Advertisement
1. ಆಲೂಗಡ್ಡೆಯ ತಿರುಳು ಹಾಗೂ ನಿಂಬೆಯ ಫೇಸ್ಪ್ಯಾಕ್ಆಲೂಗಡ್ಡೆಯಲ್ಲಿ ಕಲೆನಿವಾರಕ ಗುಣಗಳಿವೆ, ಇದರಲ್ಲಿ ಚರ್ಮದ ಬಣ್ಣವನ್ನು ತಿಳಿಯಾಗಿಸುವ, ಬ್ಲೀಚ್ ಮಾಡುವ ನೈಸರ್ಗಿಕ ಅಂಶಗಳಿವೆ. ಹಸಿ ಆಲೂಗಡ್ಡೆಯಲ್ಲಿ ಅಧಿಕ ವಿಟಮಿನ್ ಅಂಶವಿದೆ. ಒಂದು ಆಲೂಗಡ್ಡೆಯ ಸಿಪ್ಪೆ ತೆಗೆದು, ಸಣ್ಣಗೆ ಕತ್ತರಿಸಿ, ಮಿಕ್ಸರ್‌ನಲ್ಲಿ ತಿರುವಿ ಪೇಸ್ಟ್ ತಯಾರಿಸಬೇಕು. ಅದಕ್ಕೆ ಒಂದು ನಿಂಬೆಹಣ್ಣಿನ ರಸ ಸೇರಿಸಿ ಚೆನ್ನಾಗಿ ಕಲಕಬೇಕು.ತಾಜಾ ಇರುವಾಗಲೇ ಈ ಮಿಶ್ರಣವನ್ನು ಮುಖಕ್ಕೆ ಲೇಪಿಸಿ ಫೇಸ್‌ಪ್ಯಾಕ್ ಮಾಡಬೇಕು. 20 ನಿಮಿಷಗಳ ಬಳಿಕ ನೀರಲ್ಲಿ ತೊಳೆಯಬೇಕು. ಮುಖ ಫಳ ಫಳ ಹೊಳೆಯುತ್ತೆ.
ಮೊಸರು ಹಾಗೂ ಓಟ್ಸ್ ಆರೋಗ್ಯದ ಜೊತೆಗೆ ಚರ್ಮವನ್ನು ಬ್ರೈಟ್ ಮಾಡುತ್ತೆ. ಓಟ್ಸ್ ಕಪ್ಪು ಕಲೆ, ಕೊಳೆಯನ್ನು ನಿವಾರಿಸುತ್ತೆ. ಓಟ್ಸ್ ಮೀಲ್‌ನಲ್ಲಿ ಮೃತ ಜೀವಕೋಶಗಳನ್ನು ನಿವಾರಿಸುವ ಎಕ್ಸ್‌ಫೋಲಿಯೆಂಟ್ ಗುಣವಿದೆ.
ಒಂದು ಬೌಲ್‌ನಲ್ಲಿ 10 ಚಮಚ ಮೊಸರು ಹಾಗೂ ಓಟ್ಸ್‌ನ್ನು ಬೆರೆಸಿ ಚೆನ್ನಾಗಿ ಮಿಶ್ರ ಮಾಡಬೇಕು. ಇದನ್ನು ಮುಖಕ್ಕೆ ಲೇಪಿಸಿ, ತುದಿ ಬೆರಳುಗಳಿಂದ 5 ನಿಮಿಷ ಮಾಲೀಶು ಮಾಡಬೇಕು. 20 ನಿಮಿಷಗಳ ಬಳಿಕ ನೀರಿನಲ್ಲಿ ತೊಳೆಯಬೇಕು. ಇದೇ ರೀತಿ ಕತ್ತು ಹಾಗೂ ಕೈಗಳಿಗೆ ನಿತ್ಯ ಫೇಸ್‌ಪ್ಯಾಕ್‌ನ ಈ ಮಿಶ್ರಣವನ್ನು ಲೇಪಿಸಿದರೂ ಕೈ ಹಾಗೂ ಕತ್ತು ಗೌರವರ್ಣ ಪಡೆಯುತ್ತವೆ. 3. ಬಾದಾಮಿ ಎಣ್ಣೆ ಮತ್ತು ಬಾಳೆಹಣ್ಣು
ನಸುಗಪ್ಪಾದ ಬಾಳೆಹಣ್ಣನ್ನು ಚೆನ್ನಾಗಿ ಕಿವುಚಿ ಪೇಸ್ಟ್ ತಯಾರಿಸಿ ಅದಕ್ಕೆ ಬಾದಾಮಿ ತೈಲ ಬೆರೆಸಿ ಮಿಶ್ರಣ ತಯಾರಿಸಬೇಕು. ಇದನ್ನು ಮುಖಕ್ಕೆ ಲೇಪಿಸಿ 20 ನಿಮಿಷಗಳ ಬಳಿಕ ತೊಳೆಯಬೇಕು. ಇದರಿಂದ ಗೌರವರ್ಣ ಹಾಗೂ ಮೊಗದ ಕಾಂತಿ ವರ್ಧಿಸುತ್ತದೆ.