Advertisement

3ನೇ ರವಿವಾರವೂ ಖಡಕ್‌ ಲಾಕ್‌ಡೌನ್‌

11:09 AM Jul 20, 2020 | Suhan S |

ಬೆಳಗಾವಿ: ಕೋವಿಡ್ ಸೋಂಕು ಹರಡದಂತೆ ತಡೆಯಲು ರಾಜ್ಯ ಸರ್ಕಾರ ಆದೇಶಿಸಿರುವ ಸಂಡೇ ಲಾಕ್‌ಡೌನ್‌ ಮೂರನೇ ರವಿವಾರವೂ ಯಶಸ್ವಿಯಾಗಿದ್ದು, ಇಡೀ ಬೆಳಗಾವಿ ನಗರ ಸೇರಿದಂತೆ ಜಿಲ್ಲೆ ಸಂಪೂರ್ಣವಾಗಿ ಬಂದ್‌ ಆಗಿತ್ತು.

Advertisement

ಲಾಕ್‌ಡೌನ್‌ದಿಂದಾಗಿ ನಗರದ ರಸ್ತೆಗಳು ಜನರಿಲ್ಲದೇ ಬಿಕೋ ಎನ್ನುತ್ತಿದ್ದವು. ಬೆರಳೆಣಿಕೆಯಷ್ಟು ವಾಹನಗಳ ಸಂಚಾರ ಹೊರತುಪಡಿಸಿದರೆ ಯಾವ ವಾಹನಗಳೂ ರಸ್ತೆ ಮೇಲೆ ಓಡಾಡುತ್ತಿರಲಿಲ್ಲ. ಸಿಬಿಟಿ ಹಾಗೂ ಕೇಂದ್ರ ಬಸ್‌ ನಿಲ್ದಾಣ ಸ್ತಬ್ಧವಾಗಿತ್ತು. ನಗರದ ಪ್ರಮುಖ ಮಾರ್ಗಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಚ್ಚಿ ರಸ್ತೆ ಬಂದ್‌ ಮಾಡಲಾಗಿತ್ತು. ಮೂರನೇ ರವಿವಾರವೂ ಲಾಕ್‌ಡೌನ್‌ಗೆ ಜನರಿಂದ ಉತ್ತಮ ಬೆಂಬಲ ವ್ಯಕ್ತವಾಯಿತು. ಆಟೋ ರಿಕ್ಷಾ, ಟ್ಯಾಕ್ಸಿ, ಖಾಸಗಿ ವಾಹನಗಳು, ದ್ವಿಚಕ್ರ ವಾಹನಗಳು ರಸ್ತೆ ಇಳಿಯಲಿಲ್ಲ. ನಗರದ ಜಿಲ್ಲಾಸ್ಪತ್ರೆ ಎದುರು ರೋಗಿಗಳ ಸಂಬಂಧಿಕರು ಅಲ್ಲಲ್ಲಿ ಕಾಣ ಸಿಗುತ್ತಿದ್ದರು. ಉಳಿದಂತೆ ನಿತ್ಯ ಗಿಜಗಿಡುತ್ತಿದ್ದ ನಗರದ ಎಲ್ಲ ರಸ್ತೆಗಳು ಖಾಲಿ ಖಾಲಿ ಆಗಿದ್ದವು.

ನಗರದ ರವಿವಾರ ಪೇಟೆ, ಪಾಂಗುಳ ಗಲ್ಲಿ, ಖಡೇಬಜಾರ, ಮಾರುತಿ ಗಲ್ಲಿ, ಗಣಪತಿ ಗಲ್ಲಿ, ಕಿರ್ಲೋಸ್ಕರ ರೋಡ್‌, ಬಾಪಟ ಗಲ್ಲಿ, ಬೋಗಾರವೇಸ್‌, ಅನಗೋಳ ಆರ್‌ಪಿಡಿ ರೋಡ್‌, ಶಹಾಪುರ, ಖಾಸಬಾಗ, ವಡಗಾಂವಿ ಸೇರಿದಂತೆ ಅನೇಕ ಪ್ರದೇಶಗಳು ಖಾಲಿ ಖಾಲಿ ಆಗಿದ್ದವು.

ಅಗತ್ಯ ವಸ್ತುಗಳಾದ ಕಿರಾಣಿ, ಔಷ ಧ, ಹಾಲಿನ ಅಂಗಡಿ, ಆಸ್ಪತ್ರೆ ಸೇರಿದಂತೆ ವೈದ್ಯಕೀಯ ಸೇವೆಗೆ ಸಂಬಂಧಿಸಿದ ಅಂಗಡಿಗಳು ಮಾತ್ರ ತೆರೆದಿದ್ದವು. ಅನವಶ್ಯಕವಾಗಿ ತಿರುಗಾಡುತ್ತಿದ್ದ ವಾಹನ ಸವಾರರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next