ಯೆಶಿಯೋನ್ (ದಕ್ಷಿಣ ಕೊರಿಯಾ): ಏಷ್ಯನ್ ಯು-20 ಆ್ಯತ್ಲೆಟಿಕ್ಸ್ ಕೂಟದ ಡೆಕತ್ಲಾನ್ ಸ್ಪರ್ಧೆಯಲ್ಲಿ ಭಾರತದ ಸುನೀಲ್ ಕುಮಾರ್ ಸ್ವರ್ಣ ಪದಕ ಜಯಿಸಿದ್ದಾರೆ.
19 ವರ್ಷದ ಸುನೀಲ್ ಕುಮಾರ್ 10 ವಿಭಾಗಗಳ ಈ ಸ್ಪರ್ಧೆಯನ್ನು ಜೀವನಶ್ರೇಷ್ಠ 7,003 ಅಂಕಗಳೊಂದಿಗೆ ಮುಗಿಸಿದರು. ಇವರ ಹಿಂದಿನ ಅತ್ಯುತ್ತಮ ನಿರ್ವಹಣೆ 6,855 ಅಂಕ ವಾಗಿತ್ತು. ಇದನ್ನು ಕಳೆದ ಎಪ್ರಿಲ್‌ನಲ್ಲಿ ನಡೆದ ಫೆಡರೇಶನ್ ಕಪ್ ಜೂನಿಯರ್ ನ್ಯಾಶನಲ್ ಚಾಂಪಿಯನ್‌ಶಿಪ್‌ನಲ್ಲಿ ದಾಖಲಿಸಿದ್ದರು.
ಸೋಮವಾರದ ಸ್ಪರ್ಧೆಗಳ ಅಂತ್ಯಕ್ಕೆ ಸುನೀಲ್ ಕುಮಾರ್ 3,597 ಅಂಕಗ ಳೊಂದಿಗೆ 5ನೇ ಸ್ಥಾನಿಯಾಗಿದ್ದರು. ಆದರೆ ಮಂಗಳವಾರದ ಉಳಿದ ಸ್ಪರ್ಧೆ ಗಳಲ್ಲಿ ಅಮೋಘ ಪ್ರದರ್ಶನ ನೀಡಿ ಮೊದಲಿಗರಾದರು. ಉಜ್ಬೆಕಿಸ್ಥಾನದ ನೊದಿರ್ ನೊರ್ಬಯೇವ್ ಬೆಳ್ಳಿ (6,956) ಮತ್ತು ಸಮಂದರ್ (6,840) ಕಂಚಿನ ಪದಕ ಜಯಿಸಿದರು.
ವನಿತಾ ಹೈಜಂಪ್ ಸ್ಪರ್ಧೆಯಲ್ಲಿ ಪೂಜಾ ಬೆಳ್ಳಿ ಪದಕ ಗೆದ್ದರು (1.82 ಮೀ.). ಇಲ್ಲಿ ಚಿನ್ನದ ಪದಕ ಉಜ್ಬೆಕಿಸ್ಥಾನದ ಬನೊìಖೋನ್ ಸೈಫುಲ್ಲೇವ್ ಗೆದ್ದರು (1.84 ಮೀ.).
ಭಾರತದ ಮತ್ತೂಂದು ಬೆಳ್ಳಿ ಪದಕವನ್ನು ವನಿತಾ 3,000 ಮೀ. ರೇಸ್‌ನಲ್ಲಿ ಬುಶ್ರಾ ಖಾನ್ ಗೆದ್ದರು (9:41.47 ಸೆಕೆಂಡ್ಸ್). ವನಿತಾ ಹಾಗೂ ಪುರುಷರ ವಿಭಾಗದ ಸ್ಪ್ರಿಂಟರ್‌ಗಳು ಕಂಚಿನ ಪದಕ ತಂದಿತ್ತರು.
ಭಾರತಕ್ಕೆ 3ನೇ ಸ್ಥಾನ
ಪದಕ ಪಟ್ಟಿಯಲ್ಲಿ ಭಾರತ 3ನೇ ಸ್ಥಾನದಲ್ಲೇ ಉಳಿದಿದೆ (4 ಚಿನ್ನ, 5 ಬೆಳ್ಳಿ, 3 ಕಂಚು). ಜಪಾನ್ ಮತ್ತು ಚೀನ ಮೊದಲೆರಡು ಸ್ಥಾನದಲ್ಲಿವೆ.