Advertisement

ನವೀಕರಿಸಬಹುದಾದ ಇಂಧನ ನೂತನ ನೀತಿ ಜಾರಿಗೆ ಕ್ರಮ : ಸುನಿಲ್‌ ಕುಮಾರ್‌

08:26 PM Dec 20, 2021 | Team Udayavani |

ಸುವರ್ಣಸೌಧ: ರಾಜ್ಯದಲ್ಲಿ ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ಇನ್ನಷ್ಟು ಒತ್ತು ಹಾಗೂ ಬಂಡವಾಳ ಹೂಡಿಕೆ ಹೆಚ್ಚಿಸಲು ಕರ್ನಾಟಕ ನವೀಕರಿಸಬಹುದಾದ ಇಂಧನ ನೀತಿ-2021-2026 ಜಾರಿಗೆ ತರಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್‌ ಕುಮಾರ್‌ ಹೇಳಿದರು.

Advertisement

ಬಿಜೆಪಿ ಸದಸ್ಯ ಮಹಾಂತೇಶ ಕವಟಗಿಮಠ ಅವರ ಪ್ರಶ್ನೆಗೆ ಲಿಖೀತ ಉತ್ತರ ನೀಡಿದ ಸಚಿವರು, ರಾಜ್ಯದಲ್ಲಿ ಸೌರ ನೀತಿ 2014-21ರ ಅನ್ವಯ ನೀತಿಯ ಅವಧಿಗೆ ಕನಿಷ್ಠ ಶೇ.8ರಷ್ಟು ಸೌರ ನವೀಕರಿಸಬಹುದಾದ ಇಂಧನ ಖರೀದಿ ಬಾಧ್ಯತೆ ನಿಟ್ಟಿನಲ್ಲಿ ಸುಮಾರು 6,000 ಮೆಗಾ ವ್ಯಾಟ್‌ ಸಾಮರ್ಥ್ಯದ ಯೋಜನೆಗಳ ಅನುಷ್ಠಾನ ಗುರಿ ಹೊಂದಲಾಗಿತ್ತು. ಇಲ್ಲಿವರೆಗೆ ಒಟ್ಟು 10,159.96 ಮೆ.ವ್ಯಾ.ಸಾಮರ್ಥ್ಯದ ಯೋಜನೆಗಳನ್ನು ಹಂಚಿಕೆ ಮಾಡಲಾಗಿದ್ದು, ಸೌರ ಆರ್‌ಪಿಒ, ಸ್ವಯಂ ಬಳಕೆ, ಸಮೂಹ ಸ್ವಯಂ ಬಳಕೆ, ಮೂರನೇ ವ್ಯಕ್ತಿ ಮಾರಾಟ, ಖಾಸಗಿ ಸೋಲಾರ್‌ ಪಾರ್ಕ್‌ ವರ್ಗದಡಿ 7,150.57 ಮೆ.ವ್ಯಾ. ಸಾಮರ್ಥ್ಯದ ಯೋಜನೆಗಳನ್ನು ಮತ್ತು ಸೌರ ಮೇಲ್ಛಾವಣಿ, ಸೂರ್ಯ ರೈತ, ಜಾಲಮುಕ್ತ ಸೌರ ಯೋಜನೆ ವರ್ಗದಡಿ 354.88 ಮೆ.ವ್ಯಾ. ಸಾಮರ್ಥ್ಯದ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ.

ಕೇಂದ್ರ ಇಂಧನ ಮಂತ್ರಾಲಯದಿಂದ ರಾಜ್ಯಕ್ಕೆ 2019-20 ಹಾಗೂ 2020-21ಕ್ಕೆ ನಿಗದಿಪಡಿಸಿದ ಸೌರ ಆರ್‌ಪಿಒ ಅಡಿ 2019-20ರಲ್ಲಿ ಶೇ.7.25ರಷ್ಟು ಗುರಿಯಲ್ಲಿ ಶೇ.17.47ರಷ್ಟು , 2020-21ರಲ್ಲಿ ಶೆ.8.75ರ ಗುರಿಯಲ್ಲಿ ಶೇ.19.61ರಷ್ಟು ಸಾಧನೆ ತೋರಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ಕೇಂದ್ರ ಸರಕಾರದಿಂದಾಗಲಿ, ರಾಜ್ಯ ಸರಕಾರದಿಂದಾಗಲಿ ಸೌರ ವಿದ್ಯುತ್‌ ಉತ್ಪಾದನೆಗೆ ಯಾವುದೇ ಅನುದಾನ ನೀಡಿಲ್ಲ ಎಂದರು.

ಇದನ್ನೂ ಓದಿ : ನಾನು ಅಶ್ಲೀಲ ಚಿತ್ರ ನಿರ್ಮಾಣ ಮಾಡಿಲ್ಲ: ರಾಜ್‌ ಕುಂದ್ರಾ

Advertisement

Udayavani is now on Telegram. Click here to join our channel and stay updated with the latest news.

Next