Advertisement

ಜಾವೆಲಿನ್‌ ಪ್ರಶಸ್ತಿ ಉಳಿಸಿಕೊಂಡ ಸುಂದರ್‌ ಪ್ಯಾರಾಲಿಂಪಿಕ್ಸ್‌ಗೆ

09:57 AM Nov 12, 2019 | sudhir |

ದುಬಾೖ: ಭುಜದ ನೋವಿನ ಹೊರತಾಗಿಯೂ ವಿಶ್ವ ಪ್ಯಾರಾ ಆ್ಯತ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ಉಳಿಸಿಕೊಂಡ ಸುಂದರ್‌ ಸಿಂಗ್‌ ಗುರ್ಜರ್‌ ಮುಂದಿನ ವರ್ಷದ ಟೋಕಿಯೊ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಅವರು ಪುರುಷರ ಎಫ್46 ವಿಭಾಗದಲ್ಲಿ ಚಿನ್ನದ ಪದಕ ಗೆದ್ದರು.

Advertisement

ಗುರ್ಜರ್‌ ಅವರೊಂದಿಗೆ ಕಂಚು ಗೆದ್ದ ಅಜಿತ್‌ ಸಿಂಗ್‌ ಮತ್ತು ರಿಂಕು ಕೂಡ ಪ್ಯಾರಾಲಿಂಪಿಕ್ಸ್‌ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾದರು.

ಗುರ್ಜರ್‌ ಪ್ರಸಕ್ತ ಋತುವಿನ ಶ್ರೇಷ್ಠ ಸಾಧನೆಯೊಂದಿಗೆ (61.22 ಮೀ.) ಚಿನ್ನಕ್ಕೆ ಕೊರಳೊಡ್ಡಿದರು. ಅಜಿತ್‌ ಸಿಂಗ್‌ 59.46 ಮೀ. ಸಾಧನೆಯೊಂದಿಗೆ ತೃತೀಯ ಸ್ಥಾನಿಯಾದರೆ, ರಿಂಕು 4ನೇ ಸ್ಥಾನ ಪಡೆದರು. ಈ ಕೂಟದಲ್ಲಿ ಭಾರತ ಒಟ್ಟು 2 ಚಿನ್ನ, 1 ಬೆಳ್ಳಿ , 1 ಕಂಚಿನ ಪದಕಮ ಜಯಿಸಿದೆ.

2017ರ ಲಂಡನ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲೂ ಸುಂದರ್‌ ಸಿಂಗ್‌ ಗುರ್ಜರ್‌ ಬಂಗಾರ ಜಯಿಸಿದ್ದರು. ಇದರೊಂದಿಗೆ ಈ ಕೂಟದಲ್ಲಿ ಪ್ರಶಸ್ತಿ ಉಳಿಸಿಕೊಂಡ ಭಾರತದ 2ನೇ ಸಾಧಕನಾಗಿ ಮೂಡಿಬಂದರು. ದೇವೇಂದ್ರ ಜಜಾರಿಯ ಮೊದಲಿಗ. ಅವರು 2013ರ ಲಿನ್‌ ಮತ್ತು 2015ರ ದೋಹಾ ಕೂಟಗಳಲ್ಲಿ ಚಿನ್ನ ಜಯಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next