Advertisement

Kota ಸುಣ್ಣಾರಿ: ಮದುವೆ ಆಗುವುದಾಗಿ ವಂಚನೆ; ದೂರು ದಾಖಲು

11:25 PM Sep 26, 2023 | Team Udayavani |

ಕೋಟ: ಯುವತಿಯೋರ್ವಳಿಗೆ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ ಕುರಿತು ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಕಾಳಾವರ ಗ್ರಾಮದ ಸುಣ್ಣಾರಿ ನಿವಾಸಿ ಶಾಂತಿ ಶೆಟ್ಟಿ (23) ವಂಚನೆಗೊಳಗಾದ ಮಹಿಳೆ. ಈಕೆಗೆ ಮೂಲತಃ ತೀರ್ಥಹಳ್ಳಿ ನಿವಾಸಿ ಖಾಸಗಿ ಬಸ್‌ ಚಾಲಕ ಹರ್ಷ (32) ಎನ್ನುವ ಯುವಕನೊಂದಿಗೆ ಎಂಟು ವರ್ಷದಿಂದ ಪರಿಚಯವಿದ್ದು ಆತ ತನ್ನ ಜಾತಿ ಹಾಗೂ ಬೇರೊಂದು ಯುವತಿಯೊಂದಿಗಿರುವ ಸಂಬಂಧವನ್ನು ಮರೆಮಾಚಿ ಶಾಂತಿ ಅವರನ್ನು ಪ್ರೀತಿಸುವ ನಾಟಕವಾಡಿದ್ದ ಮತ್ತು ದೈಹಿಕ ಸಂಪರ್ಕ ಬೆಳೆಸಿದ್ದ.

ಈಕೆ ತನಗಾದ ಅನ್ಯಾಯದ ಬಗ್ಗೆ ನ್ಯಾಯ ಕೇಳುವ ಸಲುವಾಗಿ ಆ. 28ರಂದು ಕೋಟ ಠಾಣೆಗೆ ದೂರು ನೀಡಿದಾಗ ವಿಚಾರಣೆಗೆ ಬಂದ ಹರ್ಷ ಶಾಂತಿ ಅವರಿಗೆ ಹಲ್ಲೆ ನಡೆಸಿದ್ದಾನೆ. ಇದೀಗ ಸಂತ್ರಸ್ತೆ ತನಗಾದ ವಂಚನೆ ಮತ್ತು ಹಲ್ಲೆ ನಡೆಸಿದ ಬಗ್ಗೆ ನ್ಯಾಯ ಒದಗಿಸಬೇಕೆಂದು ಎಸ್‌.ಪಿ.ಯವರಿಗೆ ಮನವಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next