ಬೆಂಗಳೂರು: ಸುನೀಲ್ ಚೆತ್ರಿ ಅವರ ವಿವಾದಾತ್ಮಕ ಗೋಲಿನ ಕಾರಣದಿಂದ ಇಂಡಿಯನ್ ಸೂಪರ್ ಲೀಗ್ ನ ಶುಕ್ರವಾರದ ಪಂದ್ಯದಲ್ಲಿ ಹೈಡ್ರಾಮಾವೊಂದು ನಡೆದಿದೆ.
ಕಂಠೀರವ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕೇರಳ ಬ್ಯಾಸ್ಟರ್ಸ್ ಎಫ್ ಸಿ ತಂಡದ ವಿರುದ್ಧ ಗೆದ್ದ ಬೆಂಗಳೂರು ಎಫ್ ಸಿ ತಂಡವು ಸೆಮಿ ಫೈನಲ್ ಪ್ರವೇಶ ಮಾಡಿದೆ.
ಇದನ್ನೂ ಓದಿ:ಚಿತ್ರ ವಿಮರ್ಶೆ; ಆದಿವಾಸಿಗಳ ಅರಣ್ಯರೋಧನದ ಚಿತ್ರರೂಪ 19.20.21
ನಿಗದಿತ 90 ನಿಮಿಷದಲ್ಲಿ ಆಟದಲ್ಲಿ ಯಾವುದೇ ಗೋಲು ದಾಖಲಾಗದ ಹಿನ್ನೆಲೆಯಲ್ಲಿ ಹೆಚ್ಚುವರಿ ಸಮಯದಲ್ಲಿ ಸುನಿಲ್ ಚೆತ್ರಿ ಫ್ರಿ ಕಿಕ್ ಮೂಲಕ ಗೋಲು ಗಳಿಸಿದರು. ಆದರೆ ರೆಫ್ರಿ ಶಿಳ್ಳೆ ಹೊಡೆಯುವ ಮೊದಲೇ ಚೆತ್ರಿ ಫ್ರಿ ಕಿಕ್ ತೆಗೆದುಕೊಂಡು ಗೋಲು ಗಳಿಸಿದರು ಎಂದು ಬ್ಲಾಸ್ಟರ್ಸ್ ಅಸಮಾಧಾನಗೊಂಡಿತು. ಆದರೆ ರೆಫ್ರಿ ಬೆಂಗಳೂರು ತಂಡಕ್ಕೆ ಗೋಲು ನೀಡಿದರು.
ಇದರಿಂದ ಕೋಪಗೊಂಡ ಬ್ಲಾಸ್ಟರ್ಸ್ ತರಬೇತುದಾರ ಇವಾನ್ ವುಕೊಮಾನೋವಿಕ್ ತನ್ನ ತಂಡವನ್ನು ಮೈದಾನದಿಂದ ಹೊರಗೆ ಕರೆದರು. ಸುಮಾರು 20 ನಿಮಷಗಳ ಬಳಿಕವೂ ಕೇರಳ ತಂಡ ಮೈದಾನಕ್ಕೆ ಬಾರದ ಕಾರಣ ಬೆಂಗಳೂರು ತಂಡವು ಪಂದ್ಯ ಗೆದ್ದಿತು ಎಂದು ರೆಫ್ರಿ ಘೋಷಿಸಿದರು.
ಬೆಂಗಳೂರು ಎಫ್ ಸಿ ತಂಡವು ಸೆಮಿ ಫೈನಲ್ ನಲ್ಲಿ ಮುಂಬೈ ಎಫ್ ಸಿ ತಂಡವನ್ನು ಎದುರಿಸಲಿದೆ.