ಮುಂಬೈ: ದೀರ್ಘ ಸಮಯದ ನಂತರ ಟೀಂ ಇಂಡಿಯಾ ದ್ವಿಪಕ್ಷೀಯ ಸರಣಿಗೆ ಅಣಿಯಾಗುತ್ತಿದೆ. ಆಸ್ಟ್ರೇಲಿಯಾ ನೆಲದಲ್ಲಿ ಟಿ20, ಏಕದಿನ ಮತ್ತು ಮಹತ್ವದ ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ ಆಡಲಿದೆ. ಆದರೆ ನಾಯಕ ವಿರಾಟ್ ಕೊಹ್ಲಿ ಕೊನೆಯ ಮೂರು ಟೆಸ್ಟ್ ಪಂದ್ಯಗಳಿಗೆ ಗೈರಾಗುತ್ತಿರುವುದು ಭಾರತಕ್ಕೆ ಹಿನ್ನಡೆಯಾಗಿ ಪರಿಣಮಿಸುವುದು ಖಚಿತ.
ಆಸೀಸ್ ಸರಣಿಯಲ್ಲಿ ಕೊಹ್ಲಿ ಗೈರಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಜವಾಬ್ದಾರಿಯನ್ನು ಅಜಿಂಕ್ಯ ರಹಾನೆ ಮತ್ತು ಚೇತೆಶ್ವರ ಪೂಜಾರ ವಹಿಸಬೇಕು ಎಂದು ಮಾಜಿ ನಾಯಕ ಸುನೀಲ್ ಗಾವಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ ಗಾವಸ್ಕರ್, ವಿರಾಟ್ ಕೊಹ್ಲಿ ಅನುಸ್ಥಿತಿಯಲ್ಲಿ ಭಾರತೀಯ ಆಟಗಾರರು ಹೆಚ್ಚಿನ ಜವಾಬ್ದಾರಿಯೊಂದಿಗೆ ಆಡಬೇಕು. ವಿರಾಟ್ ಸ್ಥಾನವನ್ನು ತುಂಬುವಂತಹ ಪ್ರದರ್ಶನ ನೀಡಬೇಕಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ರಾಹುಲ್ ಅಪಾಯಕಾರಿ ಆಟಗಾರ, ಆತನನ್ನು ಔಟ್ ಮಾಡಲಿರುವುದು ಒಂದೇ ವಿಧಾನ: ಮ್ಯಾಕ್ಸ್ ವೆಲ್
ನ.27ರಂದು ಇಂಡೋ- ಆಸೀಸ್ ಸರಣಿ ಆರಂಭವಾಗಲಿದೆ . ಮೂರು ಏಕದಿನ, ಮೂರು ಟಿ20 ಮತ್ತು ನಾಲ್ಕು ಟೆಸ್ಟ್ ಪಂದ್ಯಗಳು ನಡೆಯಲಿದೆ. ಮೊದಲ ಮಗವಿನ ನಿರೀಕ್ಷೆಯಲ್ಲಿರುವ ವಿರಾಟ್ ಕೊಹ್ಲಿ ಮೊದಲ ಪಂದ್ಯದ ನಂತರ ಭಾರತಕ್ಕೆ ವಾಪಾಸ್ ಮರಳಲಿದ್ದಾರೆ. ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡದ ನಾಯಕತ್ವವನ್ನು ಅಜಿಂಕ್ಯ ರಹಾನೆ ವಹಿಸಲಿದ್ದಾರೆ.