Advertisement
ವಾಯವ್ಯ ಭಾಗದಲ್ಲಿ 2010ರಲ್ಲಿ 35.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುವ ಮೂಲಕ, 1973ರಲ್ಲಿ ಈ ಪ್ರಾಂತದಲ್ಲಿ ದಾಖಲಾಗಿದ್ದ 37.5 ಡಿಗ್ರಿ ಸೆಲ್ಸಿಯಸ್‌ನ ದಾಖಲೆಯನ್ನು ಮುರಿದಿತ್ತು. ಈಗ ಈ ಪ್ರಾಂತ್ಯದಲ್ಲಿ 45 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ದಾಖಲಾಗುತ್ತಿದ್ದು ಹಿಂದಿನ ಎಲ್ಲ ದಾಖಲೆಗಳನ್ನು ಮುರಿದಿದೆ. ದೇಶದ ವಾಯವ್ಯ ಹಾಗೂ ಮಧ್ಯಭಾಗ ಗಳಲ್ಲಿ ಇನ್ನೂ ಕೆಲವು ದಿನ ಬಿಸಿಲ ಝಳ ಹೀಗೆಯೇ ಮುಂದುವರಿಯುವ ಸಾಧ್ಯತೆಗಳಿವೆ ಎಂದು ಭಾರ ತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
Related Articles
Advertisement
ಇದಲ್ಲದೆ ಬಿಸಿಲಿನ ಧಗೆಯಿಂದಾಗಿ ಎಪ್ರಿಲ್ ತಿಂಗ ಳಲ್ಲಿ ಅಸ್ಸಾಂನ ಅಲ್ಲಲ್ಲಿ ಸುರಿದ ಮಳೆಯ ಪರಿಣಾಮ, ಒಟ್ಟು 18 ಮಂದಿ ಸಾವನ್ನಪ್ಪಿದ್ದಾರೆ. ಹಲವಾರು ಮನೆ ಗಳು, ಕಟ್ಟಡಗಳಿಗೆ ಹಾನಿಯಾಗಿದೆ.
ಬಂಗಾಲ ಕೊಲ್ಲಿಯಲ್ಲಿ ಚಂಡಮಾರುತ?: ಪಶ್ಚಿಮ ಬಂಗಾಲದಲ್ಲಿ ಬೀಸುತ್ತಿದ್ದ ಗಾಳಿಯು ಉಷ್ಣ ಹವಾ ಮಾನದ ಪರಿಣಾಮ ತನ್ನ ಪಥವನ್ನು ಬದಲಿಸಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ಇದರಿಂ ದಾಗಿ ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತ ವಾಗಿ ಚಂಡಮಾರುತ ಏಳುವ ಸಾಧ್ಯತೆಗಳು ದಟ್ಟವಾ ಗಿವೆ. ಹಾಗಾಗಿ ಈ ಇಡೀ ವಿದ್ಯಮಾನವನ್ನು ಕೂಲಂ ಕಷವಾಗಿ ಗಮನಿಸಲಾಗುತ್ತಿದೆ ಎಂದು ತಜ್ಞರು ಹೇಳಿದ್ದಾರೆ.
ಈಶಾನ್ಯದಲ್ಲಿ ಧಾರಾಕಾರ ಮಳೆ ಸಾಧ್ಯತೆ: ದೇಶದ ಕೇಂದ್ರ ಭಾಗದಲ್ಲಿನ ಉಷ್ಣ ಹವೆಯಿಂದಾಗಿ ಹಾಗೂ ಹಲವಾರು ಕಡೆ ಬಿಸಿಲ ಧಗೆ ಆವರಿಸಿರುವ ಪರಿಣಾಮದಿಂದಾಗಿ ಈಶಾನ್ಯ ರಾಜ್ಯಗಳಲ್ಲಿ ಮಳೆ ಸುರಿಯಬಹುದು ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಅರುಣಾಚಲ ಪ್ರದೇಶ, ಪಶ್ಚಿಮ ಬಂಗಾಲದ ಹಿಮಾಲಯ ಪರ್ವತಗಳಿಗೆ ಹತ್ತಿರ ವಾಗಿರುವ ಪ್ರಾಂತಗಳು, ಸಿಕ್ಕಿಂನಲ್ಲಿ ಸೋಮ ವಾರದಂದು ಮಳೆ ಸುರಿಯುವ ಸಾಧ್ಯತೆಗಳಿವೆ. ಅಸ್ಸಾಂ, ಮೇಘಾಲಯದಲ್ಲಿ ಸೋಮವಾರ ಹಾಗೂ ಬುಧವಾರದಂದು; ನಾಗಾಲ್ಯಾಂಡ್, ಮಣಿಪುರ, ಮಿಜೋರಂ ಹಾಗೂ ತ್ರಿಪುರಾದಲ್ಲಿ ಬುಧವಾರದಂದು ವ್ಯಾಪಕವಾಗಿ ಮಳೆ ಬೀಳುವ ಸಾಧ್ಯತೆಗಳಿವೆ ಎಂದು ಇಲಾಖೆ ತಿಳಿಸಿದೆ.
ಕೇಂದ್ರದಿಂದ ಮಾರ್ಗಸೂಚಿದೇಶಾದ್ಯಂತ ಉಷ್ಣ ಹವೆ ಆವರಿಸಿರುವ ಹಿನ್ನೆಲೆಯಲ್ಲಿ ದೇಶದ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರಕಾರ, “ಉಷ್ಣ ಸಂಬಂಧಿತ ಅನಾರೋಗ್ಯ ಕುರಿತಾದ ರಾಷ್ಟ್ರೀಯ ಕಾರ್ಯಸೂಚಿ’ಯನ್ನು ರವಾನಿಸಿದ್ದು, ಕೆಲವು ಸೂಚನೆಗಳು ಹಾಗೂ ಕೈಗೊಳ್ಳಬೇಕಾದ ಮುನ್ನೆಚ್ಚರಿಕ ಕ್ರಮಗಳನ್ನು ತಿಳಿಸಿದೆ. ಇಂಟಗ್ರೇಟೆಡ್ ಡಿಸೀಸ್ ಸರ್ವೈಯಲನ್ಸ್ ಪ್ರೋಗ್ರಾಂ (ಐಡಿಎಸ್‌ಪಿ) ಯೋಜನೆಯಡಿ ಪ್ರತಿದಿನ ಸರ್ವೇ ಮೂಲಕ ಉಷ್ಣದಿಂದ ಅನಾರೋಗ್ಯಕ್ಕೀಡಾದ ಜನರನ್ನು ಪತ್ತೆ ಮಾಡಬೇಕು. ಇದರ ವರದಿಯನ್ನು ಪ್ರತಿದಿನವೂ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರಕ್ಕೆ (ಎನ್‌ಸಿಡಿಸಿ) ರವಾನಿಸಬೇಕು. ಎರಡು-ಮೂರು ದಿನಗಳವರೆಗಿನ ಉಷ್ಣಹವೆಯ ಸ್ಥಿತಿಗತಿಗಳ ಬಗ್ಗೆ ಪ್ರತಿದಿನವೂ ಭಾರತೀಯ ಹವಾಮಾನ ಇಲಾಖೆ, ಎನ್‌ಸಿಡಿಸಿ ನೀಡುವ ಮಾಹಿತಿಯನ್ನು ಜಿಲ್ಲಾ ಮಟ್ಟದ ಆಸ್ಪತ್ರೆಗಳಿಗೆ ರವಾನಿಸಬೇಕು.