Advertisement

ಸನ್ನಿಯ ಕಾಂಡೋಮ್‌ ಜಾಹಿರಾತಿನಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆ 

09:46 AM Sep 20, 2017 | |

ಮುಂಬಯಿ: ಗತ ಕಾಲದ ನೀಲಿ ನಟಿ, ಸದ್ಯ ಬಾಲಿವುಡ್‌ನ‌ ಜನಪ್ರಿಯ ನಟಿ ಸನ್ನಿ ಲಿಯೋನ್‌ಗೆ ನಿರೋಧ್‌ನ ಜಾಹಿರಾತೊಂದು ಸಂಕಷ್ಟ ತಂದಿಟ್ಟಿದೆ. 

Advertisement

ಗುಜರಾತ್‌ನ ಕೆಲ ನಗರಗಳಲ್ಲಿ ಅಳವಡಿಸಲಾಗಿದ್ದ ಹೋರ್ಡಿಂಗ್‌ಗಳಲ್ಲಿ  ಸನ್ನಿಯ ಚಿತ್ರದೊಂದಿಗೆ ‘ಈ ನವರಾತ್ರಿಯಲ್ಲಿ ಚೆನ್ನಾಗಿ ಆಡಿ, ಆದರೆ ನಿಮ್ಮ ಪ್ರೇಯಸಿಯೊಂದಿಗೆ..’ ಎಂಬ ಬರಹವಿತ್ತು. ಈ ಬರಹ ವಿವಾದಕ್ಕೆ ಕಾರಣವಾಗಿದೆ. 

ಸೂರತ್‌ನಲ್ಲಿ ಅಳವಡಿಸಲಾಗಿದ್ದ ಹೋರ್ಡಿಂಗ್‌ ತೆರವುಗೊಳಿಸುವಂತೆ ಪ್ರತಿಭಟನೆಯೂ ನಡೆಸಲಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಯಾವುದೇ ಜಾಹಿರಾತಿಗೆ ನಾವು ಅವಕಾಶ ನೀಡುವುದಿಲ್ಲ. ಬೇರೆ ನಗರಗಳಲ್ಲಿಯೂ ಇಂತಹುದನ್ನು ಅಳವಡಿಸಬಾರದು ಎಂದು ಹಿಂದೂ ಸಂಘಟನೆಯ ನರೇಂದ್ರ ಚೌಧರಿ ಸುದ್ದಿಗಾರರಿಗೆ ತಿಳಿಸಿದರು. 

ದೇಶಾದ್ಯಂತ ನವರಾತ್ರಿಗೆ ಹಿಂದೂಗಳು ವಿಶೇಷ ಮಹತ್ವ ನೀಡುತ್ತಾರೆ, ಅದರಲ್ಲೂ ಗುಜರಾತ್‌ನಲ್ಲಿ ನವರಾತ್ರಿಯಲ್ಲಿ ವಿಶೇಷ ವೃತಗಳನ್ನು ಕೈಗೊಂಡು , ಬ್ರಹ್ಮಚರ್ಯವನ್ನು ಪಾಲಿಸಿ ಆಚರಿಸುತ್ತಾರೆ. ಈ ವೇಳೆಯಲ್ಲಿ ಹಾಕಲಾಗಿದ್ದ ಈ ಜಾಹಿರಾತು ವಿವಾದಕ್ಕೆ ಕಾರಣವಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next