ಹೊಸದಿಲ್ಲಿ: ಆಸ್ಟ್ರೇಲಿಯಾದ ಕ್ರಿಕೆಟಿಗ ದಿವಂಗತ ಶೇನ್ ವಾರ್ನ್ ಬಗ್ಗೆ ಸಮಯೋಚಿತವಲ್ಲದ ಹೇಳಿಕೆ ನೀಡಿದುದ್ದಕ್ಕಾಗಿ ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಗವಾಸ್ಕರ್ ವಿಷಾದ ವ್ಯಕ್ತ ಪಡಿಸಿದ್ದಾರೆ.
ಶೇನ್ ವಾರ್ನ್ ಅವರು ತಮ್ಮ ಬೌಲಿಂಗ್ ನಲ್ಲಿ ಮ್ಯಾಜಿಕ್ ಎಸೆತಗಳನ್ನು ಪ್ರದರ್ಶಿಸಿದರು ಮತ್ತು ಕಷ್ಟಕರವಾದ ಕರಕುಶಲತೆಯನ್ನು ಕರಗತ ಮಾಡಿಕೊಂಡಿದ್ದರು, ಅವರನ್ನು ನಾನು ಸಾರ್ವಕಾಲಿಕ ಶ್ರೇಷ್ಠ ಸ್ಪಿನ್ನರ್ ಅನ್ನುವುದಿಲ್ಲ ಎಂದು ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದರು.
ಇಂಡಿಯಾ ಟುಡೇ ಗೆ ನೀಡಿದ ಸಂದರ್ಶನದಲ್ಲಿ , ಆಸ್ಟ್ರೇಲಿಯನ್ ದಂತಕಥೆ ಎಂದು ಪರಿಗಣಿಸಲ್ಪಟ್ಟ ದಿವಂಗತ ಶೇನ್ ವಾರ್ನ್ ವೃತ್ತಿಜೀವನದಲ್ಲಿ ಭಾರತದ ಎದುರು ಅವರ ಪ್ರದರ್ಶನವು ಸಾಧಾರಣ, ಸಾಮಾನ್ಯ ವಾಗಿತ್ತು ಎಂಬ ಕಾರಣಕ್ಕೆ ಸಾರ್ವಕಾಲಿಕ ಶ್ರೇಷ್ಠ ಸ್ಪಿನ್ನರ್ ಆಗಿರಲಿಲ್ಲ ಎಂದಿದ್ದರು.
ಅವರು ಈ ಅಭಿಪ್ರಾಯ ಹೊರ ಹಾಕಿದ್ದು, ಮುತ್ತಯ್ಯ ಮುರಳೀಧರನ್ ಅವರು ಗ್ರೇಟ್ ಅನ್ನಬಹುದು, ವಾರ್ನ್ ಗಿಂತ ಉತ್ತಮ ನಿರ್ವಹಣೆ ಅವರು ತೋರಿದ್ದರು ಎಂದು ಹೇಳಿದ್ದರು.
ಅವರು ಮಾಡಿದ ಹೋಲಿಕೆಗಳಿಗೆ ಇದು ಸರಿಯಾದ ಸಮಯವಲ್ಲ ಎಂದು ಹೇಳಿ, ಆ ಪ್ರಶ್ನೆಯನ್ನು ಕೇಳಬಾರದಿತ್ತು ಮತ್ತು ಯಾವುದೇ ಹೋಲಿಕೆ ಅಥವಾ ಮೌಲ್ಯಮಾಪನಕ್ಕೆ ಇದು ಸರಿಯಾದ ಸಮಯವಲ್ಲವಾದ್ದರಿಂದ ನಾನು ಉತ್ತರಿಸಬಾರದು” ಎಂದು ಗವಾಸ್ಕರ್ ತಮ್ಮ ಹೇಳಿಕೆಯ ಟೀಕೆಗೆ ಪ್ರತಿಕ್ರಿಯೆಯಾಗಿ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ವಾರ್ನ್ ಅವರು ಕ್ರಿಕೆಟ್ ಅಲಂಕರಿಸಿದ ಶ್ರೇಷ್ಠ ಆಟಗಾರರಲ್ಲಿ ಒಬ್ಬರು. ರಾಡ್ನಿ ಮಾರ್ಷ್ ಕೂಡ ಅತ್ಯುತ್ತಮ ವಿಕೆಟ್ ಕೀಪರ್ ಗಳಲ್ಲಿ ಒಬ್ಬರಾಗಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅವರು ತಿಳಿಸಿದ್ದಾರೆ.