Advertisement

ಕೊಹ್ಲಿ, ಶಾಸ್ತ್ರಿ ಸಾಮರ್ಥ್ಯವನ್ನೇ ಪ್ರಶ್ನಿಸಿದ ಸುನೀಲ್‌ ಗಾವಸ್ಕರ್‌

06:10 AM Dec 20, 2018 | Team Udayavani |

ಮುಂಬಯಿ: 2ನೇ ಟೆಸ್ಟ್‌ ಸೋತ ಬೆನ್ನಲ್ಲೇ ಭಾರತ ಕ್ರಿಕೆಟ್‌ ತಂಡಕ್ಕೆ ಟೀಕೆಗಳ ಸುರಿಮಳೆ ಶುರುವಾಗಿದೆ. ಮಾಜಿ ನಾಯಕ ಸುನೀಲ್‌ ಗಾವಸ್ಕರ್‌ ಅವರು ವಿರಾಟ್‌ ಕೊಹ್ಲಿಯ ನಾಯಕತ್ವದ ಸಾಮರ್ಥ್ಯವನ್ನೇ ಪ್ರಶ್ನಿಸಿದ್ದಾರೆ.

Advertisement

“ತಂಡದ ಆಯ್ಕೆಯಲ್ಲಿ ಎಡವುತ್ತಿರುವುದರಿಂದಲೇ ಭಾರತ ವಿದೇಶದಲ್ಲಿ ಸೋಲು ಕಾಣುವಂತಾಗಿದೆ. ಒಂದು ವೇಳೆ ಆಸ್ಟ್ರೇಲಿಯ ವಿರುದ್ಧದ ಮುಂದಿನೆರಡು ಟೆಸ್ಟ್‌ನಲ್ಲಿ ಭಾರತಕ್ಕೆ ನಿರೀಕ್ಷಿತ ಫ‌ಲಿತಾಂಶ ಬರದಿದ್ದರೆ, ನಾಯಕ ಕೊಹ್ಲಿ, ತರಬೇತುದಾರ ರವಿಶಾಸ್ತ್ರಿ, ಇತರ ಸಿಬಂದಿಯಿಂದ ಪ್ರಯೋಜನವಾದರೂ ಏನು ಎಂದು ಪರಿಶೀಲನೆ ನಡೆಸಬೇಕು ಎಂದು ಗಾವಸ್ಕರ್‌ ಹೇಳಿದ್ದಾರೆ.

ಈ ವರ್ಷ ದ.ಆಫ್ರಿಕಾ ವಿರುದ್ಧ ಟೆಸ್ಟ್‌ ಸರಣಿಯಿಂದ ಅನಂತರ ಭಾರತ ತಂಡದ ಆಯ್ಕೆಯಲ್ಲಿ ಎಡವುತ್ತಿದೆ. ಇದರ ಪರಿಣಾಮ ಗೆಲ್ಲಬಹುದಾಗಿದ್ದ ಪಂದ್ಯಗಳಲ್ಲಿ ಸೋಲು ಕಾಣುವಂತಾಗಿದೆ. ತಪ್ಪು ಆಯ್ಕೆಗಳೇ ಇದಕ್ಕೆ ಕಾರಣ ಎನ್ನುವುದು ಗಾವಸ್ಕರ್‌ ಅಭಿಮತ. ಪರ್ತ್‌ ಟೆಸ್ಟ್‌ನಲ್ಲಿ ಸ್ಪಿನ್ನರ್‌ ಇಲ್ಲದೇ ಭಾರತ ಕಣಕ್ಕಿಳಿದು ಸೋಲನುಭವಿಸಿತ್ತು. ಇನ್ನೊಂದು ಕಡೆ ಎದುರಾಳಿ ಆಸ್ಟ್ರೇಲಿಯದ ಸ್ಪಿನ್ನರ್‌ ನಥನ್‌ ಲಿಯೋನ್‌, ಭಾರತ ವಿರುದ್ಧ ಭರ್ಜರಿ ಯಶಸ್ಸು ಸಾಧಿಸಿದ್ದರು. ಇದನ್ನು ಗಮನದಲ್ಲಿಟ್ಟುಕೊಂಡು ಗಾವಸ್ಕರ್‌ ಈ ಹೇಳಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next