Advertisement
ಮಳೆಹಾನಿ ಪ್ರದೇಶಗಳಿಗೆ ಭೇಟಿ ಮಳೆಹಾನಿಗೆ ಒಳಗಾದ ಹರಿಹರ ಪಲ್ಲತ್ತಡ್ಕ, ಕೊಲ್ಲಮೊಗ್ರು, ಬಾಳುಗೋಡು, ಕಲ್ಮಕಾರು ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಮಾಧ್ಯಮ ದವರೊಂದಿಗೆ ಮಾತನಾಡಿದರು. ಹಾನಿಗೆ ಒಳಗಾದವರಿಗೆ ಕಾನೂನು ಚೌಕಟ್ಟಿನೊಳಗೆ ಪರಿಹಾರ ನೀಡುವ ಕಾರ್ಯ ನಡೆಸಲಾಗಿದೆ. ಕೃಷಿಹಾನಿ ಬಗ್ಗೆಯೂ ಪರಿಹಾರ ನೀಡಲಾಗುತ್ತದೆ ಎಂದರು.
Related Articles
ಮನೆ ಹಾನಿಗೆ 95 ಸಾವಿರ ರೂ. ನೀಡಲಾಗಿದೆ. ಮನೆ ನಿರ್ಮಿಸುವುದಿದ್ದಲ್ಲಿ 4 ಲಕ್ಷ ರೂ. ನೀಡಲಾಗುವುದು. ಅಂಗಡಿಗಳಿಗೆ ಹಾನಿಯಾಗಿರುವುದಕ್ಕೆ ಪರಿಹಾರ ನೀಡಲು ಅವಕಾಶ ಇಲ್ಲ. ಆದರೂ ಸಿಎಂ ಗಮನಕ್ಕೆ ತಂದು ವಿಶೇಷ ಪ್ಯಾಕೇಜ್ ಘೋಷಿಸಲು ಮನವಿ ಮಾಡಲಿದ್ದೇನೆ. ಅಂಗಡಿ ಹಾನಿಗೂ ಪರಿಹಾರ ನೀಡಲು ಪ್ರಯತ್ನಿಸಲಾಗುವುದು ಎಂದು ಸುನಿಲ್ ಕುಮಾರ್ ಪ್ರತಿಕ್ರಿಯಿಸಿದರು.
Advertisement
ಯೇನೆಕಲ್ಲು: ಮನೆಗಳಿಗೆ ಭೇಟಿಭಾರೀ ಮಳೆಗೆ ಹಾನಿಗೊಳಗಾದ ಯೇನೆಕಲ್ಲಿನ ಕುಶಾಲಪ್ಪ, ರವಿ, ಮತ್ತಿತರರ ಮನೆಗೆ ಸಚಿವರು ಭೇಟಿ ನೀಡಿ ಪರಿಶೀಲನೆ ನಡೆಸಿ, ಮನೆಯವರಿಂದ ಮಾಹಿತಿ ಪಡೆದು ಕೊಂಡರು. ಆ ಬಳಿಕ ಹಾನಿಗೊಳಗಾದ ಯೇನೆ ಕಲ್ಲಿನ ಹೆದ್ದಾರಿಯ ಸೇತುವೆಯನ್ನು ವೀಕ್ಷಿಸಿದರು. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ., ಜಿ.ಪಂ. ಸಿಇಒ ಡಾ| ಕುಮಾರ್, ಪುತ್ತೂರು ಎಸಿ ಗಿರೀಶ್ ನಂದನ್, ಸುಳ್ಯ ತಹಶೀಲ್ದಾರ್ ಅನಿತಾಲಕ್ಷ್ಮೀ, ಕಡಬ ತಹಶೀಲ್ದಾರ್ ಅನಂತಶಂಕರ, ಕಡಬ ಇಒ ನವೀನ್ ಭಂಡಾರಿ, ಎಸಿಎಫ್ ಪ್ರವೀಣ್ ಶೆಟ್ಟಿ, ಆರ್‌ಎಫ್ಇ ಮಂಜುನಾಥ, ಆರ್‌ಐಗಳಾದ ಕೊರಗಪ್ಪ ಹೆಗ್ಡೆ, ಅವಿನ್ ರಂಗತ್ತಮಲೆ, ಗ್ರಾ.ಪಂ. ಅಧ್ಯಕ್ಷೆ ಪೂರ್ಣಿಮಾ ದೇರಾಜೆ ಮತ್ತಿತರರು ಉಪಸ್ಥಿತರಿದ್ದರು.