Advertisement
ಬೆಂಗಳೂರು ತಂಡವೇ ಬಲಿಷ್ಠ: ಐಎಸ್‌ಎಲ್‌ನಲ್ಲಿ ಪ್ರವೇಶ ಪಡೆದಾಗಲೇ ಬೆಂಗಳೂರು ತಂಡ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಅನ್ನುವುದು ಖಚಿತವಾಗಿತ್ತು. ಚೆಟ್ರಿ ನೇತೃತ್ವದ ಬಿಎಫ್ಸಿ ತಂಡದಲ್ಲಿ ಬಲಾಡ್ಯರ ದಂಡೆ ಇದೆ. ಎಎಫ್ಸಿಯಂತಹ ಅಂತಾರಾಷ್ಟ್ರೀಯ
ಕೂಟದ ಪ್ರಶಸ್ತಿ ಸುತ್ತಿಗೇರಿದ ಅನುಭವವಿದೆ. ಐಲೀಗ್‌ನಲ್ಲಿ 2 ಬಾರಿ ಪ್ರಶಸ್ತಿ ಗೆದ್ದು ಮೆರೆದಿದೆ. ಬೆಂಗಳೂರು ತಂಡ ಐಎಸ್‌ಎಲ್‌ನ ಮೊದಲ ಪಂದ್ಯದಲ್ಲಿಯೇ ಮುಂಬೈ ವಿರುದ್ಧ 2-0ಯಿಂದ ಗೆದ್ದು ಶುಭಾರಂಭ ಮಾಡಿತ್ತು. ಲೀಗ್‌ನಲ್ಲಿ ಆಡಿದ 18 ಪಂದ್ಯಗಳಲ್ಲಿ 13 ರಲ್ಲಿ ಜಯ, 4ರಲ್ಲಿ ಸೋಲು, 1 ಡ್ರಾ ಸೇರಿದಂತೆ ಒಟ್ಟು 40 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಪಡೆದು ಸೆಮಿಫೈನಲ್ ಪ್ರವೇಶಿಸಿತ್ತು.
ತಂಡದಲ್ಲಿಯೂ ಪ್ರಬಲ ಆಟಗಾರರಿದ್ದಾರೆ. ಲೀಗ್‌ನಲ್ಲಿ ಕೂಡ ಅತ್ಯುತ್ತಮ ಪ್ರದರ್ಶನ ನೀಡಿದೆ. ಹೀಗಾಗಿ ಒಂದಂತೂ ಸ್ಪಷ್ಟ, ಚೆನ್ನೈಯನ್ ತಂಡ ಬೆಂಗಳೂರಿಗೆ ಸುಲಭ ಎದುರಾಳಿ ಅಲ್ಲ. ಚೆನ್ನೈ ತಂಡ ಲೀಗ್‌ನಲ್ಲಿ 18 ಪಂದ್ಯದಲ್ಲಿ 9 ರಲ್ಲಿ ಜಯ, 4ರಲ್ಲಿ ಸೋಲು, 5ರಲ್ಲಿ ಡ್ರಾ ಸಾಧಿಸಿ ಒಟ್ಟು 32 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಪಡೆದು ಸೆಮಿಫೈನಲ್ ಪ್ರವೇಶಿಸಿತ್ತು. 1ನೇ ಸೆಮೀಸ್
ನಲ್ಲಿ ಗೋವಾ ವಿರುದ್ಧ 1-1 ರಿಂದ ಡ್ರಾ ಸಾಧಿಸಿತ್ತು. ಹೀಗಾಗಿ 2ನೇ ಸೆಮಿಫೈನಲ್ ಮಹತ್ವ ಪಡೆದಿತ್ತು. ಈ ಹಂತದಲ್ಲಿ ಚೆನ್ನೈಯನ್ 3-0ಯಿಂದ ಗೋವಾ ತಂಡವನ್ನು ಸೋಲಿಸಿ ಫೈನಲ್‌ಗೆ ಪ್ರವೇಶಿಸಿದೆ. ತಂಡದಲ್ಲಿ ಜೆಜೆ ಲಾಲ್ ಪೆಖುವಾ 9 ಗೋಲು ದಾಖಲಿಸಿದ್ದಾರೆ. ಗೋಲ್ ಕೀಪರ್ ಕರಣ್ ಜೀತ್ ಸಿಂಗ್ 49 ಗೋಲುಗಳನ್ನು ರಕ್ಷಿಸಿದ್ದಾರೆ. ಪ್ರಸಕ್ತ ಆವೃತ್ತಿಯಲ್ಲಿ ತಂಡದಿಂದ ಒಟ್ಟು 28 ಗೋಲುಗಳು ಸಿಡಿದಿವೆ.
Related Articles
ಆರಂಭವಾಗಿದ್ದು 2014ರಲ್ಲಿ. ಸದ್ಯ ನಡೆಯುತ್ತಿರುವುದು ನಾಲ್ಕನೇ ಆವೃತ್ತಿ. ಬೆಂಗಳೂರು ಎಫ್ಸಿ ತಂಡ ಇದೇ ಮೊದಲ ಬಾರಿಗೆ ಐಎಸ್‌ಎಲ್ ಪ್ರವೇಶಿಸಿದೆ. ಹೀಗಾಗಿ ಬೆಂಗಳೂರಿನಲ್ಲಿಯೂ ಐಎಸ್‌ಎಲ್ ಪಂದ್ಯಗಳು ನಡೆಯುತ್ತಿವೆ. ಈ ಬಾರಿ ಫೈನಲ್ ಪಂದ್ಯ ಕೋಲ್ಕತಾದಲ್ಲಿ ನಡೆಯಬೇಕಾಗಿತ್ತು. ಆದರೆ ಕಾರಣಾಂತರದಿಂದ ಸಂಘಟಕರು ಪಂದ್ಯವನ್ನು ಬೆಂಗಳೂರಿಗೆ ವರ್ಗಾಯಿಸಿದ್ದಾರೆ. ಇದು
ಬೆಂಗಳೂರಿನಲ್ಲಿ ನಡೆಯುತ್ತಿರುವ ಮೊದಲ ಐಎಸ್‌ಎಲ್ ಫೈನಲ್.
Advertisement