಡದ ನಾಯಕತ್ವ ನೀಡಲು ಸನ್ ರೈಸರ್ಸ್ ಹೈದರಾಬಾದ್  ಫ್ರಾಂಚೈಸಿ ಮುಂದಾಗಿದೆ. ಈ ಬಗ್ಗೆ ಫ್ರಾಂಚೈಸಿ ಸ್ವತಃ ಹೇಳಿಕೊಂಡಿದ್ದು, ಮುಂದಿನ ಪಂದ್ಯದಿಂದ ಕೇನ್ ವಿಲಿಯಮ್ಸನ್ ತಂಡವನ್ನು ಮುನ್ನಡೆಸಲಿದ್ದಾರೆ ಎಂದಿದೆ.

ಇದನ್ನೂ ಓದಿ:ಈ ತಂಡದ ಬ್ಯಾಟಿಂಗ್ ನೋಡಿದರೆ ಬೋರಿಂಗ್ ಸಿನಿಮಾ ನೋಡಿದ ಹಾಗೆ ಅನಿಸುತ್ತಿದೆ: ಸೆಹವಾಗ್

ಅಷ್ಟೇ ಅಲ್ಲದೆ ಮುಂದಿನ ಪಂದ್ಯದಲ್ಲಿ ತಂಡದ ಆಡುವ ಬಳಗದಲ್ಲಿ ವಿದೇಶಿ ಆಟಗಾರರು ಕೂಡಾ ಬದಲಾಗಲಿದ್ದಾರೆ ಎಂದಿದೆ. ಸನ್ ರೈಸರ್ಸ್ ಹೈದರಾಬಾದ್ ತಂಡ ತನ್ನ ಮುಂದಿನ ಪಂದ್ಯವನ್ನು ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡಲಿದೆ.

ಕೇನ್ ವಿಲಿಯಮ್ಸನ್ ಅವರು ಈ ಹಿಂದೆಯೂ ಹೈದರಾಬಾದ್ ತಂಡವನ್ನು ಮುನ್ನಡೆಸಿದ್ದರು.  ಡೇವಿಡ್ ವಾರ್ನರ್ ಬಾಲ್ ಟ್ಯಾಂಪರಿಂಗ್ ವಿವಾದದಿಂದ ನಿಷೇಧ ಶಿಕ್ಷೆ ಅನುಭವಿಸಿದ ವೇಳೆ 2018 ಮತ್ತು 2019ರಲ್ಲಿ ವಿಲಿಯಮ್ಸನ್ ತಂಡದ ಚುಕ್ಕಾಣಿ ಹಿಡಿದಿದ್ದರು.

Advertisement

ಇದನ್ನೂ ಓದಿ:ಬೊರಿವಲಿ ಗಲ್ಲಿಯಲ್ಲಿ ಆಫ್ ಸ್ಪಿನ್ನರ್ ಆಗಿದ್ದ ರೋಹಿತ್ ದ್ವಿಶತಕದ ಕನಸೂ ಕಂಡಿರಲಿಕ್ಕಿಲ್ಲ…

ಒಟ್ಟು 26 ಪಂದ್ಯದಲ್ಲಿ ಹೈದರಾಬಾದ್ ತಂಡವನ್ನು ಮುನ್ನಡೆಸಿರುವ ಕೇನ್, 14 ಪಂದ್ಯಗಳಲ್ಲಿ ಜಯ ಗಳಿಸಿದ್ದು, 12 ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ. ಈ ಬಾರಿಯ ಐಪಿಎಲ್ ನಲ್ಲಿ ತಂಡ ಸದ್ಯ ಅಂತಿಮ ಸ್ಥಾನದಲ್ಲಿದ್ದು, ನಾಯಕತ್ವ ಬದಲಾವಣೆಯೊಂದಿಗೆ ತಂಡದ ಅದೃಷ್ಟವೂ ಬದಲಾಗುತ್ತದೆಯೋ ಕಾದು ನೋಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next