ಸರಕಾರದ ಪ್ರವಾಸೋದ್ಯಮ ಇಲಾಖೆ ವತಿಯಿಂದ ಕಾರ್ಕಳ ಆನೆಕೆರೆ ಜೈನ ಬಸದಿ ಅಭಿವೃದ್ಧಿ, ಸಂಗೀತ ಕಾರಂಜಿ ನಿರ್ಮಾಣ, ಗ್ಯಾಲರಿ ನಿರ್ಮಾಣ ಹೀಗೆ 2 ಕೋ.ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
Advertisement
ಪ್ರವಾಸೋದ್ಯಮಕ್ಕೆ ಪೂರಕವಾದ ವ್ಯವಸ್ಥೆಗಳು ತಾಲೂಕಿನಲ್ಲಿವೆ. ಬಸದಿಗಳು, ಗೋಮಟೇಶ್ವರ, ಚತುರ್ಮುಖ ಬಸದಿ, ವರಂಗ ಕೆರೆ ಬಸದಿ, ಅನಂತಶಯನ, ವೆಂಕಟ್ರಮಣ ದೇವಸ್ಥಾನ ಇವುಗಳು ಟೆಂಪಲ್ ಟೂರಿಸಂಗೆ ಪೂರಕವಾಗಿದೆ. ಇನ್ನು ಮೇಗದ್ದೆಯ ಕೂಡ್ಲು ಫಾಲ್ಸ್, ಕವಿ ಮುದ್ದಣನ ಕ್ಷೇತ್ರ ಹೀಗೆ ಟೂರಿಸಂಗೆ ಬೇಕಾದ ಎಲ್ಲ ಸೌಲಭ್ಯಗಳು ಇಲ್ಲಿವೆ. ಹೊರಜಿಲ್ಲೆ, ರಾಜ್ಯಗಳಿಂದ ಪ್ರವಾಸಿಗರು ಕಾರ್ಕಳಕ್ಕೆ ಬಂದಾಗ ಒಂದೆರಡು ದಿನಗಳು ಇದ್ದು ಸುತ್ತಾಡಿ ಹೋಗುವ ರೀತಿಯಲ್ಲಿ ಹತ್ತಾರು ಆಯಾಮಗಳ ಚಿಂತನೆಯಿಂದ ವ್ಯವಸ್ಥೆಗಳನ್ನು ರೂಪಿಸಲಾಗುವುದು. ಕೋಟಿ ಚೆನ್ನಯ ಥೀಂ ಪಾರ್ಕ್, ಬೈಲೂರಿನಲ್ಲಿ ಪರಶುರಾಮ ಕೇಂದ್ರ ಹೀಗೆ ಎಲ್ಲ ದೃಷ್ಟಿಯಿಂದಲೂ ತಾಲೂಕು ಪ್ರವಾಸಿ ಕೇಂದ್ರವಾಗಿ ಹಂತಹಂತವಾಗಿ ಅಭಿವೃದ್ಧಿ ಹೊಂದುತ್ತಿದೆ ಎಂದರು.
ಆನೆಕೆರೆ ಹೂಳೆತ್ತುವ ಬೇಡಿಕೆಯಿದೆ. ಅದಕ್ಕೂ ಮೊದಲು ಮಸೀದಿ ಹತ್ತಿರದಿಂದ ರಂಗನಾಥ ಕೆಫೆ ತನಕದ ರಸ್ತೆಯನ್ನು ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿ ಪಡಿಸಬೇಕಿದೆ. ರಸ್ತೆ ಹಾದುಹೋಗುವ ಪ್ರದೇಶಗಳ ಖಾಸಗಿ ಭೂಮಾಲಕರ ಜತೆ ಮಾತುಕತೆ ನಡೆಯುತ್ತಿದೆ. ಎರಡು ಮನೆಗಳ ಸ್ಥಳಾಂತರ ಪ್ರಕ್ರಿಯೆ ಮುಗಿದ ಬಳಿಕ ಆನೆಕೆರೆಗೆ ತಡೆಗೋಡೆ ಕಟ್ಟಿ ಹೂಳೆತ್ತಿ ಶಾಶ್ವತವನ್ನಾಗಿಸಲಾಗುವುದು ಎಂದರು.
Related Articles
ಸಾಣೂರಿನ ಮಠದ ಕೆರೆ ಮತ್ತು ರಾಮಸಮುದ್ರ ಅಭಿವೃದ್ಧಿಯನ್ನು ಈ ವರ್ಷ ಕೈಗೆತ್ತಿಕೊಳ್ಳುತ್ತಿದ್ದೇವೆ. ಜನವರಿಯೊಳಗೆ ಎರಡೂ ಕೆರೆಗಳ ಸಂಪೂರ್ಣ ಅಭಿವೃದ್ಧಿಯನ್ನು ಮಾಡಲಾಗುತ್ತದೆ. ಅದರೊಂದಿ ಗೆ ಕಾರಂಜಿ, ಗ್ಯಾಲರಿ ಕೆಲಸಗಳು ವೇಗವಾಗಿ ನಡೆಯಬೇಕು. ಬಸದಿ ಕಾರ್ಯ ನಿಧಾನವಾಗದಂತೆ ನೋಡಿಕೊಳ್ಳಬೇಕಿದೆ. ಸರಕಾರದಿಂದ ಬಸದಿಗೆ 50 ಲಕ್ಷ ರೂ. ತಡೆಗೋಡೆಗೆ 1 ಕೋ.ರೂ. ನೀಡಲಾಗಿದೆ. ಮುಂದಿನ ಜೀರ್ಣೋದ್ಧಾರ ಕೆಲಸಗಳಿಗೆ ಸಮಾಜದ ಬಂಧುಗಳು ಸಹಕರಿಸಬೇಕು ಎಂದರು.
Advertisement
ಕಾರ್ಕಳದ ಜೈನ ಮಠದ ರಾಜಗುರು ಶ್ರೀ ಲಲಿತ ಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು ಆಶೀರ್ವಚನ ನೀಡಿ ಏಕಭಾವನೆಯಿಂದ ಕಾರ್ಯಗಳು ನಡೆದಾಗ ಎಲ್ಲ ಸತ್ಕಾರ್ಯಗಳು ಈಡೇರುತ್ತವೆ ಎಂದರು. ಹಿರಿಯ ನ್ಯಾಯವಾದಿ ಎಂ.ಕೆ ವಿಜಯಕುಮಾರ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮಹಾವೀರ ಹೆಗ್ಡೆ, ಪುರಸಭೆ ಅಧ್ಯಕ್ಷೆ ಸುಮಾಕೇಶವ್, ಕೆಆರ್‌ಐಡಿ ಅಧಿಕಾರಿ ಪ್ರಭಾಕರ್, ಪುರಸಭೆ ಮುಖ್ಯಾಧಿಕಾರಿ ರೂಪಾ ಡಿ.ಶೆಟ್ಟಿ ಉಪಸ್ಥಿತರಿದ್ದರು. ಗುಣಪಾಲ ಕಡಂಬಳ ಕಾರ್ಯಕ್ರಮ ನಿರ್ವಹಿಸಿದರು. ಗಣ್ಯರು ಉಪಸ್ಥಿತರಿದ್ದರು.
ಗ್ಯಾಲರಿ, ಸಂಗೀತ ಕಾರಂಜಿಬಸದಿಯ ಜೀರ್ಣೋದ್ಧಾರ ಮತ್ತು ಪ್ರವಾಸಿಗರಿಗೆ ಕೆರೆಯನ್ನು ನೋಡಲು ಒಂದೊಳ್ಳೆ ಗ್ಯಾಲರಿಯ ಆವಶ್ಯಕತೆಯಿದೆ ಮತ್ತು ಸಂಜೆ 1 ತಾಸು ಪ್ರವಾಸಿಗರ ಇರುವಿಕೆಯನ್ನು ನೋಡಿಕೊಂಡು ಪ್ರತಿದಿನ ಸಂಗೀತ ಕಾರಂಜಿ ನಿರ್ಮಿಸಲಾಗುತ್ತಿದೆ. ಬಸದಿಯ ಜೀರ್ಣೋದ್ಧಾರ ಕಾರ್ಯಗಳು ಬೇಗ ಪೂರ್ಣಗೊಂಡರೆ ಉಳಿದೆಲ್ಲ ಕಾರ್ಯಗಳು ತ್ವರಿತವಾಗಿ ನಡೆಸಲು ಸುಲಭವಾಗುತ್ತದೆ. ಈ ಹಿನ್ನೆಲೆಯಲ್ಲಿ 2 ಕೋ.ರೂ. ವೆಚ್ಚದ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ್ದೇನೆ ಸುನಿಲ್ ಹೇಳಿದರು.