Advertisement

ಕನ್ನಡ ರಾಜ್ಯೋತ್ಸವ ; ಪರಭಾಷಿಕರು 100 ಕನ್ನಡ ಪದ ಬಳಸುವಂತೆ ಸುನಿಲ್ ಕುಮಾರ್  ಮನವಿ

11:44 AM Oct 19, 2021 | Team Udayavani |

 

Advertisement

ಬೆಂಗಳೂರು : ಕನ್ನಡ ರಾಜ್ಯೋತ್ಸವ ಈ ಬಾರಿ ಒಂದು ವಾರ ನಡೆಯಲಿದ್ದು, ಕನ್ನಡಕ್ಕಾಗಿ ನಾವು ಅಭಿಯಾನ ಮಾಡಬೇಕು. ಮಾತಾಡ್  ಮಾತಾಡ್ ಕನ್ನಡ ಕಾರ್ಯಕ್ರಮವನ್ನು ಅ.24 ರಿಂದ 30ರವರೆಗೆ ನಡೆಸಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಒಂದು ವಾರ ಆರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕನ್ನಡದಲ್ಲೇ ಮಾತನಾಡಿ, ವ್ಯವಹರಿಸಿ ಎಂದು ಹೇಳುವ ಮೂಲಕ ಕನ್ನಡದಲ್ಲೇ ಮಾತಾಡುತ್ತೇವೆ ಎಂಬ ಸಂಕಲ್ಪ ತೋಡೋಣ ಎಂದು ಸುನಿಲ್ ಕುಮಾರ್ ಹೇಳಿದರು.

ಇನ್ನು ಆಡಳಿತದಲ್ಲಿ ಕನ್ನಡ ಮತ್ತಷ್ಟು ಪರಿಣಾಮಕಾರಿ ಮಾಡಬೇಕು. ರಂಗಾಯಣ ಹಾಗೂ ಅಕಾಡೆಮಿ ಬಳಸಿ ವಾರಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಬೇಕು. ಅ.28 ರಂದು ಕನಿಷ್ಠ ಮೂರು ಕನ್ನಡ ಗೀತೆಯನ್ನು, ಲಕ್ಷ ಕಂಠಗಳಲ್ಲಿ, ಒಂದು ಸಾವಿರದ ಕಡೆಗಳಲ್ಲಿ ಸಾಮೂಹಿಕ ಗಾಯನ ನಡೆಸಲಾಗುತ್ತದೆ. ವಿಧಾನಸೌಧ ಮೆಟ್ಟಿಲ ಮೇಲೆಯೂ ನಡೆಯಲಿದೆ ಎಂದರು.

ಲಂಡನ್ ಬಸವ ಪ್ರತಿಮೆ ಸೇರಿ 16 ರಾಷ್ಟ್ರಗಳಲ್ಲಿ ಗಾಯನ ನಡೆಯಲಿದೆ. ಉದ್ಯೋಗ ಶಿಕ್ಷಣಕ್ಕೆ ಬಂದಿರುವ ಹೊರ ರಾಜ್ಯದವರು 100 ಪದ ಕನ್ನಡ ಬಳಸುವಂತೆ ಸುನಿಲ್ ಕುಮಾರ್  ಮನವಿ ಮಾಡಿದ್ದಾರೆ. ಇನ್ನು ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ 4500 ಅರ್ಜಿ ಸಲ್ಲಿಕೆಯಾಗಿದ್ದು, ಆ.28 ಅಥವಾ 29 ಕ್ಕೆ ಅಂತಿಮ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next