Advertisement
ವೃಷಭ: ಮನೆಯಲ್ಲಿ ಶುಭಕಾರ್ಯ, ಧರ್ಮ ಕಾರ್ಯಗಳು ನಡೆಯಲಿವೆ. ನಿರುದ್ಯೋಗಿಗಳಿಗೆ ಅನಿರೀಕ್ಷಿತ ಉದ್ಯೋಗ ಲಾಭವಿರುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಹೊಂದಾಣಿಕೆಯ ಅಗತ್ಯ ಕಂಡುಬರುವುದು. ಸಾಮಾಜಿಕ ರಂಗದಲ್ಲಿ ಹೊಸಬರಿಂದ ಸಹಾಯ ದೊರೆಯುವುದು. ಮಿಥುನ: ಕಾರ್ಯಕ್ಷೇತ್ರದಲ್ಲಿ ಅತ್ಯಂತ ಮಹತ್ವಪೂರ್ಣ ಹಾಗೂ ಸಂತೋಷದ ಕಾಲವೆನ್ನಬಹುದು. ವ್ಯಾಪಾರ ವ್ಯವಹಾರಗಳು ವಾಸ್ತವ ರೂಪ ತಳೆದು ಅನಿರೀಕ್ಷಿತವಾಗಿ ಸಂತೋಷದ ಸುದ್ದ ಬಂದರೂ ಇದಕ್ಕೆ ನಿಮ್ಮ ಆತ್ಮವಿಶ್ವಾಸ ಹಾಗೂ ಶ್ರಮವೇ ಕಾರಣ.
Related Articles
Advertisement
ತುಲಾ: ವೈಯಕ್ತಿಕವಾಗಿ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸಿರಿ. ವಿದ್ಯಾರ್ಥಿ ವರ್ಗಕ್ಕೆ ಯಶಸ್ಸು ದೊರಕಲಿದೆ. ನಿಮ್ಮ ಇಷ್ಟಾರ್ಥ ಸಿದ್ಧಿಸಲಿದೆ. ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸಿರಿ. ಯಶಸ್ಸು ನಿಮ್ಮದಾಗಲಿದೆ.
ವೃಶ್ಚಿಕ: ನೀವು ಕೈಗೊಳ್ಳುವ ನಿರ್ಧಾರದ ಪ್ರಭಾವ ಇಡೀ ನಿಮ್ಮ ಜೀವನವನ್ನು ಸುದಾರಿಸಲಿದೆ. ಸಾಮಾಜಿಕವಾಗಿ ಸ್ಥಾನ ಮಾನ, ಗೌರವ ಹೆಚ್ಚುವುದು. ಆರ್ಥಿಕ ವಿಚಾರದಲ್ಲಿ ಆಗಾಗ ಧನವ್ಯಯ ತೋರಿಬಂದರೂ ಉತ್ತಮ ಧನಾಗಮನವಿರುವುದು.
ಧನು: ಬದಲಾವಣೆಯನ್ನು ನೀವು ಅಪೇಕ್ಷಿಸುವುದಾದಲ್ಲಿ ಇದು ಸರಿಯಾದ ಸಮಯವಾಗಿರುತ್ತದೆ. ದೈವಾನುಗ್ರಹದಿಂದ ಕೆಲಸ ಕಾರ್ಯಗಳು ಸರಾಗವಾಗಿ ನಡೆಯಲಿವೆ. ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿಗಾಗಿ ಯೋಜನೆಯನ್ನು ರೂಪಿಸಿರಿ.
ಮಕರ: ನಿಮ್ಮ ವ್ಯವಹಾರ ಕುಶಲತೆಗೆ ಒಳ್ಳೆಯ ಬೆಲೆ ಸಿಗಲಿದೆ. ಸಾಮಾಜಿಕವಾಗಿ ಗೌರವ ಸಂಪಾದಿಸಲಿದ್ದೀರಿ. ಕೌಟುಂಬಿಕವಾಗಿ ಹಿಂದಿನದನ್ನು ಮರೆತು ರಾಜಿ ಮಾಡಿಕೊಳ್ಳಬೇಕಾದೀತು. ವ್ಯಾಪಾರದಲ್ಲಿ ಅಭಿವೃದ್ಧಿಯಿಂದ ಉನ್ನತಿ ಕಂಡುಬರಲಿದೆ.
ಕುಂಭ: ದೂರ ಪ್ರಯಾಣದ ಅವಕಾಶಗಳು ಎದುರಾದಾಗ ಅವುಗಳ ಸದುಪಯೋಗ ಮಾಡಿಕೊಳ್ಳಿರಿ. ಕಾರ್ಯಕ್ಷೇತ್ರದಲ್ಲಿ ದೃಢ ನಿರ್ಧಾರದಿಂದ ಮುಂದುವರಿಯಿರಿ. ಪ್ರಯತ್ನಬಲಕ್ಕೆ ತಕ್ಕುದಾದ ಫಲ ಸಿಗಲಿದೆ. ಸಾಮಾಜಿಕವಾಗಿ ಸ್ಥಾನಮಾನ ಲಭ್ಯ.
ಮೀನ: ಕೆಲವೊಮ್ಮೆ ಕುಟುಂಬದಲ್ಲಿ ಅನಾರೋಗ್ಯದ ಸಂಭವ ಇರುವುದರಿಂದ ಆದಷ್ಟು ಕಾಳಜಿಯ ಅಗತ್ಯವಿರುತ್ತದೆ. ದೂರ ಪ್ರವಾಸದ ಸಾಧ್ಯತೆ ಇದ್ದು ಕಾರ್ಯಾನುಕೂಲವಾದೀತು. ವೃತ್ತಿರಂಗದಲ್ಲಿ ಆತುರತೆ ಸಲ್ಲದು. ಮುನ್ನಡೆಯಿರಿ.